More

    ಮೊಮ್ಮಗ ಪ್ರಜ್ವಲ್ ರೇವಣ್ಣ ಗೆಲುವಿಗಾಗಿ, ಹಾಸನದಲ್ಲೇ ಠಿಕಾಣಿ ಹೂಡಿದ ದೇವೇಗೌಡರು

    ಬೆಂಗಳೂರು:
    ಮೊಮ್ಮೊಗ ಪ್ರಜ್ವಲ್ ರೇವಣ್ಣ ಅವರ ಗೆಲುವಿಗಾಗಿ ಕಂಕಣ ತೊಟ್ಟಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನದಲ್ಲಿಯೇ ಠಿಕಾಣಿ ಹೂಡಿದ್ದು, ಪ್ರಚಾರ ನಡೆಸುತ್ತಿದ್ದಾರೆ.
    ನಾನಾ ಕಾರಣಕ್ಕೆ ಒಡೆದ ಮನೆಯಂತಾಗಿದ್ದ ಜೆಡಿಎಸ್‌ನ್ನು ತನ್ನ ತವರು ಜಿಲ್ಲೆಯಲ್ಲಿಯೇ ಸರಿಪಡಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಗೌಡರು, ಅದಕ್ಕಾಗಿಯೇ ಅಲ್ಲಿಯೇ ನೆಲೆ ನಿಂತು ಎಲ್ಲಾ ತಾಲೂಕುಗಳಿಗೂ ಭೇಟಿ ನೀಡಿ ಸಭೆಗಳನ್ನು ನಡೆಸುತ್ತಿದ್ದಾರೆ.
    ಹಾಸನದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರಿಗೆ ಪಕ್ಷದೊಳಗೇ ಸಾಕಷ್ಟು ವಿರೋಧಗಳು ಎದುರಾದ ಹಿನ್ನೆಲೆಯಲ್ಲಿಯೂ ಗೌಡರು ಈ ಮುಂಜಾಗ್ರತೆ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
    ನಾಲ್ಕಾರು ಬಾರಿ ಮಾಡಿಸಿರುವ ಸರ್ವೆಯಲ್ಲಿಯೂ ಕಠಿಣ ಪೈಪೋಟಿ ಇದೆ ಎನ್ನುವ ಮಾಹಿತಿಯೇ ಹೊರ ಬಿದ್ದಿದೆ. ಆದ್ದರರಿಂದ ಮೊದಲು ಜಿಲ್ಲೆಯಲ್ಲಿ ಜೆಡಿಎಸ್ ನೆಲೆಯನ್ನು ಗಟ್ಟಿಯಾಗಿ ಉಳಿಸಿಕೊಳ್ಳಬೇಕು ಎಂದು ನಿರ್ಣಯಿಸಿರುವ ಗೌಡರು ಅದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
    ತಮ್ಮ ಕುಟುಂಬದ ಸಂಪ್ರದಾಯಿಕ ಎದುರಾಳಿಯಾಗಿರುವ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಾರಣ ಗೌಡರು, ಈ ಚುನಾವಣೆಯನ್ನು ಲಘುವಾಗಿ ಪರಿಗಣಿಸುತ್ತಿಲ್ಲ ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.
    ವಿಧಾನಸಭೆ ಚುನಾವಣೆ ಮತ್ತು ಆ ಬಳಿಕ ನಡೆದಿರುವ ನಾನಾ ಬೆಳವಣಿಗೆ ಕಾರಣದಿಂದ ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಅಸ್ಥಿತ್ವದ ಪ್ರಶ್ನೆ ಎದುರಾಗಿದೆ. ಗೌಡರ ಟೀಂನಲ್ಲಿ ಸ್ಟ್ರಾಂಗ್ ಆಗಿದ್ದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಳಿಕ ಜೆಡಿಎಸ್‌ಗೆ ರಾಜಕೀಯವಾಗಿ ಪೆಟ್ಟು ನೀಡುತ್ತಲೇ ಬಂದಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಾಥ್ ನೀಡಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಇನ್ನಷ್ಟು ಹಿನ್ನೆಡೆ ಆಗುವುದನ್ನು ತಪ್ಪಿಸಲು ಹಲವು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಚುನಾವಣೆಯಲ್ಲಿ ಮೊಮ್ಮೊಗನ ಗೆಲುವಿನ ಮೂಲಕ ಪಕ್ಷವನ್ನು ಅಲ್ಲಿ ಭದ್ರವಾಗಿ ಉಳಿಸಿಕೊಳ್ಳುವುದು ಕೂಡ ದೊಡ್ಡ ಗೌಡರಿಗೆ ಸವಾಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts