More

    ಪ್ರಜಾತಂತ್ರ ವ್ಯವಸ್ಥೆ ಬಲಪಡಿಸಲು ಪ್ರತಿಯೊಬ್ಬ ಮತದಾರರು ಸಹಕರಿಸಿ

    ಹನುಮಸಾಗರ: ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಪಿಡಿಒ ದೇವೇಂದ್ರಪ್ಪ ಕಮತರ ಹೇಳಿದರು.

    ಶೇ.100 ಮತದಾನ ಆಗುವಂತೆ ನೋಡಿಕೊಳ್ಳಬೇಕು

    ಇಲ್ಲಿನ ವಿವಿಧ ವಾರ್ಡ್‌ಗಳಲ್ಲಿ ಕಳೆದ ಬಾರಿ ಕಡಿಮೆ ಮತದಾನವಾದ ಬೂತ್‌ಗಳಲ್ಲಿ ಮತದಾನ ಜಾಗೃತಿ ಮೂಡಿಸಿ ಮಾತನಾಡಿದರು. ಮೇ 10ರಂದು ವಿಧಾನಸಭಾ ಚುನಾವಣೆ ಇದ್ದು, ಶೇ.100 ಮತದಾನ ಆಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು. ಗ್ರಾಪಂ ದೇವಾಂಗ ಸಮುದಾಯ ಭವನ, ನೆಮ್ಮದಿ ಕೇಂದ್ರ, ಮಾರುಕಟ್ಟೆ, ಮೋಟಗಿ ಕಾಲನಿಯಲ್ಲಿ ಜಾಗೃತಿ ಮೂಡಿಸಲಾಯಿತು.

    ಇದನ್ನೂ ಓದಿ: ಬಸ್ ಟಿಕೇಟ್‌ನಲ್ಲೂ ಮತದಾನ ಜಾಗೃತಿ

    ಈ ವೇಳೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ತಾಲೂಕು ಸಂಜೀವಿನಿ ಯೋಜನೆ ಮೇಲ್ವಿಚಾರಕ ಮಾದೇಗೌಡ ಪೊ.ಪಾಟೀಲ್, ಸಂಜೀವಿನಿ ಒಕ್ಕೂಟದ ಸಿಬ್ಬಂದಿ ಶಕುಂತಲಾ ಹಲಕೋಲಿ, ಲಕ್ಷ್ಮೀ ಬಸುದೆ, ವಿಜಯಲಕ್ಷ್ಮೀ ಬಾಚಲಾಪುರ, ಮಂಜುಳಾ ದ್ಯಾವಣ್ಣವರ, ಲಕ್ಷ್ಮೀ ಬಡಿಗೇರ ಇತರರಿದ್ದರು.

    ಪಟ್ಟಲಚಿಂತಿ ಗ್ರಾಮದಲ್ಲಿ ಮತದಾನ ಜಾಗೃತಿ

    ಮಾಲಗಿತ್ತಿ: ಗ್ರಾಪಂ ವ್ಯಾಪ್ತಿಯ ಪಟ್ಟಲಚಿಂತಿ ಗ್ರಾಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ತಾಪಂ ಇಒ ಹನುಮಂತಗೌಡ ಪಾಟೀಲ್ ಚಾಲನೆ ನೀಡಿದರು. ಪಿಡಿಒ ಬಸವರಾಜ ಸಂಕನಾಳ, ಗ್ರಾಪಂ ಸಿಬ್ಬಂದಿ ಮಹ್ಮದ ರಫೀಕ್, ತಿಮಣ್ಣ, ಮಾರುತಿ, ಕಾಯಕ ಬಂಧು ಹನುಮಂತ ಕುರಂಗದ, ವಿರೇಶ ಉಳ್ಳಾಗಡ್ಡಿ, ಶಿವಾನಂದಪ್ಪ ಉಳ್ಳಾಗಡ್ಡಿ, ಅಶೋಕ ಹುಲ್ಲೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts