More

    ನಕಲಿ ಪತ್ರಕರ್ತರ ಹಾವಳಿ ತಡೆಯಲು ಕಾರ್ಯನಿರತ ಪತ್ರಕರ್ತ ಸಂಘ ಒತ್ತಾಯ

    ದೇವದುರ್ಗ: ತಾಲೂಕಿನಲ್ಲಿ ಪತ್ರಕರ್ತರ ಸೋಗಿನಲ್ಲಿ ಅಧಿಕಾರಿಗಳಿಗೆ ಬೆದರಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್, ಸಿಪಿಐ ಹಾಗೂ ತಾಪಂ ಇಒಗೆ ಕಾರ್ಯನಿರತ ಪತ್ರಕರ್ತರ ಸಂಘದ ಮುಖಂಡರು ಮಂಗಳವಾರ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.

    ತಾಲೂಕಿನಲ್ಲಿ ನಕಲಿ ಪತ್ರಕರ್ತರು, ಯುಟ್ಯೂಬ್, ಮೊಬೈಲ್ ವೆಬ್‌ಸೈಟ್ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಬೈಕ್, ಕಾರ್ ಸೇರಿ ವಿವಿಧ ವಾಹನಗಳಿಗೆ ಪ್ರೇಸ್ ಎನ್ನುವ ಬೋರ್ಡ್ ಹಾಕಿಕೊಂಡು ಜನರು ಹಾಗೂ ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ. ಪಿಡಿಒ ಸೇರಿ ಗ್ರಾಪಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಟಾರ್ಗೇಟ್ ಮಾಡಿಕೊಂಡು ವಸೂಲಿಗೆ ಇಳಿದಿದ್ದಾರೆ. ಇದರಿಂದ ಪತ್ರಿಕಾರಂಗವನ್ನು ಜನರು ಅನುಮಾನದಿಂದ ನೋಡುವಂತಾಗಿದೆ ಎಂದು ಆರೋಪಿಸಿದರು.

    ಕೂಡಲೇ ದೇವದುರ್ಗ, ಜಾಲಹಳ್ಳಿ ಹಾಗೂ ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕಲಿ ಪತ್ರಕರ್ತರು ವಾಹನಕ್ಕೆ ಹಾಕಿಸಿರುವ ಪ್ರೇಸ್ ಲೇಬಲ್ ತೆಗೆದು, ಗುರುತಿನ ಚೀಟಿ ಪಡೆದು ಕ್ರಮಕೈಗೊಳ್ಳಬೇಕು. ನಕಲಿ ಪತ್ರಕರ್ತರ ಬಗ್ಗೆ ತಾಲೂಕಿನ ಕೆಳಹಂತದ ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

    ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ದೇಸಾಯಿ, ಕಾರ್ಯದರ್ಶಿ ಅಲಿಬಾಬ ಕರಿಗುಡ್ಡ, ನಾಗರಾಜ ತೇಲ್ಕರ್, ನಾಗರಾಜ ಚುಟ್ಟಿ, ನರಸಿಂಗ್‌ರಾವ್ ಸರ್ಕೀಲ್, ಮಾರ್ಕಂಡಯ್ಯ, ಮೈನುದ್ದೀನ್ ಕಾಟಮಳ್ಳಿ, ವೆಂಕಟೇಶ ನಿಲಗಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts