More

    ವೈಜ್ಞಾನಿಕ, ವಾಸ್ತವಿಕ ದೃಷ್ಟಿಕೋನ ಬೆಳೆಸಿಕೊಳ್ಳಿ

    ರಾಯಚೂರು: ಪ್ರತಿಯೊಂದು ವಸ್ತು, ಸಂಗತಿಗಳಿಗೂ ತನ್ನದೇ ಆದ ಅಸ್ತಿತ್ವ ಹಾಗೂ ಆದಿ ಅಂತ್ಯಗಳಿವೆ. ಪ್ರತಿಯೊಂದನ್ನು ನಾವು ವೈಜ್ಞಾನಿಕ ಹಾಗೂ ವಾಸ್ತವಿಕ ದೃಷ್ಟಿಕೋನದಿಂದ ನೋಡಬೇಕು ಎಂದು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ.ಬಿ.ರಮೇಶಬಾಬು ಹೇಳಿದರು.
    ನಗರದ ಹೊರವಲಯದ ರಾಯಚೂರು ವಿವಿಯಲ್ಲಿ ಅಂಬೇಡ್ಕರ್ ಜಯಂತಿ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮವಿಲ್ಲದ ವಿಜ್ಞಾನ ಮತ್ತು ವಿಜ್ಞಾನವಿಲ್ಲದ ಧರ್ಮ ಎರಡೂ ನಿರುಪಯುಕ್ತ ಎಂದರು.
    ವಿಶ್ವದಲ್ಲಿ ಎಷ್ಟೇ ಶ್ರೇಷ್ಠ ಸಂವಿಧಾನವಿರಲಿ ಅದರ ಯಶಸ್ಸು ಅಡಗಿರುವುದು ದೇಶವನ್ನು ನಡೆಸುವ ಆಡಳಿತಗಾರರ ಮೇಲೆ ಎಂದು ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಸೂಕ್ಷ್ಮವಾದ ಸಂದೇಶವನ್ನು ನಮಗೆ ನೀಡಿದ್ದಾರೆ. ನಾವು ಸಂವಿಧಾನ ರಕ್ಷಿಸುವ ಬದಲು ಸ್ವಾರ್ಥಪರ, ಭ್ರಷ್ಟರಿಗೆ ಮತ ಹಾಕುತ್ತಿರುವುದರಿಂದ ನಾವು ಹಿಂದುಳಿಯಲು ಕಾರಣವಾಗಿದೆ ಎಂದು ಹೇಳಿದರು.
    ಕುಲಸಚಿವ ಪ್ರೊಎಂ.ವಿಶ್ವನಾಥ ಮಾತನಾಡಿ, ದೇಶದಲ್ಲಿನ ಸಾಮಾಜಿಕ ತಾರತಮ್ಯದ ವಿರುದ್ಧ ನಿರಂತರ ಹೋರಾಟ ನಡೆಸಿದ ಅಂಬೇಡ್ಕರ್ ತುಳಿತಕ್ಕೊಳಗಾದ ಜಾತಿಗಳ ಹಕ್ಕುಗಳ ಪ್ರತಿಪಾದನೆ ಮತ್ತು ಸಾಮಾಜಿಕ ಸುಧಾರಣೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
    ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಮಾತನಾಡಿ, ಅಂಬೇಡ್ಕರ್ ಶಿಕ್ಷಣವನ್ನು ಪರಿವರ್ತನೆಯ ಸಾಧನವಾಗಿ ತಗೆಗೆದುಕೊಂಡು ಸಾಮಾಜಿಕ ಮತ್ತು ಆರ್ಥಿಕ ವಲಯದಲ್ಲಿ ಬದಲಾವಣೆ ತರಲು ಶಿಕ್ಷಣ ಎಷ್ಟು ಮಹತ್ವದ್ದು ಎನ್ನುವುದನ್ನು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ವೌಲ್ಯಮಾಪನ ಕುಲಸಚಿವ ಪ್ರೊ.ಎಂ.ಯರ‌್ರಿಸ್ವಾಮಿ, ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ.ಎ.ಆರ್.ಪುರವಂತ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೊ.ಪಿ.ಭಾಸ್ಕರ್, ಡಾ.ಜಿ.ಎಸ್.ಬಿರಾದರ್ ಹಾಗೂ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts