More

    ದೇವದುರ್ಗ ತಾಲೂಕಿನಲ್ಲಿ ಸ್ವಲ್ಪ ತಗ್ಗಿದ ಕರೊನಾ

    ದೇವದುರ್ಗ: ಕರೊನಾ ಎರಡನೇ ಅಲೆಯ ಆಟ ಮುಂದುವರಿದಿದ್ದು, ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಅತಿಹೆಚ್ಚು ಕೇಸ್‌ಗಳು ಪತ್ತೆಯಾಗುತ್ತಿವೆ. ಬುಧವಾರ ಸೋಂಕು ಸ್ವಲ್ಪ ತಗ್ಗಿದ್ದು, 14 ಪ್ರಕರಣಗಳು ಪತ್ತೆಯಾಗಿವೆ.

    ಒಂದು ವಾರದಿಂದ ನಿತ್ಯ ನೂರಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾಗುತ್ತಿದ್ದವು. ಶನಿವಾರ ಬರೊಬ್ಬರಿ ದ್ವಿಶತಕ ಬಾರಿಸಿದ್ದ ಸೋಂಕು, ನಂತರ ಕಡಿಮೆಯಾಗುತ್ತಾ ಬಂದಿದೆ. ಸೋಮವಾರ 116, ಮಂಗಳವಾರ 122 ಹಾಗೂ ಬುಧವಾರ ಕೇವಲ 14 ಕೇಸ್ ಪತ್ತೆಯಾಗಿವೆ. ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ.

    ಸೋಂಕಿತರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಕಿರಿಯ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಜವಾಬ್ದಾರಿ ವಹಿಸಲಾಗಿದೆ. ಆಶಾ ಕಾರ್ಯಕರ್ತೆಯರು ಸೋಂಕಿತರ ಮನೆಗೆ ದಿನಕ್ಕೊಮ್ಮೆ ಭೇಟಿ ನೀಡಿ, ಅಗತ್ಯ ಮಾತ್ರೆ ತೆಗೆದುಕೊಳ್ಳುವ ಜತೆಗೆ ಕೆಲ ಪಾಲಿಸಬೇಕಾದ ನಿಯಮಗಳನ್ನು ಹೇಳುತ್ತಿದ್ದಾರೆ. ಆಶಾ ಕಾರ್ಯಕರ್ತೆಯರೇ ಸೋಂಕಿತರಿಗೆ ಆಸರೆಯಾಗಿದ್ದಾರೆ.

    ಸೀಲ್‌ಡೌನ್: ಕರೊನಾ ತಡೆಗೆ ಸರ್ಕಾರ 14 ದಿನ ಸೆಮಿ ಲಾಕ್‌ಡೌನ್ ಜಾರಿಮಾಡಿದ್ದರಿಂದ ಸಾರಿಗೆ ಸಂಸ್ಥೆ ಬಸ್‌ಗಳ ಓಡಾಟ ಬಂದ್ ಆಗಿದೆ. ಹೀಗಾಗಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಸೇರಿ ಖಾಸಗಿ ವಾಹನಗಳು ಬಾರದಂತೆ ಸೀಲ್‌ಡೌನ್ ಮಾಡಲಾಗಿದೆ. ಎರಡೂ ಗೇಟ್‌ಗಳನ್ನು ಬಂದ್ ಮಾಡಿದ್ದು, ಯಾವುದೇ ವಾಹನ ಹೋಗದಂತೆ ತಡೆಯಲಾಗಿದೆ. ಇದಕ್ಕೂ ಮುನ್ನ ಬಸ್ ನಿಲ್ಲುವ ಜಾಗ ಸೇರಿ ಎಲ್ಲೆಂದರಲ್ಲಿ ಖಾಸಗಿ ವಾಹನಗಳು ನಿಲ್ಲುತ್ತಿದ್ದು, ಅನಗತ್ಯ ಸಂಚಾರ, ಗಲಾಟೆ, ಎಲ್ಲೆಂದರಲ್ಲಿ ಕಸ ಬಿಸಾಡುವುದು ಕಂಡುಬರುತ್ತಿತು. ಇದಕ್ಕೆ ಕಡಿವಾಣ ಹಾಕಲು ಸಾರಿಗೆ ಸಂಸ್ಥೆ ಅಧಿಕಾರಿಗಳು ಬಸ್ ನಿಲ್ದಾಣ ಸೀಲ್‌ಡೌನ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts