More

    ಶ್ರೀರಾಮ ಜೀವನ ಮೌಲ್ಯ ಕಲಿಸಿದ ಮಹಾತ್ಮ

    ದೇವರಹಿಪ್ಪರಗಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಅಸಂಖ್ಯಾತ ಭಾರತೀಯರ ಸ್ವಾಭಿಮಾನದ ರಾಷ್ಟ್ರಮಂದಿರವಾಗಿದೆ ಎಂದು ಸದಯ್ಯನಮಠದ ವೀರಗಂಗಾಧರ ಶ್ರೀಗಳು ಹೇಳಿದರು.
    ಪಟ್ಟಣದ ಕರಿಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಶುಕ್ರವಾರ ನಡೆದ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಶ್ರೀರಾಮ ಕೇವಲ ವ್ಯಕ್ತಿಯಲ್ಲ, ಅವನೊಬ್ಬ ಶಕ್ತಿ. ಭಾರತೀಯ ಸಂಸ್ಕೃತಿ, ಸಂಸ್ಕಾರಗಳ ರಕ್ಷಕ. ಜೀವನ ಮೌಲ್ಯಗಳನ್ನು ಕಲಿಸಿದ ಮಹಾತ್ಮ ಎಂದರು.
    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಗುರುರಾಜ್ ದೇಸಾಯಿ ಮಾತನಾಡಿದರು.
    ಸಂಚಾಲಕ ರಮೇಶ ಯಾಳಗಿ, ಸಹ ಸಂಚಾಲಕ ಶ್ರೀಧರ ನಾಡಗೌಡ, ಪ.ಪಂ. ಸದಸ್ಯ ರಾಜೀವ ಗುತ್ತೇದಾರ, ಕಲ್ಲಣ್ಣ ಜಲಕತ್ತಿ, ಸಂಘ ಪರಿವಾರದ ರಮೇಶ ಮಸಬಿನಾಳ, ವಿನೋದಗೌಡ ಪಾಟೀಲ, ಮಾಂತೇಶ ವಂದಾಲ, ರಾಜು ಮೆಟಗಾರ, ಕಲ್ಮೇಶ ಬುದ್ನಿ, ರಮೇಶ ಮಾಳನೂರ, ನಿಂಗು ಜಲಕತ್ತಿ, ಪಿಂಟೂ ಭಾಸುತ್ಕರ್, ಅಶೋಕ ಹಡಗಲಿ, ವಿನೋದ ಮಿಂಚನಾಳ, ಕಾಶೀನಾಥ ಚವಾಣ್, ದಯಾನಂದ ರಾಠೋಡ, ಗಣೇಶ ಸಿಂಧೆ, ಕಾಶೀಪತಿ ಕುದರಿ, ರಮೇಶ ಈಳಗೇರ, ಸುರೇಶ ಕುಂಬಾರ, ಶಂಕರ ಜಮಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts