More

    ಗುಣ ಆದವನನ್ನೂ ಮನೆಗೆ ಸೇರಿಸಿಕೊಳ್ಳದ ಕುಟುಂಬ ಸದಸ್ಯರು!

    ಕೊಪ್ಪಳ: ಕರೊನಾ ಸೋಂಕಿನ ವಿರುದ್ಧ 14 ದಿನಗಳ ಕಾಲ ಸೆಣಸಾಡಿ ಬದುಕಿದ ವ್ಯಕ್ತಿಯನ್ನು ಹರ್ಷದಿಂದ ಮನೆಗೆ ಕರೆದೊಯ್ಯಬೇಕಾದ ಮನೆಯವರೇ ಮನೆಗೆ ಬಾರದಂತೆ ವಿರೋಧಿಸಿರುವ ಪ್ರಸಂಗ ನಡೆದಿದೆ.

    ತಮಿಳುನಾಡಿನಿಂದ ಆಗಮಿಸಿದ್ದ 25 ವರ್ಷದ ಯುವಕನಿಗೆ ಮೇ 18ರಂದು ಕರೊನಾ ಸೋಂಕು ದೃಢಪಟ್ಟಿತ್ತು. ಸತತ 14 ದಿನಗಳ ಕಾಲ ಚಿಕಿತ್ಸೆ ಬಳಿಕ ಗುಣವಾಗಿದ್ದಾನೆ. ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಆರೋಗ್ಯ ಸಿಬ್ಬಂದಿಯೇನೊ ಹರ್ಷದಿಂದ ಚಪ್ಪಾಳೆ ತಟ್ಟಿ ಹಣ್ಣು ನೀಡಿ ಬೀಳ್ಕೊಟ್ಟರು.

    ಇದನ್ನೂ ಓದಿ: ಗಾಂಜಾ ಸೇವನೆ ವಿಷಯಕ್ಕೆ ಜಗಳ: ಸ್ನೇಹಿತನಿಗೇ ಚೂರಿ ಇರಿತ!

    ಆದರೆ ಮನೆಗೆ ಕರೆದೊಯ್ಯಲು ಮನೆಯವರು ಹಿಂದೇಟು ಹಾಕಿದರು! ಹೀಗಾಗಿ ಬಿಡುಗಡೆಯಾದರೂ ಆ ಯುವಕ ಮನೆಗೆ ತೆರಳಲು ನಿರಾಕರಿಸಿದ. ಕುಟುಂಬ ಸದಸ್ಯರೇ ಹಿಂದೇಟು ಹಾಕುವುದಕ್ಕೂ ಬಲವಾದ ಕಾರಣ ಇತ್ತು. ಅದನ್ನು ಆ ಯುವಕನೇ ಬಹಿರಂಗಪಡಿಸಿದ.

    ‘‘ನನ್ನ ಕುಟುಂಬದವರು ಬಾಡಿಗೆ ಮನೆಯಲ್ಲಿದ್ದಾರೆ. ಮನೆಯವರು ಹಾಗೂ ಅಕ್ಕಪಕ್ಕದವರು ನನ್ನನ್ನು ಮನೆಗೆ ಕರೆತರದಂತೆ ನನ್ನ ಕುಟುಂಬದವರಿಗೆ ಸೂಚಿಸುತ್ತಿದ್ದಾರೆ. 150ಕ್ಕೂ ಅಧಿಕ ಜನರು ಅಧಿಕಾರಿಗಳಿಗೆ ಮನವಿಯನ್ನೂ ಕೊಟ್ಟಿದ್ದಾರೆ. ಹೀಗಾಗಿ ನನಗೆ ಬೇರೆಡೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ’ ಎಂದು ಅಧಿಕಾರಿಗಳ ಬಳಿ ಯುವಕ ಅಳಲು ತೋಡಿಕೊಂಡ. ಸದ್ಯ ಯುವಕನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ, ಸಮೀಪದ ಹೊಟೇಲ್‌ನಲ್ಲಿ ಇರಿಸಲಾಗಿದೆ.

    ಇದನ್ನೂ ಓದಿ: ಏಕಾಏಕಿ ಬಂದು ಪತ್ನಿ ಮೃತಪಟ್ಟಿದ್ದಾಳೆ ಎಂದ ಪತಿ; ಸಾವಿನ ಸುತ್ತ ಹಲವು ಅನುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts