More

    VIDEO | ಆರ್‌ಸಿಬಿಯನ್ನು ಬೆಂಬಲಿಸುತ್ತಿರಿ, ಅಭಿಮಾನಿಗಳಿಗೆ ಕನ್ನಡದಲ್ಲೇ ಮನವಿ ಮಾಡಿದ ಪಡಿಕಲ್

    ಬೆಂಗಳೂರು: ಆರ್‌ಸಿಬಿ ತಂಡದಲ್ಲಿ ಕೆಲ ವರ್ಷಗಳ ಬಳಿಕ ಮತ್ತೆ ಕನ್ನಡದ ಕಂಪು ಕಾಣಿಸಿಕೊಂಡಿದೆ. ಇದಕ್ಕೆ ಕಾರಣವಾಗಿರುವುದು ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್. ಐಪಿಎಲ್ ಪದಾರ್ಪಣೆಯ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಗಮನ ಸೆಳೆದಿರುವ ದೇವದತ್ ಪಡಿಕಲ್, ಆರ್‌ಸಿಬಿ ತಂಡಕ್ಕೆ ಇದೇ ರೀತಿ ಬೆಂಬಲ ನೀಡುತ್ತಿರಿ ಎಂದು ಅಭಿಮಾನಿಗಳಿಗೆ ಕನ್ನಡದಲ್ಲೇ ಮನವಿ ಸಲ್ಲಿಸುವ ಮೂಲಕ ಗಮನಸೆಳೆದಿದ್ದಾರೆ.

    ಸನ್‌ರೈಸರ್ಸ್‌ ವಿರುದ್ಧದ ಮೊದಲ ಪಂದ್ಯದ ಬಳಿಕ ಸ್ಪಿನ್ನರ್ ಯಜುವೇಂದ್ರ ಚಾಹಲ್ ಜತೆಗೆ ತಮ್ಮ ನಿರ್ವಹಣೆಯ ಬಗ್ಗೆ ಮಾತನಾಡಿರುವ ದೇವದತ್ ಪಡಿಕಲ್, ದುಬೈ ಅಂಗಳದಲ್ಲಿ ಕನ್ನಡದಲ್ಲಿ ಮಾತನಾಡಿರುವ ವಿಡಿಯೋವನ್ನು ಐಪಿಎಲ್‌ನ ಟ್ವಿಟರ್ ಪುಟದಲ್ಲಿ ಪ್ರಕಟಿಸಲಾಗಿದೆ.

    ‘ಎಲ್ಲರೂ ಆರ್‌ಸಿಬಿ ತಂಡಕ್ಕೆ ಬೆಂಬಲ ನೀಡುತ್ತಿರಿ. ಮೊದಲ ಪಂದ್ಯ ತುಂಬ ಚೆನ್ನಾಗಿತ್ತು. ನೀವು ಬೆಂಬಲ ನೀಡುತ್ತ ಇರಿ. ನಾವು ಹೀಗೆಯೇ ಆಡುತ್ತ ಇರುತ್ತೇವೆ’ ಎಂದು ದೇವದತ್ ಪಡಿಕಲ್ ಆರ್‌ಸಿಬಿ ಅಭಿಮಾನಿಗಳಿಗೆ ವಿನಂತಿ ಮಾಡಿಕೊಂಡಿದ್ದಾರೆ. ಆಗ ಪಡಿಕಲ್ ಪಕ್ಕದಲ್ಲೇ ಇದ್ದ ಚಾಹಲ್, ನನ್ನದೂ ಇದೇ ಆಗಿದೆ. ಇದನ್ನೇ ಕಾಪಿ-ಪೇಸ್ಟ್ ಮಾಡಿಕೊಳ್ಳಿ ಎಂದು ನಗುತ್ತ ಹಿಂದಿಯಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಐಪಿಎಲ್ ಅಂಪೈರ್‌ಗಳನ್ನು ಟೀಕಿಸಿ ಟ್ವೀಟ್ ಮಾಡಿದ ಧೋನಿ ಪತ್ನಿ ಸಾಕ್ಷಿ, ಬಳಿಕ ಡಿಲೀಟ್!

    ಪಡಿಕಲ್ ಕನ್ನಡದಲ್ಲೇ ಮಾಡಿಕೊಂಡಿರುವ ಮನವಿಗೆ ಆರ್‌ಸಿಬಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಜತೆಗೆ, ಆರ್‌ಸಿಬಿ ತಂಡ ಸೋಲುತ್ತಿದ್ದಾಗಲೇ ಬೆಂಬಲ ಕೊಟ್ಟವರು ನಾವು. ಇನ್ನು ಗೆಲುವು ಕಾಣುವಾಗ ಬೆಂಬಲ ಕೊಡದೆ ಇರುತ್ತೇವೆಯೇ ಎಂದು ಕೆಲವರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts