More

    ದತ್ತಿಯಿಂದ ಕನ್ನಡ ಕಟ್ಟುವ ಕೆಲಸ, ಕಸಾಪ ತಾಲೂಕು ಅಧ್ಯಕ್ಷ ಕೋಳೂರು ಹೇಳಿಕೆ

    ದೇವದುರ್ಗ: ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ದತ್ತಿ ಉಪನ್ಯಾಸ ಕಾರ್ಯಕ್ರಮಗಳಿಂದ ಯುವ ಕವಿಗಳು, ಲೇಖಕರು ಬೆಳಕಿಗೆ ಬರಲು ಸಾಧ್ಯವಿದ್ದು, ಸಾಹಿತ್ಯವೂ ಬೆಳವಣಿಗೆ ಕಾಣಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಕೋಳೂರು ಹೇಳಿದರು.

    ಪಟ್ಟಣದ ವಿದ್ಯಾಗಿರಿಯ ಪರಿಶಿಷ್ಟ ಪಂಗಡ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಅಮರಮ್ಮ ಶೆಟ್ಟಿ, ಪಾರ್ವತಮ್ಮ ವೀರಣ್ಣ ಬಳೆ, ಎಚ್.ಶಾಂತಪ್ಪ ಮತ್ತು ಶರಣಪ್ಪ ಗುಡದಿನ್ನಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ದತ್ತಿಯಿಂದ ಪೂರ್ವಜರ ಹೆಸರನಲ್ಲಿ ಕನ್ನಡ ಕಟ್ಟುವಂತ ಕೆಲಸವಾಗುತ್ತಿದೆ. ದೇಶದ ಬಹುತೇಕ ಪ್ರಾದೇಶಿಕ ಭಾಷೆಗಳು ಸಂವಿಧಾನಾತ್ಮಕ ಮಾನ್ಯತೆ ಪಡೆದರೂ ಅಳಿವಿನಂಚಿನಲ್ಲಿವೆ ಎಂದು ಕಳವಳ ವ್ಯಕ್ತಪಡಿಸಿದರು.

    ಮಡಿವಾಳ ಮಾಚಿದೇವ ಹಾಗೂ ಶರಣ ಸಾಹಿತ್ಯ ಕುರಿತು ಸಾಬಣ್ಣ ನಾಯಕ ಮಾತನಾಡಿ, 12ನೇ ಶತಮಾನದಲ್ಲಿ ವಚನ ಸಾಹಿತ್ಯ ಧಾರ್ಮಿಕ, ಸಾಮಾಜಿಕ ಸಮಾನತೆ ಕ್ರಾಂತಿಗೆ ನಾಂದಿಯಾಯಿತು. ಅಂದಿನ ಶರಣರೆಲ್ಲರೂ ಯಾವುದೇ ತತ್ವಶಾಸ್ತ್ರ ಪ್ರತಿಗಳನ್ನು ಓದಿರಲಿಲ್ಲ. ಜನಸಾಮಾನ್ಯರೊಡನೆ ಬೆರೆತು ತಮಗಾದ ಅನುಭವದಿಂದ ವಚನಗಳನ್ನು ರಚಿಸುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ್ದರು. ಆದರೆ ಅಂದು ಸಮಾಜ ಒಪ್ಪಲಿಲ್ಲ. ಹಿಂದಿನವರು ಅಳವಡಿಸಿಕೊಳ್ಳುತ್ತಿಲ್ಲ. ಅನುಭವ ಮಂಟಪದಲ್ಲಿದ್ದ ಎಲ್ಲ ಶರಣರಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಹಿನ್ನೆಲೆಯಲ್ಲಿ ಅವರನ್ನು ಒಪ್ಪಲಿಲ್ಲವೆಂದು ಅಲ್ಲಮಪ್ರಭು ಸೇರಿ 12ನೇ ಶತಮಾನದ ಶರಣರು ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts