More

    ಮುಷ್ಕರಕ್ಕೆ ಬೆಂಬಲ ಕೋರಿ ಕರಪತ್ರ ಹಂಚಿಕೆ

    ದೇವದುರ್ಗ: ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಹಳೇ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಮಾ.1ರಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲಿಸುವಂತೆ ಕೋರಿ ರಾಜ್ಯ ಸರ್ಕಾರಿ ನೌಕರರ ಸಂಘ ವಿವಿಧ ಇಲಾಖೆಗಳಿಗೆ ತೆರಳಿ ಕರಪತ್ರ ಅಂಟಿಸುವ ಮೂಲಕ ಸೋಮವಾರ ಅಭಿಯಾನ ನಡೆಸಿತು.

    ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ, ಕರಪತ್ರ ಅಂಟಿಸುವ ಅಭಿಯಾನಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಮಾ.1ರಿಂದ ಕೆಲಸ ಬಹಿಷ್ಕರಿಸಿ ಮುಷ್ಕರ ನಡೆಸಲಾಗುತ್ತಿದ್ದು, ಎಲ್ಲಇಲಾಖೆಗಳಿಗೆ ಕರಪತ್ರ ಅಂಟಿಸುವ ಮೂಲಕ ಮುಷ್ಕರಕ್ಕೆ ಬೆಂಬಲಿಸಲು ಮನವಿ ಮಾಡಲಾಗುತ್ತಿದೆ. ಸರ್ಕಾರ ಆಯವ್ಯಯದಲ್ಲಿ ನೌಕರರ ವೇತನ, ಭತ್ಯೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಸ್ತಾಪ ಮಾಡದಿರುವುದು ಖಂಡನೀಯ ಎಂದರು.

    ಕೂಡಲೇ 7ನೇ ವೇತನ ಆಯೋಗದಿಂದ ಮಧ್ಯಂತರ ವರದಿ ಪಡೆದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ.40 ಫಿಟ್‌ಮೆಂಟ್ ಸೌಲಭ್ಯ 2022ರ ಜುಲೈ 1ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಬೇಕು. ಎನ್‌ಪಿಎಸ್ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಸಬೇಕು ಎಂದು ಒತ್ತಾಯಿಸಿದರು.

    ರಾಜ್ಯ ಪರಿಷತ್ ಸದಸ್ಯ ಶಿವಲಿಂಗಯ್ಯ, ಖಜಾಂಚಿ ಬಸವರಾಜ ಹೊನೂರ್, ವಿರುಪನಗೌಡ ನಾಗಡದಿನ್ನಿ, ಶಿವಪುತ್ರಪ್ಪ, ಶರಣಬಸವ, ಪ್ರಭುರಾಜ್, ಅಭಿಷೇಕ ರೆಡ್ಡಿ, ಮೈಬೂಬ್‌ಅಲಿ, ಶಿವಕುಮಾರ, ಶಾಂತಗೌಡ, ಮಹಾದೇವ ಪಾಟೀಲ್ ಚನ್ನಾರೆಡ್ಡಿ ಗಣದಿನ್ನಿ, ಗಂಗಾಧರ್ ಮಂದಕಲ್, ಬಸವರಾಜ್ ಮಸರಕಲ್, ಬಸವರಾಜ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts