More

    ವೀರಶೈವ-ಲಿಂಗಾಯತ ಮಠಾಧೀಶರು ಮುಖ್ಯಮಂತ್ರಿಯವರಿಗೆ ಬರೆದಿರುವ ಮನವಿ ಪತ್ರದಲ್ಲೇನಿದೆ?; ಇಲ್ಲಿದೆ ವಿವರ…

    ಬೆಂಗಳೂರು: ಕೇಂದ್ರ ಸರ್ಕಾರ ಪ್ರಕಟಿಸಿರುವ ಇತರ ಹಿಂದುಳಿದ ವರ್ಗಗಳ ಪಟ್ಟಿ(ಒಬಿಸಿ)ಯಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಸೇರಿಸಬೇಕು ಎಂಬುದಾಗಿ ವೀರಶೈವ-ಲಿಂಗಾಯತ ಮಠಾಧೀಶರು ಪಟ್ಟು ಹಿಡಿದಿದ್ದು, ಆ ಸಂಬಂಧ ಬೃಹತ್ ಸಭೆಯನ್ನೂ ನಡೆಸಿದ್ದಾರೆ.

    ವೀರಶೈವ-ಲಿಂಗಾಯತ ಸಮುದಾಯದ ಹಲವಾರು ಮಠಾಧೀಶರು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಲ್ಲದೆ, ಒಬಿಸಿ ಪಟ್ಟಿಗೆ ಸಮುದಾಯದ ಎಲ್ಲ ಪಂಗಡಗಳನ್ನು ಸೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಅವರಿಗೆ ಮನವಿಪತ್ರವನ್ನೂ ಬರೆದಿದ್ದಾರೆ.

    ರಾಷ್ಟ್ರೀಯ ವೀರಶೈವ-ಲಿಂಗಾಯತ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ನಡೆದ ಈ ಸಭೆಯಲ್ಲಿ ಮುಂದಿನ ನಿಲುವು-ನಡೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ ಬಳಿಕ ಈ ಮನವಿ ಪತ್ರವನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಪರಮಶಿವಯ್ಯ ಅವರಿಗೆ ಹಸ್ತಾಂತರಿಸಲಾಯಿತು. ಮಠಾಧೀಶರು ನೀಡಿರುವ ಈ ಮನವಿಯನ್ನು ಪರಮಶಿವಯ್ಯ ಅವರು ಫೆ. 19ರಂದು ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಿರುವರು. ಈ ಮನವಿ ಪತ್ರದಲ್ಲೇನಿದೆ ಎಂಬ ವಿವರ ಇಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts