More

    ಚಿಕ್ಕಮಗಳೂರು ಜಿಲ್ಲೆಯಲ್ಲಿದೆ ಮಂಗನ ಕಾಯಿಲೆ ವೈರಾಣು

    ಜಯಪುರ: ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೆಎಫ್​ಡಿ) ವೈರಾಣು ಇರುವುದು ದೃಢಪಟ್ಟಿದೆ. ಕೊಪ್ಪ ತಾಲೂಕಿನ ಅತ್ತಿಕುಡಿಗೆ ಗ್ರಾಪಂ ವ್ಯಾಪ್ತಿಯ ಸಾತ್​ಕುಡಿಗೆ ಅರಣ್ಯದಲ್ಲಿದ್ದ ಉಣ್ಣೆಯಲ್ಲಿ ಕೆಎಫ್​ಡಿ ವೈರಾಣು ಇರುವುದಾಗಿ ಶಿವಮೊಗ್ಗ ವೈರಾಣು ಪ್ರಯೋಗಾಲಯ ಖಚಿತಪಡಿಸಿದೆ.

    ಮೇಗುಂದಾ ಹೋಬಳಿ ಶಾಂತಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಸಾತ್​ಕುಡಿಗೆ, ಕಲ್ಲುಗುಡ್ಡೆ ಹಾಗೂ ಮೆಣಸಿನ ಹಾಡ್ಯ ಪ್ರದೇಶಗಳ ಉಣ್ಣೆಗಳ(ಒಣಗು) ಮಾದರಿಯನ್ನು ಸಂಗ್ರಹಿಸಿದ ಆರೋಗ್ಯ ಇಲಾಖೆ ಶಿವಮೊಗ್ಗದ ವೈರಾಣು ಪ್ರಯೋಗಾಲಯಕ್ಕೆ ಕಳಿಸಿತ್ತು. ಅದರಲ್ಲಿ ಸಾತ್​ಕುಡಿಗೆ ಅರಣ್ಯ ಪ್ರದೇಶದಲ್ಲಿ ಸಂಗ್ರಹಿಸಿದ ಉಣ್ಣೆಯಲ್ಲಿ ಕೆಎಫ್​ಡಿ ವೈರಾಣು ಇರುವುದು ದೃಢಪಡಿಸಿದೆ. ಇದು ಈ ಭಾಗದಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಕೃಷಿಕರು ಹಾಗೂ ಗಿರಿಜನರನ್ನು ಆತಂಕಕ್ಕೆ ದೂಡಿದೆ.

    ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಉಣ್ಣೆಗಳಿಂದ ಹರಡುವ ಕಾಯಿಲೆ ಇದಾಗಿದ್ದು ಮಂಗಗಳು ಹಾಗೂ ಮನುಷ್ಯರನ್ನು ಹೆಚ್ಚಾಗಿ ಭಾಧಿಸುತ್ತದೆ. ವೈರಾಣುವಿರುವ ಉಣ್ಣೆ ಕಚ್ಚುವುದರಿಂದ ಕಾಯಿಲೆ ಹರಡಲಿದೆ. ಆರೋಗ್ಯ ಇಲಾಖೆ ನೀಡುವ ಲಸಿಕೆ ಹಾಕಿಸಿಕೊಳ್ಳುವುದರಿಂದ ಮತ್ತು ಕಾಡಿಗೆ ಹೋಗುವಾಗ ಆರೋಗ್ಯ ಇಲಾಖೆ ನೀಡುವ ಎಣ್ಣೆಯನ್ನು ಮೈಗೆ ತಿಕ್ಕಿಕೊಳ್ಳುವುದರಿಂದ ರೋಗ ಬಾರದಂತೆ ತಡೆಗಟ್ಟಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts