More

    ಕಾಫಿ ನಾಡಿನಲ್ಲಿ ಡೆಂೆ ಉಲ್ಬಣ

    ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಡೆಂೆ ಮಹಾಮಾರಿ ಅಬ್ಬರ ಶುರುವಾಗಿದೆ. ಕೆಲ ದಿನಗಳಿಂದ ಡೆಂೆ ಜ್ವರ ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

    ಜಿಲ್ಲೆಯಲ್ಲಿ ಈವರೆಗೆ 179 ಜನರು ಡೆಂೆ ಜ್ವರದಿಂದ ಬಾಧಿತರಾಗಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಡೆಂೆ ಮಾತ್ರ ಕಳೆದ 15 ದಿನಗಳಿಂದ ಈಚೆಗೆ ಕಾಫಿನಾಡಿಗರನ್ನು ಹೆಚ್ಚಾಗಿ ಕಾಡಲಾರಂಭಿಸಿದೆ. ಹೀಗಾಗಿ ಜ್ವರದಿಂದ ಬಳಲುತ್ತಿರುವವರನ್ನು ಡೆಂೆ ತಪಾಸಣೆಗೆ ಒಳಪಡಿಸಲಾಗುತ್ತಿದೆ.
    ಸಾಮಾನ್ಯವಾಗಿ ಜೂನ್‌ನಿಂದ ನವೆಂಬರ್‌ವರೆಗೆ ಡೆಂೆ ಜ್ವರ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಜೂನ್, ಜುಲೈನಲ್ಲಿ ಡೆಂೆ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಸೆಷ್ಟೆಂಬರ್‌ನಿಂದ ಡೆಂೆ ಪ್ರಕರಣಗಳು ಅಲ್ಲಲ್ಲಿ ಕಾಣಿಸಿಕೊಳ್ಳಲಾರಂಭಿಸಿ ತಿಂಗಳ ಅಂತ್ಯದಿಂದ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚುತ್ತಿದೆ.
    ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಡೆಂೆ ಪ್ರಕರಣ ಕಾಣಿಸಿಕೊಳ್ಳುತ್ತಿದೆೆ. ಜಿಲ್ಲೆಯ 108 ಹಳ್ಳಿಗಳಲ್ಲಿ ಡೆಂೆ ಕಾಣಿಸಿಕೊಂಡಿದ್ದು ಈ ಹಳ್ಳಿಗಳಲ್ಲಿ 89912 ಜನ ವಾಸಿಸುತ್ತಿದ್ದಾರೆ. ಹೀಗಾಗಿ ಈ ಹಳ್ಳಿಯಲ್ಲಿರುವ ಇತರರಿಗೆ ಡೆಂೆ ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಈ ಮೂಲಕ ಡೆಂೆ ನಿಯಂತ್ರಿಸಲು ಮುಂದಾಗಿದೆ.
    ಕಾರಣಗಳು:
    ಕಾಫಿ ನಾಡಿನಲ್ಲಿ ಜೀವಜಲವೇ ಡೆಂೆ ಜ್ವರಕ್ಕೆ ಕಾರಣ ಆಗುತ್ತಿರುವುದು ವಿಪರ್ಯಾಸ. ಹೌದು. ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಎರಡು ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ಜನ ಮೂರು ದಿನಕ್ಕಾಗುವಷ್ಟು ನೀರನ್ನು ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಸಂಗ್ರಹಿಸಿದ ನೀರಿನಲ್ಲೇ ಲಾರ್ವಾ ಬೆಳೆದು ಸೊಳ್ಳೆಗಳಾಗಿ ಡೆಂೆ ಹಬ್ಬುತ್ತಿದೆ. ಡೆಂೆ ಪ್ರಕರಣ ಪತ್ತೆಯಾದ ಹಳ್ಳಿಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ ಸಂಗ್ರಹಿಸಿಟ್ಟ ನೀರಿನಲ್ಲೇ ಸೊಳ್ಳೆಗಳು ಉತ್ಪತ್ತಿಯಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಸ್ವಚ್ಛತೆ ಕೊರತೆಯಿರುವ ಹಳ್ಳಿಗಳಲ್ಲಿಯೂ ಡೆಂೆ ಕಾಣಿಸಿಕೊಂಡಿದೆ. ಇನ್ನು ಮಳೆಗಾಲ ಕಡಿಮೆ ಆಗಿರುವುದರಿಂದ ಈ ಅವಧಿಯಲ್ಲಿ ನೀರು ಅಲ್ಲಲ್ಲಿ ನಿಂತಿದ್ದು ಇದರಿಂದಲೂ ರೋಗ ಹರಡುವ ಸೊಳ್ಳೆಗಳ ಸಂತತಿ ಹೆಚ್ಚಾಗುತ್ತಿದೆ.
    ಮುನ್ನೆಚ್ಚರಿಕೆ ವಹಿಸಿ: ಜ್ವರದ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಡಿಎಚ್‌ಒ ಅಶ್ವತ್ಥಬಾಬು ಮನವಿ ಮಾಡಿದ್ದಾರೆ. ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ. ನೀರಿನ ತೊಟ್ಟಿಗಳು ಹಾಗೂ ನೀರು ಸಂಗ್ರಹ ಮಾಡುವ ಎಲ್ಲ ವಸ್ತುಗಳನ್ನು ಕನಿಷ್ಠ ಎರಡು ಮೂರು ದಿನಗಳಿಗೊಮ್ಮೆ ಸಾಬೂನು ಬಳಸಿ ಸ್ವಚ್ಛಗೊಳಿಸುವಂತೆ ಸಲಹೆ ನೀಡಿದ್ದಾರೆ.
    ಮನೆ ಮನೆಗೆ ಭೇಟಿ: ಜ್ವರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ರೋಗ ಎಲ್ಲೆಲ್ಲಿ ಕಾಣಿಸಿಕೊಳ್ಳುತ್ತಿದೆಯೋ ಆ ಹಳ್ಳಿಗಳ ಪ್ರತಿ ಮನೆಗೂ ಭೇಟಿ ನೀಡಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಮನೆಯ ನೀರಿನ ತೊಟ್ಟಿಗಳು, ಡ್ರಮ್, ನೀರು ಸಂಗ್ರಹ ಪಾತ್ರೆಗಳನ್ನು ಪರಿಶೀಲನೆ ಮಾಡಿ ಸ್ವಚ್ಛತೆ ಬಗ್ಗೆ ಗಮನಕೊಡುವಂತೆ ಜನರಿಗೆ ಮಾಹಿತಿ ನೀಡುತ್ತಿದ್ದಾರೆ. ಜತೆಗೆ ಹಳ್ಳಿಗಳ ಸ್ವಚ್ಛತೆ ಬಗ್ಗೆಯೂ ಗಮನ ಹರಿಸುತ್ತಿದ್ದಾರೆೆ.
    ಡೆಂೆ ಜ್ವರಕ್ಕೆ ನಿರ್ದಿಷ್ಟ ಔಷಧವಿಲ್ಲ. ಆದರೆ ರೋಗ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಜನರು ಡೆಂೆ ಬಗ್ಗೆ ಎಚ್ಚರದಿಂದ ಇದ್ದು ಮುಂಜಾಗ್ರತೆ ವಹಿಸಬೇಕು. ಜನರು ಮುಂಜಾಗ್ರತಾ ಕ್ರಮ ಸರಿಯಾಗಿ ಪಾಲಿಸಿದಲ್ಲಿ ಡೆಂೆ ನಿಯಂತ್ರಣ ಸಾಧ್ಯ. ಹೀಗಾಗಿ ಮನೆಮನೆಗೆ ಹೋಗಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಡಿಎಚ್‌ಒ ಡಾ. ಅಶ್ವತ್ಥಬಾಬು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts