More

    ವಿಜಯವಾಣಿ ಸಂದರ್ಶನ | ಹೊಸ ವರ್ಷದ ಹೊಸ ಜವಾಬ್ದಾರಿಗೆ ಸಜ್ಜಾಗಿರುವೆ, ದೇವದತ್ ಪಡಿಕಲ್ ವಿಶ್ವಾಸ

    | ರಘುನಾಥ್ ಡಿ.ಪಿ. ಬೆಂಗಳೂರು

    ರ್ನಾಟಕ ತಂಡದಲ್ಲಿರುವ ನನ್ನ ಜವಾಬ್ದಾರಿ ಬಗ್ಗೆ ಅರಿವಿದೆ. ಎರಡನೇ ವರ್ಷ ರಾಜ್ಯ ತಂಡಕ್ಕಾಗಿ ಆಡಲು ಸಿದ್ಧವಾಗಿದ್ದೇನೆ. ಹಿರಿಯರಾದ ಕೆಎಲ್ ರಾಹುಲ್, ಮನೀಷ್ ಪಾಂಡೆ, ಮಯಾಂಕ್ ಅಗರ್ವಾಲ್ ಅನುಪಸ್ಥಿತಿಯಲ್ಲಿ ಹೊಸ ವರ್ಷದಲ್ಲೂ ಉತ್ತಮ ನಿರ್ವಹಣೆ ತೋರುವ ವಿಶ್ವಾಸವಿದೆ ಎಂದು ಯುವ ಆಟಗಾರ ದೇವದತ್ ಪಡಿಕಲ್ ಹೇಳಿದ್ದಾರೆ.

    ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯೊಂದಿಗೆ ಜನವರಿ 10ರಂದು ಆರಂಭಗೊಳ್ಳಲಿರುವ ದೇಶೀಯ ಕ್ರಿಕೆಟ್ ಋತುವಿನ ಸಿದ್ಧತೆ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಪಡಿಕಲ್, ರಾಜ್ಯ ಸೀನಿಯರ್ ತಂಡದಲ್ಲಿ ನನಗೆ ಇದು ಎರಡನೇ ವರ್ಷ. ತಂಡಕ್ಕೆ ನೆರವಾಗುವುದೇ ನನ್ನ ಜವಾಬ್ದಾರಿ’ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: PHOTO | 2020ಕ್ಕೆ ಬೆನ್ನು ತೋರಿಸಿದ ಕ್ರಿಕೆಟರ್ ವೇದಾ, ಗಮನಸೆಳೆದ ಟ್ಯಾಟೂ!

    ಕಳೆದ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಪಡಿಕಲ್, 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಯುಎಇಯಲ್ಲಿ ನಡೆದ ಲೀಗ್‌ನಲ್ಲಿ ಆಡಿದ 15 ಪಂದ್ಯಗಳಿಂದ 5 ಅರ್ಧಶತಕ ಸೇರಿದಂತೆ 473 ರನ್ ಕಲೆಹಾಕಿದ್ದರು. ವಿಶ್ವ ಕ್ರಿಕೆಟ್‌ನ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್‌ರಂಥ ಘಟಾನುಘಟಿಗಳಿಂದ ಸೈ ಎನಿಸಿಕೊಂಡಿದ್ದಾರೆ. ಆರನ್ ಫಿಂಚ್ ಜತೆಗೂಡಿ ಇನಿಂಗ್ಸ್ ಆರಂಭಿಸಿದ ಪಡಿಕಲ್, 5 ಅರ್ಧಶತಕ ಸಿಡಿಸಿ ಐಪಿಎಲ್‌ನಲ್ಲಿ ಗಮನಸೆಳೆದಿದ್ದರು. ತಂಡದ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಸತತ ಎರಡನೇ ಬಾರಿಯೂ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟಿಂಗ್ ಜವಾಬ್ದಾರಿ ಹೊರಲು 20 ವರ್ಷದ ದೇವದತ್ ಪಡಿಕಲ್ ಸಜ್ಜಾಗಿದ್ದಾರೆ.

    ‘ಕಳೆದ ಆವೃತ್ತಿಯಲ್ಲೂ ರಾಹುಲ್, ಮಯಾಂಕ್, ಮನೀಷ್ ಕೆಲ ಪಂದ್ಯಗಳಿಗೆ ಲಭ್ಯವಿರಲಿಲ್ಲ. ಈ ವೇಳೆ ಆರಂಭಿಕನಾಗಿ ಸಮರ್ಥವಾಗಿ ನನ್ನ ಜವಾಬ್ದಾರಿ ನಿಭಾಯಿಸಿದ್ದೆ. ಈ ಬಾರಿಯೂ ಅದೇ ರೀತಿ ಜವಾಬ್ದಾರಿ ಹೊತ್ತುಕೊಳ್ಳುವೆ’ ಎಂದು ಹೇಳುತ್ತಾರೆ ಪಡಿಕಲ್. ಐಪಿಎಲ್‌ನಲ್ಲಿ ಸ್ಟಾರ್ ಕ್ರಿಕೆಟಿಗರೊಂದಿಗ ಡಗೌಟ್ ಹಂಚಿಕೊಂಡಿದ್ದು ನೆರವಿಗೆ ಬಂತು, ಹಿರಿಯ ಆಟಗಾರರ ಮಾರ್ಗದರ್ಶನ ನೆರವಾಗಿದೆ. ಇದು ಕೂಡ ಐಪಿಎಲ್‌ನಲ್ಲಿ ಉತ್ತಮ ನಿರ್ವಹಣೆ ತೋರಲು ಪ್ರಮುಖ ಕಾರಣ ಎಂದಿದ್ದಾರೆ. ಕೇವಲ ಮೈದಾನದಲ್ಲಷ್ಟೇ ಅಲ್ಲ, ಮೈದಾನದ ಹೊರಗೂ ಅಗತ್ಯ ಸಲಹೆ-ನಿರ್ದೇಶನ ನೀಡುತ್ತಿದ್ದರು. ಈ ಎರಡು ತಿಂಗಳು ಸಾಕಷ್ಟು ಕಲಿತೆ, ಕ್ರಿಕೆಟ್‌ನಲ್ಲಿ ಕಲಿಯುವುದು ಸಾಕಷ್ಟಿದೆ ಎಂದು ಕೂಡ ಅನಿಸಿತು ಎಂದು ಹೇಳಿದರು.

    ಇದನ್ನೂ ಓದಿ: ಐಸಿಸಿಯಿಂದ ಟಿಕ್‌ಟಾಕ್ ಪ್ರಶಸ್ತಿ ಗೆದ್ದ ವಾರ್ನರ್! ಚಾಹಲ್‌ಗೂ ಪಾಲು ಕೊಡ್ತಾರಂತೆ!

    ಪ್ರಶಸ್ತಿ ಉಳಿಸಿಕೊಳ್ಳುವ ಗುರಿ
    ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಭರವಸೆ ಇದ್ದು, ತಂಡದ ಎಲ್ಲ ಆಟಗಾರರು ಅವರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರೆ ಗೆಲುವು ಕಷ್ಟವಾಗುವುದಿಲ್ಲ ಎಂದು ಪಡಿಕಲ್ ಹೇಳಿದ್ದಾರೆ. ಕಳೆದ ಬಾರಿ ಆಡಿದ ಬಹುತೇಕ ಆಟಗಾರರೇ ಈ ಬಾರಿಯೂ ತಂಡದಲ್ಲಿದ್ದಾರೆ. ಕೆಲ ಹೊಸ ಆಟಗಾರರೂ ಇದ್ದಾರೆ. ತಂಡ ಬಲಿಷ್ಠವಾಗಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕವೇ ೇವರಿಟ್ ಎಂದರು. ಇತ್ತೀಚಿನ ವರ್ಷಗಳಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ತಂಡದ ಮೇಲೆ ನಿರೀಕ್ಷೆಗಳು ಜಾಸ್ತಿಯಿದ್ದು, ಅದಕ್ಕೆ ತಕ್ಕಂತೆ ಆಡಬೇಕಿರುವುದು ನಮ್ಮೆಲ್ಲರ ಕರ್ತವ್ಯ ಕೂಡ ಎಂದರು.

    ಒತ್ತಡ ಪರಿಸ್ಥಿತಿ ನಿಭಾಯಿಸುವೆ
    ಒತ್ತಡದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ಮಾತನಾಡಿದ ಪಡಿಕಲ್, ಒತ್ತಡದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನನ್ನ ಆಟವನ್ನು ನಾನು ತೋರಬೇಕಷ್ಟೇ. ಆಗ ನನ್ನ ನಿರ್ವಹಣೆ ಬಗ್ಗೆ ಭರವಸೆ ಮೂಡುತ್ತದೆ ಎಂದು ತಿಳಿಸಿದರು. ಫಿಟ್ನೆಸ್ ಬಗ್ಗೆ ಯಾವುದೇ ವಿಶೇಷ ಒತ್ತು ನೀಡುತ್ತಿಲ್ಲ. ದೈನಂದಿನ ದೈಹಿಕ ಕಸರತ್ತುಗಳಿಗಷ್ಟೇ ಗಮನಹರಿಸುತ್ತಿರುವೆ ಎಂದು ಪಡಿಕಲ್ ಹೇಳಿದ್ದಾರೆ.

    ಇದನ್ನೂ ಓದಿ: ಬಿಜೆಪಿಗೆ ಸೇರ್ಪಡೆಗೊಂಡ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್

    2019-20ರಲ್ಲಿ ಪಡಿಕಲ್ ರನ್‌ಪ್ರವಾಹ
    *ವಿಜಯ್ ಹಜಾರೆ ಟ್ರೋಫಿ ಏಕದಿನ: ಪಂದ್ಯ: 11, ರನ್: 609, 100/50: 2/5, ಸರಾಸರಿ: 67.66, ಗರಿಷ್ಠ: 103*.
    *ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20: ಪಂದ್ಯ: 12, ರನ್: 580, 100/50: 1/5, ಸರಾಸರಿ: 64.44, ಗರಿಷ್ಠ: 122*.
    *ರಣಜಿ ಟ್ರೋಫಿ: ಪಂದ್ಯ: 10, ರನ್: 649, ಅರ್ಧಶತಕ: 7, ಸರಾಸರಿ: 40.56, ಗರಿಷ್ಠ: 99.
    *ಐಪಿಎಲ್: ಪಂದ್ಯ: 15, ರನ್: 473, ಅರ್ಧಶತಕ: 5, ಸರಾಸರಿ: 31.53, ಗರಿಷ್ಠ: 74.

    ಬೆಂಗಳೂರಿನಲ್ಲಿ ತರಬೇತಿ
    ಬೆಂಗಳೂರಿನ ಕರ್ನಾಟಕ ಇನ್‌ಸ್ಟಿಟ್ಯೂಟ್ ಆ್ ಕ್ರಿಕೆಟ್‌ನಲ್ಲಿ (ಕೆಐಒಸಿ) ಕೋಚ್‌ಗಳಾದ ರ್ಇಾನ್ ಸೇಠ್ ಹಾಗೂ ಮೊಹಮದ್ ಅಜರುದ್ದೀನ್ ಮಾರ್ಗದರ್ಶನದಲ್ಲಿ ಪಡಿಕಲ್ ತರಬೇತಿ ಪಡೆದಿದ್ದಾರೆ. ಕಳೆದ 2 ವರ್ಷಗಳಿಂದ ರಾಜ್ಯ ತಂಡದ ಕಾಯಂ ಸದಸ್ಯರಾಗಿರುವ ಪಡಿಕಲ್, 3 ಮಾದರಿ ಕ್ರಿಕೆಟ್‌ನಿಂದ ಈಗಾಗಲೇ 2 ಸಾವಿರಕ್ಕೂ ಅಧಿಕ ರನ್ ಪೇರಿಸಿದ್ದಾರೆ. ಕೇರಳ ಮೂಲದವರಾದ ಪಡಿಕಲ್ ಕುಟುಂಬ ಹೈದರಾಬಾದ್‌ನಲ್ಲಿ ನೆಲೆಸಿತ್ತು. ಮಗನ ಕ್ರಿಕೆಟ್ ಆಸಕ್ತಿ ಗಮನಿಸಿದ ದೇವದತ್ ತಂದೆ ಬಾಬಾನು ಕುನ್ನೆತ್, ಉತ್ತಮ ತರಬೇತಿ ಕೊಡಿಸುವ ಸಲುವಾಗಿ 10 ವರ್ಷಗಳ ಹಿಂದೆಯೇ ಹೈದರಾಬಾದ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡರು. ತಂದೆಯ ನಿರೀಕ್ಷೆಯನ್ನು ಹುಸಿ ಮಾಡದ ದೇವದತ್, ಕರ್ನಾಟಕದ ವಿವಿಧ ವಯೋಮಿತಿ ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಇಂಜಿನಿಯರಿಂಗ್ ಪದವೀಧರ ಬಾಬಾನು ಸಣ್ಣ ಉದ್ಯಮ ನಡೆಸುತ್ತಿದ್ದಾರೆ. ದೇವದತ್ ತಾಯಿ ಅಂಬಿಲಿ ಪಡಿಕಲ್ ಗೃಹಿಣಿಯಾಗಿದ್ದರೆ, ಅಕ್ಕ ಚಾಂದಿನಿ ಅಂತಿಮ ವರ್ಷದ ಎಲ್‌ಎಲ್‌ಎಂ ಓದುತ್ತಿದ್ದಾರೆ. ದೇವದತ್ ಬೆಂಗಳೂರಿನ ಸೇಂಟ್ ಜೋಸೆಫ್​ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದಾರೆ.

    ಸಮಗ್ರ ನೋಟ 2020| ಕ್ರೀಡೆಗೂ ಕರೊನಾ ಕಾರ್ಮೋಡ

    ಮೆಲ್ಬೋರ್ನ್‌ನಲ್ಲಿ ಜಯದೊಂದಿಗೆ ಹಲವು ದಾಖಲೆಗಳನ್ನು ಬರೆದ ಟೀಮ್ ಇಂಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts