More

    ಸಮಾಜ ಕಟ್ಟುತ್ತಿವೆ ವೀರಶೈವ ಲಿಂಗಾಯತ ಮಠಗಳು; ಶ್ರೀವಾಸುದೇವ ಶಿವಾಚಾರ್ಯ ಸ್ವಾಮೀಜಿ ಅಭಿಮತ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ 148 ಜೋಡಿ


    ದೇವದುರ್ಗ: ವೀರಶೈವ ಲಿಂಗಾಯತ ಮಠಗಳು ಜಾತಿ, ಮತ, ಪಂಥ ಬೇಧವಿದಲ್ಲದೆ ಸಮಾಜ ಕಟ್ಟುತ್ತಿವೆ ಎಂದು ಸಾವಿರದೇವರ ಸಂಸ್ಥಾನ ಮಠದ ಶ್ರೀವಾಸುದೇವ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

    ತಾಲೂಕಿನ ಗಬ್ಬೂರು ಶ್ರೀಬೂದಿಬಸವೇಶ್ವರ ಸಂಸ್ಥಾನಮಠದ ಭಾನುವಾರ ಆಯೋಜಿಸಿದ್ದ 18ನೇ ವರ್ಷದ 148 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ, ಧಾರ್ಮಿಕ ಸಭೆ, ಶಿವಾನುಭವಗೋಷ್ಠಿ, ತುಲಾಭಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

    ಶತ್ರು ಇರದವ, ಜಗದ ಜನರನ್ನು ಮಿತ್ರನಂತೆ ಕಂಡವ ವೀರಶೈವ. ಜಗತ್ತಿಗೆ ಉತ್ಕೃಷ್ಟ ಸಂಸ್ಕೃತಿ ಹಾಕಿಕೊಟ್ಟ ಪರಂಪರೆ ವೀರಶೈವ. ಅನ್ನ, ಅಕ್ಷರ, ಸಂಸ್ಕಾರ, ಜ್ಞಾನ ನೀಡುತ್ತಿರುವ ಗಬ್ಬೂರಿನ ಬೂದಿಬಸವೇಶ್ವರ ಮಠ ಸಮಾಜದ ಆಸ್ತಿ. ಸಾಮೂಹಿಕ ವಿವಾಹ ಆಯೋಜಿಸಿ ಬಡತನ ದೂರಮಾಡುತ್ತಿದೆ ಎಂದು ಬಣ್ಣಿಸಿದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ, ಗಬ್ಬೂರು ಶ್ರೀ ಬೂದಿಬಸವೇಶ್ವರ ಮಠ ಈವರೆಗೆ 1800 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಾಡಿಸಿದೆ. ಇಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು 4 ಮಕ್ಕಳನ್ನು ಹೆತ್ತು ಒಬ್ಬರನ್ನು ದೇಶಸೇವೆಗೆ, ಮತ್ತೊಬ್ಬನನ್ನು ಭೂಮಾತೆ ಸೇವೆಗೆ, ಇನ್ನಿಬ್ಬರನ್ನು ತಂದೆ, ತಾಯಿ, ಮಠಗಳ ಸೇವೆಗೆ ನೀಡಬೇಕು ಎಂದರು.

    ಶ್ರೀ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶಿರಹಟ್ಟಿಯ ಶ್ರೀ ಜಗದ್ಗುರು ಪಕೀರಸಿದ್ದರಾಮ ಸಾಮೀಜಿ, ನಂದವಾಡಗಿ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಶ್ರೀ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಡಾ.ಶಿವರಾಜ ಪಾಟೀಲ್, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು, ಆಂಧ್ರ ಶಾಸಕ ಬಂಡ್ಲ ವೀರನಗೌಡ, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ಆರ್‌ಸಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ನಾಯಕ, ಪ್ರಮುಖರಾದ ಮಹಾಂತೇಶ ಪಾಟೀಲ್ ಅತ್ತನೂರು, ಪಾರ್ವತಿ ಕಾರೆಡ್ಡಿ, ರೇಣುಕಾ ಪ್ರಸನ್ನ ಇತರರಿದ್ದರು. ಬಸವರಾಜಯ್ಯ ಶಾಸ್ತ್ರಿ ನಿರೂಪಿಸಿದರು, ಶ್ರೀ ಚನ್ನಬಸಯ್ಯಸ್ವಾಮಿ ಸ್ವಾಗತಿಸಿದರು.

    ಸಮಾಜ ಕಟ್ಟುತ್ತಿವೆ ವೀರಶೈವ ಲಿಂಗಾಯತ ಮಠಗಳು; ಶ್ರೀವಾಸುದೇವ ಶಿವಾಚಾರ್ಯ ಸ್ವಾಮೀಜಿ ಅಭಿಮತ
    ಸಮಾಜ ಕಟ್ಟುತ್ತಿವೆ ವೀರಶೈವ ಲಿಂಗಾಯತ ಮಠಗಳು; ಶ್ರೀವಾಸುದೇವ ಶಿವಾಚಾರ್ಯ ಸ್ವಾಮೀಜಿ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts