More

    33 ಉಮೇದುವಾರಿಕೆ ವಾಪಸ್; 3 ಗ್ರಾಪಂಗಳ 72 ಸ್ಥಾನಗಳಿಗೆ ಚುನಾವಣೆ

    ಕಣದಲ್ಲಿ ಉಳಿದಿದ್ದಾರೆ 165 ಅಭ್ಯರ್ಥಿಗಳು

    ಒಂದು ಅರ್ಜಿ ತಿರಸ್ಕೃತ, 7 ಅವಿರೋಧ ಆಯ್ಕೆ

    ದೇವದುರ್ಗ: ತಾಲೂಕಿನ ಮೂರು ಗ್ರಾಪಂ ಮತ್ತು ಎರಡು ಗ್ರಾಮಗಳ ತಲಾ ಒಂದೊಂದು ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದವರು ಪೈಕಿ 33 ಜನ ಉಮೇದುವಾರಿಕೆ ಹಿಂಪಡೆದಿದ್ದಾರೆ.

    ಒಟ್ಟು 72 ಸ್ಥಾನಗಳಿಗೆ ನಡೆಯಲಿರುವ ಚುನಾವಣಾ ಕಣದಲ್ಲಿ ಅಂತಿಮವಾಗಿ 165ಅಭ್ಯರ್ಥಿಗಳು ಉಳಿದಿದ್ದಾರೆ. 33 ಸ್ಥಾನ ಹೊಂದಿರುವ ಜಾಲಹಳ್ಳಿ, 26 ಸ್ಥಾನ ಹೊಂದಿರುವ ಚಿಂಚೋಡಿ ಹಾಗೂ 16 ಸ್ಥಾನ ಇರುವ ಕರಡಿಗುಡ್ಡ ಗ್ರಾಪಂ ಮತ್ತು ಗೆಜ್ಜೆಬಾವಿ ಹಾಗೂ ನಗರಗುಂಡದ ತಲಾ ಒಂದು ಸ್ಥಾನಕ್ಕೆ ಡಿ.27ರಂದು ಮತದಾನ ನಡೆಯಲಿದೆ.

    ಜಾಲಹಳ್ಳಿಯಲ್ಲಿ 14ಜನ ನಾಮಪತ್ರ ವಾಪಸ್ ಪಡೆದಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದ್ದರಿಂದ 84ಜನ ಕಣದಲ್ಲಿದ್ದಾರೆ. ಕರಗಿಗುಡ್ಡದಲ್ಲಿ ಇಬ್ಬರು ಉಮೇದುವಾರಿಕೆ ಹಿಂಪಡೆದಿದ್ದರೆ, 25ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಚಿಂಚೋಡಿಯಲ್ಲಿ 15 ಆಕಾಂಕ್ಷಿಗಳು ಸ್ಪರ್ಧೆಯಿಂದ ಹಿಂದೆಸರಿದ್ದರಿಂದ 51ಕ್ಯಾಂಡಿಡೇಟ್‌ಗಳು ಅಂತಿಮ ಕಣದಲ್ಲಿದ್ದಾರೆ. ದೊಂಡಂಬಳಿ ಗ್ರಾಪಂನ ನಗರುಗಂಡದಲ್ಲಿ ಇಬ್ಬರು ನಾಮಪತ್ರ ವಾಪಸ್ ಪಡೆದಿದ್ದು, ಇನ್ನಿಬ್ಬರು ಕಣದಲ್ಲಿ ಉಳಿದಿದ್ದಾರೆ. ಮುಷ್ಟೂರು ಗ್ರಾಪಂನ ಗೆಜ್ಜಬಾವಿ ಒಂದು ಸ್ಥಾನಕ್ಕೆ ಮೂವರು ಕಣದಲ್ಲಿದ್ದಾರೆ. ಕರಡಿಗುಡ್ಡ ಗ್ರಾಪಂ ವ್ಯಾಪ್ತಿಯ 1ನೇ ವಾರ್ಡ್‌ನಿಂದ ಮೂವರು, 2ನೇ ವಾರ್ಡ್‌ನಿಂದ ಇಬ್ಬರು, ಬಾಗೂರು ಹಾಗೂ ಮದಿನಾಪುರ ಗ್ರಾಮದಿಂದ ತಲಾ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಪರಿಶೀಲನೆ ನಡೆಸಿದ ತಹಸೀಲ್ದಾರ್: ದೇವದುರ್ಗ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್ ಹಾಗೂ ಚುನಾವಣಾಧಿಕಾರಿಗಳ ತಂಡ ಜಾಲಹಳ್ಳಿ, ಕರಡಿಗುಡ್ಡ ಹಾಗೂ ಚಿಂಚೋಡಿ ಗ್ರಾಪಂಗೆ ಭೇಟಿ ನೀಡಿ ನಾಮಪತ್ರ ವಾಪಸ್ ಪಡೆವುದು ಸೇರಿ ಚುನಾವಣೆ ಪ್ರಕ್ರಿಯೆ ಪರಿಶೀಲನೆ ನಡೆಸಿದರು. ಡಿ.27ರಂದು ಮತದಾನ ನಡೆಯಲಿದ್ದು, ಮತಕೇಂದ್ರ ತೆರೆಯುವ ಬಗ್ಗೆ ಹಾಗೂ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಿತು.

    ಮೂರು ಗ್ರಾಪಂ ಚುನಾವಣೆ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗ್ರಾಪಂಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಚುನಾವಣೆ ಕರ್ತವ್ಯಕ್ಕೆ ನಿಯೋಜಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶೀಘ್ರ ತರಬೇತಿ ನೀಡಲಾಗುವುದು. ಮತದಾನಕ್ಕೆ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ.
    | ಶ್ರೀನಿವಾಸ್ ಚಾಪಲ್ ದೇವದುರ್ಗ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts