More

    ಆಸ್ಪತ್ರೆಗೆ ವೈದ್ಯರ ನಿಯೋಜಿಸಲು ನಿರ್ಣಯ; ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ತೀರ್ಮಾನ


    ದೇವದುರ್ಗ: ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರು ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಆಸ್ಪತ್ರೆಯಲ್ಲಿ ಶನಿವಾರ ಜರುಗಿದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

    ಆರೋಗ್ಯ ಕೇಂದ್ರದ ಅವ್ಯವಸ್ಥೆ ಕುರಿತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಮಸ್ಯೆ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ಸುದ್ದಿ ಪ್ರಕಟಿಸಿ, ಸಮಸ್ಯೆ ಮೇಲೆ ಬೆಳಕು ಚೆಲ್ಲಲಾಗಿತ್ತು. ವರದಿಗೆ ಸ್ಪಂದಿಸಿದ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಶಿವಕುಮಾರ ಪಾಣಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

    ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದಿದ್ದರೆ, ಕೇಂದ್ರದ ಪ್ರಯೋಜನವೇನು?. ಎರಡು ವಷರ್ಗಳಿಂದ ಡೆಂಟಲ್ ಡಾಕ್ಟರ್ ಗೈರಾಗಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. 2ವಷರ್ದಿಂದ ಎಕ್ಸ್‌ರೇ ಯಂತ್ರ ಕೆಟ್ಟಿದ್ದರೂ ರಿಪೇರಿ ಮಾಡಿಲ್ಲ. ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ಆಡಳಿತಾಧಿಕಾರಿ ಡಾ.ಆರ್.ಎಸ್.ಹುಲಿಮನಿ ವಿರುದ್ಧ ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು. ಕೂಡಲೇ ಸಿಸಿ ಕ್ಯಾಮರಾ, ಬೈಯೋಮೇಟ್ರಿಕ್ ಅಳವಡಿಸಿ, ಸಮಯ ಪಾಲನೆ ಮಾಡಬೇಕು ಎಂದು ಸಮಿತಿ ಅಧ್ಯಕ್ಷ ಶಿವಕುಮಾರ ಪಾಣಿ ಆಡಳಿತಾಧಿಕಾರಿಗೆ ಸೂಚಿಸಿದರು.

    ಡಾ.ಆರ್.ಎಸ್.ಹುಲಿಮನಿ ಮಾತನಾಡಿ, ಗೈರಾದ ವೈದ್ಯರಿಗೆ 2ಬಾರಿ ನೋಟಿಸ್ ನೀಡಲಾಗಿದೆ. ಎಕ್ಸ್‌ರೇ ಯಂತ್ರ ಬದಲಾವಣೆಗೆ ಪತ್ರ ಬರೆಯಲಾಗಿದೆ. ಕೆಲ ಸಮಸ್ಯೆಗಳು ಹೇಳದಂಥ ಸ್ಥಿತಿಯಿದೆ. ಔಷಧ ಸರಬರಾಜು ಸ್ಥಗಿತಗೊಂಡಿದ್ದು, ಅನಿವಾರ್ಯವಾಗಿ ಹೊರಗೆ ಬರೆಯುವಂಥ ಸ್ಥಿತಿಯಿದೆ ಎಂದರು.

    ಮುಂದಿನ 15ದಿನಗಳಲ್ಲಿ ಆಸ್ಪತ್ರೆಯಲ್ಲಿ ಸಮಸ್ಯೆಗಳನ್ನು ಸರಿಪಡಿಸಿ ವೈದ್ಯರ ನೇಮಕ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ, ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿ ಸದಸ್ಯರು ಎಚ್ಚರಿಸಿದರು. ವೈದ್ಯರಾದ ಡಾ.ಇಮ್ರಾನ್ ಖಾನ್, ಗುರುರಾಜ, ಸಮಿತಿ ಸದಸ್ಯರಾದ ಸಲಬಣ್ಣ ಸೌದ್ರಿ, ಬಸವರಾಜ, ಶಿವರಾಜ ನಾಯಕ, ಮಕ್ತೂಮ್, ಆಸ್ಪತ್ರೆ ಸಿಬ್ಬಂದಿ ದೇಶಪಾಂಡೆ, ರಾಜು ವೀರೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts