More

    ಎನ್‌ಆರ್‌ಬಿಸಿಗೆ ಆಗಸ್ಟ್ ಪೂರ್ತಿ ನೀರು

    ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ ನೀರು ಹರಿಸುವ ಕುರಿತು ಆಲಮಟ್ಟಿಯಲ್ಲಿ ಮಂಗಳವಾರ ಜರುಗಿದ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ. ಇದರಿಂದ ಮುಂಗಾರು ಬೆಳೆಗೆ ತಡೆರಹಿತ ನೀರು ಬರುವುದು ಅನುಮಾನವಾಗಿದೆ.

    ಆಲಮಟ್ಟಿ ಹಾಗೂ ನಾರಾಯಣಪುರ ಬಲದಂಡೆ ನಾಲೆ ಬಹುತೇಕ ಭರ್ತಿಯಾಗಿದ್ದರೂ ಒಳಹರಿವು ಇಳಿಕೆಯಾಗಿದೆ. ಐಸಿಸಿ ಸ್ಪಷ್ಟ ತೀರ್ಮಾನ ಕೈಗೊಳ್ಳದೆ ಹಿಂದೇಟು ಹಾಕಲು ಇದು ಪ್ರಮುಖ ಕಾರಣ. ನಾರಾಯಣಪುರ ಜಲಾಶಯದಲ್ಲಿ 29 ಟಿಎಂಸಿ, ಆಲಮಟ್ಟಿಯಲ್ಲೂ ಅಂದಾಜು 98 ಟಿಎಂಸಿ ನೀರಿದೆ. ಆದರೆ ಒಳಹರಿವು ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಇದರ ಆಧಾರದಲ್ಲಿ ಜು.27ರಿಂದ ಆಗಸ್ಟ್ ಕೊನೇ ವಾರದವರೆಗೆ ವಾರಬಂಧಿ ರಹಿತ ನೀರು ಹರಿಸಲು ತೀರ್ಮಾನಿಸಲಾಗಿದೆ.

    ಮುಂಗಾರು ಬೆಳೆ ಸಂಪೂರ್ಣವಾಗಿ ಕೈ ಸೇರಲು ಕನಿಷ್ಠ ಮೂರೂವರೆ ತಿಂಗಳು ತಡೆರಹಿತ ನೀರಿನ ಅಗತ್ಯವಿದೆ. ಆ.1ರಿಂದ ನವೆಂಬರ್ ಎರಡನೇ ವಾರದವರೆಗೆ ನೀರು ಹರಿಸಬೇಕು. ಈ ಹಿಂದೆ ಇದೇ ಆಧಾರದಲ್ಲಿ ನಾಲೆಗೆ ನೀರುಹರಿಸಿ 2ನೇ ಬೇಸಿಗೆ ಬೆಳೆಗೆ ವಾರಬಂಧಿ ಪದ್ಧತಿ ಅನುಸರಿಸಲಾಗುತ್ತಿತ್ತು. ಆದರೆ, ಈ ವರ್ಷ ಐಸಿಸಿ ಸಭೆ ಅಸ್ಪಷ್ಟ ತೀರ್ಮಾನ ಕೈಗೊಂಡಿದ್ದು, ಒಳಹರಿವು ನೋಡಿಕೊಂಡು ಇನ್ನೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts