More

    ದೇವದುರ್ಗ ತಾಲೂಕು ಆಡಳಿತದ ಹೊರೆ ಕಡಿಮೆ

    ಅರಕೇರಾ: ಅರಕೇರಾ ತಾಲೂಕು ರಚನೆ ವಿರೋಧಿಸಿ ಜನಾಕ್ರೋಶ ಹೆಸರಿನಲ್ಲಿ ಜೆಡಿಎಸ್ ಪಕ್ಷದ ಕೆಲವರು ಜೂ.17 ರಂದು ಹಮ್ಮಿಕೊಂಡಿದ್ದ ಅಖಂಡ ತಾಲೂಕು ಹೋರಾಟ ಜನ ಬೆಂಬಲವಿಲ್ಲದೆ ವಿಫಲವಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಹನುಮಂತರಾಯ ನಾಯಕ ಮಟ್ಲ ಕೊತ್ತದೊಡ್ಡಿ ಹೇಳಿದರು.

    ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಮಾಜಿ ಸಚಿವ ಕೆ.ಶಿವನಗೌಡ ನಾಯಕ 91 ಹಳ್ಳಿ, ದೊಡ್ಡಿ, ತಾಂಡಾ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಹುದಿನದ ಬೇಡಿಕೆಯಾಗಿದ್ದ ಅರಕೇರಾ ಗ್ರಾಮವನ್ನು ತಾಲೂಕು ಕೇಂದ್ರವಾಗಿಸಿದ್ದಾರೆ. ಇದರಿಂದ ಶಿವನಗೌಡ ನಾಯಕಗೆ ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ. ಅರಕೇರಾ ತಾಲೂಕು ರಚನೆ ಆಗಿರುವುದರಿಂದ ದೇವದುರ್ಗ ತಾಲೂಕಿನ ಆಡಳಿತದ ಮೇಲಿನ ಹೊರೆ ಕಡಿಮೆಯಾಗಲಿದೆ ಎಂಬುದನ್ನು ಅಖಂಡ ದೇವದುರ್ಗ ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

    ಅರಕೇರಾ ತಾಲೂಕು ಕೇಂದ್ರವಾಗಿಸುವ ಮೂಲಕ ಕೆ.ಶಿವನಗೌಡ ನಾಯಕ ರಾಜಕೀಯ ಶಕ್ತಿ ಸಾಬೀತು ಮಾಡಿದ್ದಾರೆ. ಅದೇ ರೀತಿ ಜೆಡಿಎಸ್‌ನಿಂದ ಆಯ್ಕೆಯಾಗಿರುವ ಶಾಸಕಿ ಕರೆಮ್ಮ ಜಿ.ನಾಯಕಗೆ ರಾಜಕೀಯ ಶಕ್ತಿ ಇದ್ದರೆ ಗಬ್ಬೂರು ಅಥವಾ ಜಾಲಹಳ್ಳಿ ಗ್ರಾಮವನ್ನು ತಾಲೂಕು ಕೇಂದ್ರವಾಗಿಸಲಿ. ದೇವದುರ್ಗವನ್ನು ಜಿಲ್ಲಾ ಕೇಂದ್ರ ಮಾಡುವಂತೆ ಹೋರಾಟ ಮಾಡಲಿ. ಈ ಕುರಿತು ಅಖಂಡ ದೇವದುರ್ಗ ಹೋರಾಟಗಾರರು ಶಾಸಕಿಗೆ ಸಲಹೆ ನೀಡಲಿ ಎಂದು ಹನುಮಂತರಾಯ ನಾಯಕ ಮಟ್ಲ ಕೊತ್ತದೊಡ್ಡಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts