More

    ನಮ್ ಪಂಚಾಯಿತಿಗೆ ಚುನಾವಣೆ ನಡೆಸಿ; ತಹಸೀಲ್ದಾರ್‌ಗೆ ಹೇಮನಾಳ ಗ್ರಾಮಸ್ಥರ ಮನವಿ

    ದೇವದುರ್ಗ: ತಾಲೂಕಿನ ಹೇಮನಾಳ ಗ್ರಾಮದಲ್ಲಿ ಶುಕ್ರವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಗ್ರಾಪಂಗೆ ಚುನಾವಣೆ ನಡೆಸುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

    10 ವರ್ಷಗಳಿಂದ ಗ್ರಾಪಂಗೆ ಚುನಾವಣೆ ನಡೆದಿಲ್ಲ. ನಮ್ಮ ಸಮಸ್ಯೆ ಕೇಳಲು ಗ್ರಾಪಂ ಸದಸ್ಯರೇ ಇಲ್ಲ. ನಾವು ಯಾರ ಬಳಿ ಸಮಸ್ಯೆಗಳನ್ನು ಹೇಳಬೇಕು. ಅಧಿಕಾರಿಗಳು ಮಾತು ಕೇಳುತ್ತಿಲ್ಲ ಎಂದು ದೂರಿದರು. ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಮಾತನಾಡಿ, ಚುನಾವಣೆ ವಿಷಯ ಕೋರ್ಟ್‌ನಲ್ಲಿದ್ದು, ಈ ಬಗ್ಗೆ ತೀರ್ಪು ಬರಬೇಕು. ಅಲ್ಲಿಯವರೆಗೆ ನಾವು ಏನೂ ಮಾಡಲ್ಲ ಬರಲ್ಲ ಎಂದರು. ಹೊಸ ಗ್ರಾಪಂ ರಚನೆ ಕುರಿತು ಮದರಕಲ್ ಗ್ರಾಮಸ್ಥರು ಮೇಲ್ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಹೇಮನಾಳ ಹಾಗೂ ಶಾವಂತಗೇರಾ ಗ್ರಾಪಂಗೆ ಚುನಾವಣೆ ನಡೆದಿಲ್ಲ.

    ಬೊಮ್ಮನಾಳ ಗ್ರಾಮದ ಸ್ಮಶಾನ ಭೂಮಿಯಲ್ಲಿ ಕುಡಿವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಇದು ಸರಿಯಲ್ಲ ಗ್ರಾಮಸ್ಥರು ದೂರಿದರು. ಹೇಮನಾಳ ಹಾಗೂ ಖಾನಾಪುರದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ ಉದ್ಘಾಟನೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಸಾರ್ವಜನಿಕ ಶೌಚಗೃಹ, ಶುದ್ಧ ಕುಡಿವ ನೀರು, ಬೀದಿ ದೀಪ ನಿರ್ವಹಣೆ, ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಬಗ್ಗೆ ಜನರು ಅಹವಾಲು ಸಲ್ಲಿಸಿದರು.

    ಸಾಧ್ಯವಾಗುವ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗಿದೆ. ಕೆಲ ಸಮಸ್ಯೆ ಜಟಿಲವಾಗಿದ್ದು, ಹಂತಹಂತವಾಗಿ ಪರಿಹರಿಸುತ್ತೇವೆ. ಫಲಾನುಭವಿಗಳಿಗೆ ಮಸಾಶನ ಆದೇಶ ಪತ್ರ ಸೇರಿ ಅಗತ್ಯ ದಾಖಲೆ ಸ್ಥಳದಲೇ ನೀಡುತ್ತೇವೆ. ಕೆಲ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ತಿಳಿಸಿದರು. ತಾಪಂ ಇಒ ಪಂಪಾಪತಿ ಹಿರೇಮಠ, ಬಿಇಒ ಡಾ.ಆರ್.ಇಂದಿರಾ, ಜಿಪಂ ಎಇಇ ವೆಂಕಟೇಶ ಗಲಗ, ಟಿಎಚ್‌ಒ ಬನದೇಶ್ವರ, ಪ್ರಮುಖರಾದ ದೇವರಾಜ, ರಾಘವೇಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts