More

    ಕಾಮಗಾರಿ ಪ್ಯಾಕೇಜ್ ಟೆಂಡರ್ ಕೈಬಿಡಲು ಜಿಲ್ಲಾ ಕಂಟ್ರಾಕ್ಟರ್ಸ್‌ ಒಕ್ಕೂಟ ಒತ್ತಾಯ

    ದೇವದುರ್ಗ: ಕೃಷ್ಣಾ ಭಾಗ್ಯ ಜಲನಿಗಮದ ವಿವಿಧ ಕಾಮಗಾರಿಗಳನ್ನು ಪ್ಯಾಕೇಜ್ ಆಧಾರದಲ್ಲಿ ಟೆಂಡರ್ ನೀಡುವುದನ್ನು ಕೈಬಿಟ್ಟು, ನಿಯಮನುಸಾರ ಕರೆಯುವಂತೆ ಆಗ್ರಹಿಸಿ ತಾಲೂಕಿನ ಚಿಕ್ಕಹೊನ್ನಕುಣಿ ಕೆಬಿಜೆಎನ್‌ಎಲ್ ಕಚೇರಿ ಮುಂದೆ ರಾಯಚೂರು ಜಿಲ್ಲಾ ಕಂಟ್ರಾಕ್ಟರ್ಸ್‌ ಒಕ್ಕೂಟ ಮಂಗಳವಾರ ಪ್ರತಿಭಟನೆ ನಡೆಸಿತು.

    ಯಾವುದೇ ಕಾಮಗಾರಿಗೆ ಕ್ರಿಯಾಯೋಜನೆ ರಚನೆ ಮಾಡಿ, ಅದಕ್ಕೆ ಅನುಗುಣವಾಗಿ ಅಂದಾಜು ಮೊತ್ತದಂತೆ ಸುಮಾರು 50 ಲಕ್ಷ ರೂ.ದಿಂದ ಒಂದು ಕೋಟಿ ರೂ. ಮೊತ್ತಕ್ಕೆ ಟೆಂಡರ್ ಕರೆಯುವ ನಿಯಮವಿದೆ. ಆದರೆ, ಎನ್‌ಆರ್‌ಬಿಸಿ ವಿವಿಧ ಕಾಮಗಾರಿಗಳನ್ನು ರಾಜಕೀಯ ಒತ್ತಡಕ್ಕೆ ಮಣಿದು, ದೊಡ್ಡಮಟ್ಟದ ಪ್ಯಾಕೇಜ್ ಮಾಡಿ ಸುಮಾರು 200-500 ಕೋಟಿ ರೂ. ಹಾಗೂ ಸಾವಿರ ಕೋಟಿ ರೂ. ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲಾಗುತ್ತಿದೆ. ಇದರಿಂದ ಸ್ಥಳೀಯ ಹಾಗೂ ಸಣ್ಣಸಣ್ಣ ಗುತ್ತಿಗೆದಾರರಿಗೆ ಈ ಪದ್ಧತಿ ಮಾರಕವಾಗಿದೆ. ಪ್ಯಾಕೇಜ್ ಟೆಂಡರ್‌ಗಳು ದೊಡ್ಡ ಮೊತ್ತದ್ದು ಆಗಿರುವ ಕಾರಣ ಹೊರರಾಜ್ಯದವರಿಗೆ ಅನುಕೂಲವಾಗಿವೆ. ಅವರಿಗೆ ಲಾಭ ಮಾಡಿಕೊಡಲುವ ಅಧಿಕಾರಿಗಳು ಪ್ಯಾಕೇಜ್ ಟೆಂಡರ್ ಮಾಡುತ್ತಾರೆ. ದಪ್ಯಾಕೇಜ್ ಟೆಂಡರ್‌ನಿಂದ ಸಣ್ಣ ಗುತ್ತಿಗೆದಾರರು ಹಲವು ವರ್ಷಗಳಿಂದ ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ. ಕೆಲಸವಿಲ್ಲದೆ ತಮ್ಮ ಲೈಸನ್ಸ್ ರಿನಿವನ್ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಆರೋಪಿಸಿದರು.

    ಮುಖಂಡರಾದ ನಾಗಪ್ಪ ಗಿರಣಿ, ಬಸ್ಸಪ್ಪ ಕಂದಗಲ್, ಎಂ.ಬಸವರಾಜ್, ಸಂಗಮೇಶ್ ಸೋಮನಮರಡಿ, ಅಮರೇಶ ಬಗಿರಂಗುಂಡ, ಶಿವನಗೌಡ ಕಕ್ಕಲದೊಡ್ಡಿ, ಭೂತಪ್ಪ ದೇವರಮನೆ, ಹುಸೇನಪ್ಪ ಜಾಲಹಳ್ಳಿ, ಮಹಾದೇವಪ್ಪಗೌಡ ಚಿಕ್ಕಬೂದೂರು, ಅಮೀನ್ ರೆಡ್ಡಿ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts