More

    ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೊಳಿಸಿ

    ದೇವದುರ್ಗ: ಅವೈಜ್ಞಾನಿಕ ಶಿಕ್ಷಕರ ವರ್ಗಾವಣೆ ಪದ್ಧತಿ ಕೈಬಿಟ್ಟು, ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೊಳಿಸಬೇಕು. ವರ್ಗಾವಣೆಯಲ್ಲಿ ಶೇ.25 ನಿಯಮ ಕೈಬಿಟ್ಟು ಮುಕ್ತ ವರ್ಗಾವಣೆ ಜಾರಿಗಳಿಸುವಂತೆ ಒತ್ತಾಯಿಸಿ ಅರಕೇರಾದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

    ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ ಶಿಕ್ಷಕರು ಸಮಸ್ಯೆ ಎದುರಿಸುತ್ತಿದ್ದು, ಪರಿಹಾರಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿ ಮನವಿ ಸಲ್ಲಿಸಿದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ಶಿಕ್ಷಕರ ವರ್ಗಾವಣೆ ನೀತಿ ಅವೈಜ್ಞಾನಿಕವಾಗಿದ್ದು, 15ರಿಂದ 20ವರ್ಷ ಕಾರ್ಯನಿರ್ವಹಿಸಿದ ಶಿಕ್ಷಕರು ಕುಟುಂಬದಿಂದ ದೂರವಿದ್ದು, ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಎನ್‌ಪಿಎಸ್ ಶಿಕ್ಷಕರ ಜೀವನಕ್ಕೆ ಕುತ್ತಾಗಿದೆ ಎಂದು ದೂರಿದರು.

    ಶಿಕ್ಷಕರು ತಾವು ಬಯಸಿದ ಜಿಲ್ಲೆಗೆ ಒಂದು ಸಾರಿ ವರ್ಗಾವಣೆ ಹೊಂದಲು ಅನುಕೂಲ ಮಾಡಿಕೊಡಲು ಒಟಿಎಸ್ ಜಾರಿ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ಎಸ್‌ಎಟಿಎಸ್ ಒಳಗೊಂಡಂತೆ ಆನ್‌ಲೈನ್ ಕಾರ್ಯಗಳ ಒತ್ತಡ ಕಡಿಮೆ ಮಾಡಲು ವಲಯಕ್ಕೆ ಒಬ್ಬ ಕಂಪ್ಯೂಟರ್ ಆಪರೇಟರ್ ನೇಮಕ ಮಾಡಬೇಕು. ಬಡ್ತಿ ಹೊಂದಿದ ಮುಖ್ಯಶಿಕ್ಷಕರಿಗೆ ಕಾಲಮಿತಿ ಬಡ್ತಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷ ವಿರುಪನಗೌಡ, ಕಾರ್ಯದರ್ಶಿ ಬಿ.ಗಂಗಾಧರ್, ಪ್ರಕಾಶ ಹೊನ್ನಟಗಿ, ರಂಗಯ್ಯ, ಬಸಯ್ಯ ಅರಕೇರಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts