More

    ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್​ ರಾಮ್​ ರಹೀಂಗೆ ಜೀವಾವಧಿ ಶಿಕ್ಷೆ

    ಚಂಡೀಗಢ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್​ಮೀತ್​ ರಾಮ್ ರಹೀಂ ಮತ್ತು ಇತರ ನಾಲ್ವರಿಗೆ ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಡೇರಾದ ಮ್ಯಾನೇಜರ್​ ಆಗಿದ್ದ ರಣಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಈ ಶಿಕ್ಷೆ ನೀಡಲಾಗಿದೆ.

    ಹರಿಯಾಣದ ಸೀರ್ಸಾದಲ್ಲಿ ಪ್ರಧಾನ ಆಶ್ರಮ ಹೊಂದಿರುವ ಡೇರಾ ಸಚ್ಚಾ ಸೌದಾ ಪಂಥದ ಅನುಯಾಯಿಯೂ ಆಗಿದ್ದ, ಮಾಜಿ ಡೇರಾ ಮ್ಯಾನೇಜರ್ ರಂಜಿತ್ ಸಿಂಗ್​​ರನ್ನು 2002ನೇ ಇಸವಿಯಲ್ಲಿ ಗುಂಡಿಕ್ಕಿ ಕೊಲ್ಲಲ್ಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಿ ಐಪಿಸಿ ಸೆಕ್ಷನ್​ 302 ಮತ್ತು 120 ಬಿ ಅಡಿ ಆರೋಪಪಟ್ಟಿ ಸಲ್ಲಿಸಿತ್ತು.

    ಈ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ಅಕ್ಟೋಬರ್ 8 ರಂದು ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಮತ್ತು ಇತರ ಆರೋಪಿಗಳಾದ ಜಸ್ಬೀರ್, ಸಬ್ದಿಲ್, ಅವತಾರ್, ಕ್ರಿಶನ್ ಲಾಲ್ ಮತ್ತು ದಿ. ಇಂದರ್ ಸೇನ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಇಂದು ಐವರೂ ಆರೋಪಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)

    ಹಾಡಿಯ ಜನರಿಗೆ ಕ್ರೈಸ್ತ​ ಧರ್ಮ ಬೋಧಿಸಿ ಮತಾಂತರದ ಯತ್ನ

    ಪಾಪ ಪಾಂಡು ಖ್ಯಾತಿಯ ಹಿರಿಯ ಕಲಾವಿದ ಶಂಕರ್ ರಾವ್​ ಇನ್ನಿಲ್ಲ

    ಕೋರ್ಟ್​ ಒಳಗೇ ವಕೀಲನ ಮೇಲೆ ಗುಂಡು! ಕೃತ್ಯಕ್ಕೆ ಕಂಟ್ರಿ ಪಿಸ್ತೋಲ್ ಬಳಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts