More

    ಕನಿಷ್ಠ 26,000 ರೂ. ವೇತನಕ್ಕೆ ಒತ್ತಾಯ, ಅಂಗನವಾಡಿ ನೌಕರರ ಹೋರಾಟಕ್ಕೆ ಬೆಂಬಲ

    ಮಂಗಳೂರು: ಕನಿಷ್ಠ ವೇತನದಡಿ ಅಂಗನವಾಡಿ ನೌಕರರಿಗೆ ಕನಿಷ್ಠ 26,000 ರೂ. ವೇತನ ನೀಡಬೇಕು. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಜಾಣಕಿವುಡರಂತೆ ವರ್ತಿಸುತ್ತಿದೆ. ಕನಿಷ್ಠ ಕೂಲಿ ಜಾರಿ ಮಾಡದಿರುವುದು ಮಾತ್ರವಲ್ಲ, 2018ರಿಂದ ಕೇಂದ್ರ ಸರ್ಕಾರ ವೇತನದಲ್ಲಿ ಒಂದು ರೂ. ಕೂಡ ಹೆಚ್ಚಳ ಮಾಡದೆ ಅಂಗನವಾಡಿ ನೌಕರರನ್ನು ಶೋಷಿಸುತ್ತಿದೆ ಎಂದು ರಾಜ್ಯ ಅಂಗನವಾಡಿ ನೌಕರ ಸಂಘ(ಸಿಐಟಿಯ) ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಹಾಗೂ ಕಾನೂನು ಸಲಹೆಗಾರ ಬಿ.ಎಂ.ಭಟ್ ಆರೋಪಿಸಿದರು.

    ಕನಿಷ್ಠ ವೇತನದ ಬೇಡಿಕೆಯ ಜತೆಗೆ, ಅಂಗನವಾಡಿ ನೌಕರರಿಗೆ ಸಾಮಾಜಿಕ ಭದ್ರತೆ, ನಿವೃತ್ತಿಯಾದವರಿಗೆ 10,000 ರೂ. ಪಿಂಚಣಿ, ಐಸಿಡಿಎಸ್ ಕೇಂದ್ರ ಸರ್ಕಾರದ ಅನುದಾನ ಹೆಚ್ಚಳ, ಕಡಿತ ಮಾಡಿರುವ ಅನುದಾನ ವಾಪಸ್ ನೀಡಬೇಕು ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ನಡೆಯುತ್ತಿರುವ ಧರಣಿಯಲ್ಲಿ ಜಿಲ್ಲೆಯ ನೌಕರರು ಭಾಗವಹಿಸಲಿದ್ದಾರೆ ಎಂದು ಸೋಮವಾರ ನ.28ರಂದು ಅಂಗನವಾಡಿ ಬಂದ್ ಮಾಡಿ ಬೆಂಗಳೂರಿನಲ್ಲಿ ನಡೆಯುವ ಧರಣಿಯಲ್ಲಿ ಜಿಲ್ಲೆಯ ನೌಕರರು ಭಾಗವಹಿಸುತ್ತಿರುವ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಸಂಘಟನಾ ಸಲಹೆಗಾರ ಸುನೀಲ್ ಕುಮಾರ್ ಬಜಾಲ್, ಅಧ್ಯಕ್ಷೆ ರವಿಕಲಾ ಬಂಟ್ವಾಳ, ಕಾರ್ಯದರ್ಶಿ ಲಕ್ಷ್ಮಿ ವಿಟ್ಲ, ಕೋಶಾಧಿಕಾರಿ ಗಾಯತ್ರಿದೇವಿ ಬೆಳ್ತಂಗಡಿ, ಅರುಣಾ ಬಿ.ಸುಲ್ಕೇರಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts