More

    ಕಾಂಗ್ರೆಸ್​ಗಾಗಿ ನನ್ನ ಪ್ರಾಣವನ್ನೇ ತೆತ್ತಿದ್ದೇನೆ: ಮಾಜಿ ಪ್ರಧಾನಿ ದೇವೇಗೌಡ

    ಹಾಸನ: ಮುಂದಿನ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆ ಆರಂಭಿಸಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಟಕ್ಕರ್​ ಕೊಡಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ತಾವು ಚುನಾವಣೆಗೆ ಸ್ಫರ್ಧಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಘೋಷಿಸಿದ್ದಾರೆ.

    ಹಾಸನ ಜಿಲ್ಲೆ ಬೇಲೂರು ವಿಧಾನಸಭೆ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಚ್​ಡಿಡಿ, ಕೆಲವರು ದೇವೇಗೌಡರು ನಿಲ್ಲಬೇಕು ಅಂತಾರೆ.ಆದ್ರೆ, ನಾನು ಈಗಾಗಲೆ ಹೇಳಿದ್ದು, ಎಲ್ಲೂ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ವೀಲ್​​ಚೇರ್​ನಲ್ಲಿ ಬಂದು ಚನ್ನಕೇಶವನ ದರ್ಶನ ಪಡೆದಿದ್ದೇನೆ. ನಿಮ್ಮ ಇಷ್ಡು ವರ್ಷದ ರಾಜಕೀಯ ಜೀವನದಲ್ಲಿ ಜಾತ್ಯಾತೀತ ತತ್ವದಡಿ ಕೆಲಸ ಮಾಡಿದ್ರಿ. ಆದರೆ ಕೊನೆಯ ಘಟ್ಟದಲ್ಲಿ ಯಾಕೆ ಮಾರ್ಪಾಡು ಅಂತಾ ಕೇಳ್ತಾರೆ. ಹೌದು ಮಾರ್ಪಾಡು ಮಾಡಿದ್ದೇನೆ. ನಾನು ಮೊಮ್ಮಗನ ಗೆಲ್ಲಿಸಿ ಅಂತಾ ಬಂದಿಲ್ಲ. ಈ ಜಿಲ್ಲೆಯ ಅಭಿವೃದ್ಧಿಗಾಗಿ ಬಂದಿದ್ದೇನೆ. ದೇವೇಗೌಡರು ಮತ್ತು ಅವರ ಮಕ್ಕಳು ಯಾರಿಗೆ ಅನ್ಯಾಯ ಮಾಡಿದ್ದೇವೆ ಹೇಳಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    HD Devegowda

    ಇದನ್ನೂ ಓದಿ: ಭಾರತ-ಅಫ್ಘಾನಿಸ್ತಾನ ಟಿ-20 ಪಂದ್ಯ; ಅಂಪೈರ್​ ನಿರ್ಧಾರಕ್ಕೆ ಹಿಟ್​ಮ್ಯಾನ್​ ಕೊಟ್ಟ ರಿಯಾಕ್ಷನ್​ ವೈರಲ್​

    ನಮ್ಮ ಕುಟುಂಬ ಯಾರಿಗೂ ಅನ್ಯಾಯ ಮಾಡಿಲ್ಲ. ನಾವು ರೈತರ ಮಕ್ಕಳು. ನಿಮ್ಮನ್ನು ಬಿಟ್ಟು ಎಲ್ಲೂ ಹೋಗಲ್ಲ. ನಾನು ಇಲ್ಲಿಗೆ ಸಭೆ ನಿಲ್ಲಿಸುವುದಿಲ್ಲ. ಪ್ರತಿ ತಾಲೂಕಿಗೂ ಬರುತ್ತೇನೆ. ಎರಡೆರಡು ಬಾರಿ ನಿಮ್ಮ ರಕ್ಷಣೆಗೆ ನನ್ನ ಶರೀರ ತ್ಯಾಗ ಮಾಡಿದ್ದೇನೆ. ಯಾರೂ ಕೆಟ್ಟ ಅಪಪ್ರಚಾರಗಳಿಗೆ ಮಾರುಹೋಗದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣನನ್ನು ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

    ಈ ದೇಶದಲ್ಲಿ ಕಾಂಗ್ರೆಸ್​ಗಾಗಿ ನನ್ನ ಪ್ರಾಣವನ್ನೇ ತೆತ್ತಿದ್ದೇನೆ. ನಾವು ಯಾರಿಗೆ ಅನ್ಯಾಯ ಮಾಡಿದ್ದೇವೆ ಸತ್ಯ ಹೇಳಿ. ನಾವು ಯಾರನ್ನು ಬಿಟ್ಟುಕೊಡುವುದಿಲ್ಲ. ನನ್ನ ಅಣ್ಣ ತಮ್ಮಂದಿರು ಮುಸ್ಲಿಂ ಬಾಂಧವರು. ನಿಮ್ಮ‌ರಕ್ಷಣೆಗಾಗಿ ಈ ದೇಹ ಸವೆಸಿದ್ದೇನೆ. ಈ ದೇಶದ ನೂರು ಕೋಟಿ ಜನರಿಗೆ ನಾಯಕತ್ವ ಕೊಡುವ ವ್ಯಕ್ತಿತ್ವ ಇರೋದು ಮೋದಿಗೆ ಮಾತ್ರ. ಕಾಂಗ್ರೆಸ್ ಬಗ್ಗೆ ನಾನು ಬಹಳ ಮಾತನಾಡಬಲ್ಲೇ ಕೆಟ್ಟ ಅಪಪ್ರಚಾರಕ್ಕೆ ಮಾರು ಹೋಗಬೇಡಿ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ವಿನಂತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts