More

    ರೈತರ ಆದಾಯ ಹೆಚ್ಚಳಕ್ಕೆ ಬೇಲರ್ ಸಹಕಾರಿ

    ದೇವದುರ್ಗ: ಭತ್ತ ಕಟಾವು ನಂತರ ಹೊಲದಲ್ಲಿನ ಒಣ ಹುಲ್ಲನ್ನು ಬೇಲರ್ ಮಾಡಿದರೆ ರೈತರ ಆದಾಯ ಹೆಚ್ಚಳಗೊಳ್ಳಲು ಸಹಕಾರಿಯಾಗಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನ ವಿಜ್ಞಾನಿ ಡಾ.ಟಿ.ವೀಣಾ ತಿಳಿಸಿದರು.

    ಗಬ್ಬೂರು ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಗುರುವಾರ ಏರ್ಪಡಿಸಿದ್ದ ಟ್ರ್ಯಾಕ್ಟರ್ ಚಾಲಿತ ಒಣ ಹುಲ್ಲಿನ ಬೇಲರ್ ತಯಾರಿಕೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೇಲರ್ ತಯಾರಿಕೆ ಹೊಸ ಅವಿಷ್ಕಾರವಾಗಿದ್ದು, ಭತ್ತದ ಹುಲ್ಲನ್ನು ಸುರಕ್ಷಿತವಾಗಿ ಹಾಗೂ ಬಹುಕಾಲದವರೆಗೆ ಸಂಗ್ರಹಿಸಲು ಅನುಕೂಲವಾಗಲಿದೆ ಎಂದರು.

    ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ದೇವಾನಂದ ಮಸ್ಕಿ ಮಾತನಾಡಿ, ರೈತರು ಕಡಿಮೆ ಸಮಯ ಮತ್ತು ಖರ್ಚಿನಲ್ಲಿ ಯಂತ್ರದಿಂದ ಹುಲ್ಲಿನ ಬೇಲರ್‌ಗಳನ್ನು ತಯಾರು ಮಾಡಬಹುದಾಗಿದೆ. ಈ ಮೂಲಕ ಹುಲ್ಲು ಹಾಳಾಗುವುದನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts