More

    ಪಂಚಮಸಾಲಿ ಸಮಾಜದ ಅಭಿವೃದ್ಧಿಗಾಗಿ ಒಂದಾಗಿ

    ದೇವರಹಿಪ್ಪರಗಿ: ಪಂಚಮಸಾಲಿ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಹುಟ್ಟುಹಾಕಲಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಸೋಮಶೇಖರ ಆಲ್ಯಾಳ ಹೇಳಿದರು.

    ಪಟ್ಟಣದ ಕಲ್ಮೇಶ್ವರ ಸಭಾಭವನದಲ್ಲಿ ಭಾನುವಾರ ನಡೆದ ಅಖಿಲ ಭಾರತ ಪಂಚಮಸಾಲಿ ಮಹಾಸಭಾ ದೇವರಹಿಪ್ಪರಗಿ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

    ಪಂಚಮಸಾಲಿ ಸಮಾಜವನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ರಂಗಗಳಲ್ಲಿ ಸದೃಢಗೊಳಿಸುವುದೇ ಮಹಾಸಭಾದ ಮುಖ್ಯ ಉದ್ದೇಶವಾಗಿದೆ ಎಂದರು.

    ರಾಜ್ಯ ಸಲಹಾ ಸಮಿತಿ ಸದಸ್ಯ ಎಸ್.ಬಿ. ಅವಟಿ ಮಾತನಾಡಿ, ಸಮಾಜದ ಅಭಿವೃದ್ಧಿ ಹಾಗೂ ಸೌಲಭ್ಯಗಳಿಗಾಗಿ ಇಂದು ನಾವು ಮಹಾಸಭಾದಡಿ ಒಂದಾಗೋಣ, ನಮ್ಮ ಬೇಡಿಕೆಗಳಿಗಾಗಿ ಹೋರಾಡೋಣ ಎಂದರು. ನಂತರ ತಾಲೂಕು ಪದಾಧಿಕಾರಿಗಳ ಆಯ್ಕೆ ನಡೆಯಿತು.

    ತಾಲೂಕು ಘಟಕದ ಅಧ್ಯಕ್ಷರಾಗಿ ಕುಮಾರ ಜೋಗುರ, ಉಪಾಧ್ಯಕ್ಷರಾಗಿ ನಿಂಗು ಹಡಗಲಿ, ನಾಗರಾಜ್ ಅವಟಿ, ಪ್ರಧಾನ ಕಾರ್ಯದರ್ಶಿಗಳಾಗಿ ನಿಂಗು ಯಂಭತ್ನಾಳ, ಪ್ರಕಾಶ ಆನಂದಿ, ಸಂತೋಷ ಬಿರಾದಾರ, ಸಂಘಟನಾ ಕಾರ್ಯದರ್ಶಿಗಳಾಗಿ ಕಲ್ಮೇಶ ಪ್ಯಾಟಿ, ಮಹಾಂತಗೌಡ ಪಾಟೀಲ, ಮಹಾಂತಗೌಡ ನಿಡಗುಂದಿ ಆಯ್ಕೆಯಾದರು.

    ಮಹಿಳಾ ರಾಜ್ಯಾಧ್ಯಕ್ಷೆ ಸುವರ್ಣಲತಾ ಗದಿಗೇಪ್ಪಗೌಡರ, ಕಾರ್ಯದರ್ಶಿ ಚನ್ನಬಸವನಗೌಡ ಪಾಟೀಲ, ವಿಜಯಪುರ ಜಿಲ್ಲಾ ಪಂಚಮಸಾಲಿ ಮಹಾಸಭಾದ ಉಪಾಧ್ಯಕ್ಷ ಸುರೇಶ ಬಿರಾದಾರ, ಕಾಸುಗೌಡ ಜಲಕತ್ತಿ, ಪ್ರಕಾಶ ಬಿರಾದಾರ(ದಾನಗೊಂಡ), ಮಹಾಂತೇಶ ವಂದಾಲ, ಗೊಲ್ಲಾಳ ಬಿರಾದಾರ(ಹಿಟ್ನಳ್ಳಿ), ಶ್ರೀಶೈಲ ಸೌದಿ, ಗೋಲ್ಲಾಳ ಬಿರಾದಾರ, ದಾನಪ್ಪಗೌಡ ಬಿರಾದಾರ, ಶ್ರೀಶೈಲ ದಾನಗೊಂಡ, ಕಾಶೀಪತಿ ಕುದರಿ, ಮಡುಗೌಡ ಬಿರಾದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts