More

    ತಗ್ಗಿದ ಪ್ರವಾಹ, ಹಿಗ್ಗಿದ ನಿರ್ಭೀತಿ, ಕಡಿಮೆಯಾದ ನಾರಾಯಣಪುರ ಜಲಾಶಯದ ಹೊರಹರಿವು

    ದೇವದುರ್ಗ: 10 ದಿನಗಳಿಂದ ಭೋರ್ಗೆರೆದು ಹರಿಯುತ್ತಿದ್ದ ಕೃಷ್ಣಾ ನದಿ ಈಗ ಶಾಂತವಾಗಿದ್ದು, ನದಿ ತೀರದ ಜನರ ಆತಂಕ ತುಸು ದೂರವಾಗಿದೆ.

    ನಾರಾಯಣಪುರ ಜಲಾಶಯದ 8 ಕ್ರಸ್ಟ್ ಗೇಟ್‌ಗಳ ಮೂಲಕ ಸೋಮವಾರ ಬೆಳಗ್ಗೆ 92,880 ಕ್ಯೂಸೆಕ್ ನೀರು ಹರಿಬಿಡಲಾಗಿತ್ತು. ಸಂಜೆ ವೇಳೆಗೆ 6 ಸಾವಿರ ಕ್ಯೂಸೆಕ್ ಇಳಿಕೆಯಾಗಿದೆ. ಇದರಿಂದ ಹೂವಿನಹೆಡಗಿ ಸೇತುವೆ ಮುಳುಗುವ ಭೀತಿ ದೂರವಾಗಿದೆ.

    ಸದ್ಯ ನಾರಾಯಣಪುರ ಜಲಾಶಯಕ್ಕೆ 15 ಸಾವಿರ ಕ್ಯೂಸೆಕ್ ಒಳಹರಿವಿದೆ. 33 ಟಿಎಂಸಿ ಅಡಿ ಸಾಮರ್ಥ್ಯದ ಡ್ಯಾಂನಲ್ಲಿ ಈಗ 31.36ಟಿಎಂಸಿ ಅಡಿ ನೀರಿದೆ. 6 ಸಾವಿರ ಕ್ಯೂಸೆಕ್ ಕೃಷ್ಣಾ ನದಿಗೆ, 4 ಸಾವಿರ ಕ್ಯೂಸೆಕ್ ನಾರಾಯಣಪುರ ಬಲ ಹಾಗೂ ಎಡದಂಡೆ ನಾಲೆಗೆ ಹರಿಸಲಾಗುತ್ತಿದೆ ಎಂದು ಕೃಷ್ಣಾ ಭಾಗ್ಯ ಜಲನಿಗಮ ಎಇಇ ರಾಮನಗೌಡ ಹಳ್ಳೂರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts