More

    ಬಿಹಾರದಲ್ಲಿ ಮತ್ತೆ ಪ್ರಜಾಪ್ರಭುತ್ವಕ್ಕೆ ಗೆಲುವಾಗಿದೆ- ಪ್ರಧಾನಿ ನರೇಂದ್ರ ಮೋದಿ

    ನವದೆಹಲಿ: ಬಿಹಾರ ವಿಧಾನ ಸಭೆಯ ಚುನಾವಣೆಯ ಫಲಿತಾಂಶ ಅಂತಿಮಗೊಳ್ಳುತ್ತ ಸಾಗಿರುವಂತೆಯೇ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಬಿಹಾರದಲ್ಲಿ ಪ್ರಜಾಪ್ರಭುತ್ವ ಮತ್ತೆ ಗೆಲುವು ದಾಖಲಿಸಿದೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನ ಗೆಲುವು ಇದು. ಎನ್​ಡಿಎ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ.

    ಸರಣಿ ಟ್ವೀಟ್ ಮಾಡಿರುವ ಮೋದಿ, ಬಿಹಾರ ಯುವಜನತೆ ಆತ್ಮನಿರ್ಭರ ಬಿಹಾರದ ಪರವಾಗಿ ನಿಂತಿದ್ದಾರೆ. ಎನ್​ಡಿಎ ಆಡಳಿತದ ಮೇಲೆ ಬಿಹಾರದ ಜನತೆ ವಿಶ್ವಾಸವಿಟ್ಟಿದ್ದಾರೆ. ಅವರ ಈ ಉತ್ಸಾಹ, ಹುಮ್ಮಸ್ಸು ಎನ್​ಡಿಎಯಲ್ಲಿ ಶಕ್ತಿಯನ್ನು ತುಂಬಿದೆ. ಬಿಹಾರದ ಸಂತುಲಿತ ಅಭಿವೃದ್ಧಿಗಾಗಿ ಎನ್​ಡಿಎ ಸರ್ಕಾರ ಪೂರ್ಣಬದ್ಧತೆಯೊಂದಿಗೆ ಕೆಲಸ ಮಾಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.

    ಇದನ್ನೂ ಓದಿ: ಇಮಾಮ್​ಗಂಜ್​ನಲ್ಲಿ ಜಿತನ್ ರಾಮ್​, ಹಸನ್​ಪುರನಲ್ಲಿ ತೇಜ್​ ಪ್ರತಾಪ್​ ಗೆಲುವಿನ ನಗೆ

    ಬಿಹಾರದಲ್ಲಿ 15 ವರ್ಷಗಳ ಆಳ್ವಿಕೆಯ ನಂತರವೂ ಎನ್​ಡಿಎ ಸರ್ಕಾರದ ಆಡಳಿತದ ಬಗ್ಗೆ ಜನರಿಗೆ ವಿಶ್ವಾಸವಿದೆ. ಬಡವರು, ಮಧ್ಯಮವರ್ಗ, ಮಹಿಳೆಯರು ಎಲ್ಲರೂ ಸರ್ಕಾರದ ಪರವಾಗಿದ್ದಾರೆ. ಸಬ್ ಕಾ ಸಾಥ್​, ಸಬ್​ ಕಾ ವಿಕಾಸ್ ಸಬ್​ ಕಾ ವಿಶ್ವಾಸ್ ಎಂಬ ನಮ್ಮ ಮೂಲ ಮಂತ್ರದ ಮೇಲೆ ಎಲ್ಲರಿಗೂ ವಿಶ್ವಾಸವಿದೆ ಎಂಬುದಕ್ಕೆ ಜನಾದೇಶ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)

    ಬಿಹಾರ ಚುನಾವಣೆ 2020: ಅಧಿಕಾರ ಗದ್ದುಗೆ ಸಮೀಪ ಎನ್​ಡಿಎ-ಮಹಾಗಟಬಂಧನ್ ಪೈಪೋಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts