More

    ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿದ ಶಿಕ್ಷಕರು; ಆರು ತಂಗಳ ನಂತರ ಆರಂಭವಾದ ಶಾಲೆಗಳು

    ವಿವಿಧ ಸ್ಕೂಲ್‌ಗಳಿಗೆ ಭೇಟಿ ನೀಡಿದ ಬಿಇಒ

    ದೇವದುರ್ಗ: ಆರು ತಿಂಗಳ ನಂತರ ಹಿರಿಯ ಪ್ರಾಥಮಿಕ ಶಾಲೆ ಸೋಮವಾರ ಆರಂಭವಾಗಿದ್ದು, ತಾಲೂಕಿನ ಬಹುತೇಕ ಶಾಲೆಗಳಿಗೆ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು ವಿವಿಧ ರೀತಿಯಲ್ಲಿ ಸ್ವಾಗತಿಸಿದರು.

    ತಾಲೂನಲ್ಲಿ ಖಾಸಗಿ, ಅನುದಾನಿತ ಹಾಗೂ ಸರ್ಕಾರಿ ಸೇರಿ 188 ಶಾಲೆಗಳಿದ್ದು, ಶನಿವಾರ ಎಲ್ಲ ಶಾಲೆಗಳಿಗೆ ಸಾನಿಟೈಸರ್ ಸಿಂಪಡಿಸಲಾಗಿತ್ತು. ಬೆಳಗ್ಗೆಯೇ ಬಂದ ಶಿಕ್ಷಕರು ಶಾಲೆಗಳನ್ನು ತಳಿರು ತೋರಣದಿಂದ ಸಿಂಗರಿಸಿ, ರಂಗೋಲಿ ಬಿಡಿಸಿದ್ದರು. ಶಾಲೆಗೆ ಬಂದ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಆರ್.ಇಂದಿರಾ ಬೆಳಗ್ಗೆಯಿಂದ ಪಟ್ಟಣದ ಬಾಪೂಜಿ, ಕರ್ನಾಟಕ ಪಬ್ಲಿಕ್ ಶಾಲೆ, ಅರಕೇರಾದ ಆದರ್ಶ ಶಾಲೆ, ನಾಗೋಲಿ ಸೇರಿ ವಿವಿಧ ಶಾಲೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. 188 ಹಿರಿಯ ಪ್ರಾಥಮಿಕ ಶಾಲೆಗಳಿಗೆ 38,838 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಬಿಇಒ ತಿಳಿಸಿದ್ದಾರೆ.

    ಪಟೇಲ್ ಓಣಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರು ವಿಶೇಷವಾಗಿ ಅಲಂಕರಿಸಿದ್ದರು. ಬ್ಯಾನರ್ ಅಳವಡಿಸಿ, ತಳಿರುತೋರಣ ಕಟ್ಟಿ, ರಂಗೋಲಿ ಬಿಡಿಸಿ, ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ನಂತರ ವಿವಿಧ ಓಣಿಯಲ್ಲಿ ಸಂಚರಿಸಿ ಮಕ್ಕಳನ್ನು ಶಾಲೆಗೆ ಕಳಿಸುವ ಬಗ್ಗೆ ಪಾಲಕರಿಗೆ ಜಾಗೃತಿ ಮೂಡಿಸಿದರು. ಇಸಿಒ ಯಲ್ಲನಗೌಡ, ಎಸ್‌ಡಿಎಂಸಿ ಅಧ್ಯಕ್ಷ ಶಿವಾಜಿ, ಸಿಆರ್‌ಪಿ ಬಾಬು, ಮುಖ್ಯಶಿಕ್ಷಕಿ ಸಿದ್ದಮ್ಮ, ಶಿಕ್ಷಕರಾದ ರಂಗುಕುಮಾರಿ, ಸವಿತಾ, ಸಾಜೀದ್ ಬೇಗಂ, ಪವಿತ್ರಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts