More

    ಪಠ್ಯೇತರ ಚಟುವಟಿಕೆಗಳಿಗೂ ಸಿಗಲಿ ಪ್ರೋತ್ಸಾಹ

    ದೇವದುರ್ಗ: ಶಿಕ್ಷಕರು ಹಾಗೂ ಪಾಲಕರು ತಮ್ಮ ಮಕ್ಕಳನ್ನು ಅಂಕಗಳಿಸುವ ಯಂತ್ರಗಳನ್ನಾಗಿ ಮಾಡದೆ, ಅವರು ಇಷ್ಟಪಡುವ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕೌಶಲ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಬೇಕು ಎಂದು ಎಸ್‌ಎಂಎಸ್ ಇಂಟರ್ ನ್ಯಾಷನಲ್ ಶಾಲೆಯ ಮುಖ್ಯಸ್ಥೆ ಮೇಘಾ ಶಿವಕುಮಾರ್ ಹರವಿ ಹೇಳಿದರು.

    ಪಟ್ಟಣದ ಎಸ್‌ಎಂಎಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಮೇಳ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಮಕ್ಕಳು ಎಲ್ಲರೂ ಒಂದೇ ತರಹ ಇರುವುದಿಲ್ಲ. ಅವರಲ್ಲಿ ಬಹುಮುಖ ಪ್ರತಿಭೆ ಅಡಗಿರುತ್ತದೆ. ಶಿಕ್ಷಕರು ಪ್ರತಿಭೆ ಗುರುತಿಸುವ ಕೆಲಸ ಮಾಡುವ ಜತೆಗೆ ಪಾಲಕರಿಗೆ ಮನವೊಲಿಸಿ ಪ್ರೋತ್ಸಾಹಿಸಬೇಕು. ಆಗ ಮಾತ್ರ ವಿದ್ಯಾರ್ಥಿ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದರು.

    ಮಕ್ಕಳಿಗೆ ವಿದ್ಯೆಯ ಜತೆಗೆ ವೈಜ್ಞಾನಿಕ ಜ್ಞಾನ ನೀಡಬೇಕಾಗಿದೆ. ವಿದ್ಯಾರ್ಥಿಗಳನ್ನು ಬಹುಮುಖ ಪ್ರತಿಭೆಯನ್ನಾಗಿ ತಯಾರು ಮಾಡಲು ಶಿಕ್ಷಕರು ಪ್ರಯತ್ನಿಸಬೇಕಾಗಿದೆ. ಕಲಿಕೆಯಲ್ಲಿ ಹಿಂದುಳಿದ ಹಾಗೂ ಕಡಿಮೆ ಅಂಕ ಪಡೆದ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಅಂಥವರು ಮಕ್ಕಳಿಗೆ ಪ್ರೇರಣೆಯಾಗಬೇಕಿದೆ. ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಗುರುವಾದರೆ, ಮನೆಯಲ್ಲಿ ಪಾಲಕರೇ ಗುರುವಾಗಬೇಕು ಎಂದು ಸಲಹೆ ನೀಡಿದರು.

    ಶಿಕ್ಷಕಿಯರಾದ ಪದ್ಮಿನಿ, ನಿರ್ಮಲಾ, ಸ್ವಣರ್ಂಜಲಿ, ಶ್ರಾವ್ಯ, ನಾಗವೇಣಿ, ಸುನಿತಾ, ಸುಲೋಚನಾ, ಹೀನಾ, ಶ್ರೀದೇವಿ ಮಲ್ಲಿಕಾರ್ಜುನ, ಬಸವರಾಜ್ ಬ್ಯಾಗವಾಟ್, ವಾಸುದೇವ ನಾಯಕ್, ಪ್ರಭಾವತಿ ಸಂಗಮೇಶ್, ಶಿಲ್ಪಾ ಆನಂದ್ ಹರವಿ, ಚನ್ನಪ್ಪ ಸಾಹುಕಾರ, ಚಂದ್ರಶೇಖರ್ ಸ್ವಾಮಿ, ವೆಂಕಟ್ ರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts