More

    ದೇಸಿ ಕಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ

    ಸಾಗರ: ಕನ್ನಡ ಸಂಸ್ಕೃತಿ ಇಲಾಖೆ ಕಲೆ ಪ್ರದರ್ಶನ ಮೂಲಕ ಕರ್ನಾಟಕದ ಎಲ್ಲ ಜನಪದ ಕಲಾವಿದರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದ ದೇಸಿ ಕಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದು ಡೊಳ್ಳು ಕಲಾವಿದ ಬೆಳ್ಳಿಯಪ್ಪ ಹೇಳಿದರು.

    ಆನಂದಪುರ ಸಮೀಪದ ಕೆ.ಹೊಸಕೊಪ್ಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನá-ವಾರ ಸಂಜೆ ಆಯೋಜಿಸಿದ್ದ ಸುಗ್ಗಿ-ಹುಗ್ಗಿ ಮೆರವಣಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಾನಪದ ಕಲೆಯನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

    ಜಾನಪದ ಅಕಾಡೆಮಿ ಸದಸ್ಯ ಎಸ್.ಕೆ.ಬೂದ್ಯಪ್ಪ ಮಾತನಾಡಿ, ಕರ್ನಾಟಕದ ವಿವಿಧ ಜಾನಪದ ಕಲೆಗಳು ಆಯಾ ಪ್ರದೇಶದ ಶ್ರಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರಂತರವಾಗಿ ಜಾನಪದ ಕಲಾವಿದರಿಗೆ ಕಾರ್ಯಕ್ರಮ ಕೊಡುವ ಮೂಲಕ ಕಲೆಗೆ ವೇದಿಕೆ ನಿರ್ವಿುಸಿ ಕೊಡುವ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಳೇ ತಲೆಮಾರು ಮತ್ತು ಹೊಸ ತಲೆಮಾರಿನ ಕಲಾವಿದರಿಗೆ ವೇದಿಕೆ ನಿರ್ವಿುಸಿಕೊಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಜಾನಪದ ಜಾತ್ರೆ, ಸುಗ್ಗಿ-ಹುಗ್ಗಿ ಜತೆಗೆ ಜಾನಪದ ಕಲಾವಿದರಿಗೆ ಪರಿಕರ ತೆಗೆದುಕೊಳ್ಳಲು ಆರ್ಥಿಕ ಸಹಾಯ ಮಾಡುತ್ತಿದೆ ಎಂದು ಹೇಳಿದರು.

    ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು. ಗೌತಮಪುರ ಗ್ರಾಪಂ ಸದಸ್ಯೆ ರೇಣುಕಾ ಮರಿಯಪ್ಪ, ಉದ್ಯಮಿ ಮಹೇಶ್, ಬಿ.ಸಿ. ರಮೇಶ್, ಸವೋದಯ ಸಂಘದ ಉಪಾಧ್ಯಕ್ಷ ಪ್ರಕಾಶ, ಗೌತಮಪುರ ಪಿಡಿಒ ವಾಣಿಶ್ರೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts