More

    ಯುವಕರು ಸ್ವಾರ್ಥಕ್ಕಾಗಿ ಬದುಕದಿರಲಿ

    ದೇವದುರ್ಗ: ಯುವಜನತೆ ವೈಯಕ್ತಿಕ ವಿಚಾರ, ಮನೋರಂಜನೆ, ಮೋಜು ಮಸ್ತಿ ಬದಿಗಿಟ್ಟು ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ದೇಶ ಸೇವೆಯೇ ಈಶ ಸೇವೆ ಎನ್ನುವ ಮಾತು ರೂಢಿಸಿಕೊಳ್ಳಲಿ ಎಂದು ಸಿಪಿಐ ಟಿ.ಸುಭಾಷ್‌ಚಂದ್ರ ಹೇಳಿದರು.
    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಿಕಾಂ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ದೇಶ, ಸಮಾಜ ನಮಗೆ ಎಲ್ಲವನ್ನೂ ನೀಡಿದೆ. ಸ್ವಾರ್ಥಕ್ಕಾಗಿ ಬದುಕುವುದಕ್ಕಿಂತ ದೇಶಕ್ಕಾಗಿ ಬದುಕಿ ಎಂದರು.

    ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಜೀವನದಲ್ಲಿ ಮೇಲೆ ಬರಲು ಸಾಧ್ಯ. ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ, ಚಾರಿತ್ರ್ಯ ಬಹಳ ಮುಖ್ಯವಾಗಿರುತ್ತದೆ. ನಾಡಿನ ಸಂಸ್ಕೃತಿ ದೇಶದ ಸಂವಿಧಾನ ಚಿಂತನೆಯಲ್ಲಿ ತೊಡಗಿಸಿಕೊಂಡರೆ ಸಾಧನೆ ಸಾಧ್ಯವಿದೆ ಎಂದರು.
    ಸಂಪನ್ಮೂಲ ವ್ಯಕ್ತಿ ಬಸವರಾಜ ಉಮ್ರಾಣಿ ಬೆಳಗಾಂವ್ ಮಾತನಾಡಿ, ಯುವಕರು ಶಿಕ್ಷಣದಿಂದ ವಂಚಿತರಾದರೆ ದೇಶದ ಸಂಸ್ಕೃತಿ ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಬಡತನ ಮೆಟ್ಟಿನಿಂತು ಜೀವನ ಕಟ್ಟಿಕೊಳ್ಳಬೇಕು ಎಂದರು. ಉಪನ್ಯಾಸಕರಾದ ಡಾ.ಮಲ್ಲಯ್ಯ ಅತ್ತೂನೂರು, ಡಾ.ಮರಿಯಪ್ಪ, ಮುನಿಯಪ್ಪ ನಾಗೋಲಿ, ಕೃಷ್ಣ ಅಕ್ಕರಿಕ್ಕಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts