More

    ಬಾಕಿ ವೇತನ ಬಿಡುಗಡೆಗೆ ಮನವಿ

    ಕೋಲಾರ: ಬಾಕಿಯಿರುವ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ, ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ನೌಕರರ ಜಿಲ್ಲಾ ಸಂಘದ ಸದಸ್ಯರು ಬುಧವಾರ ಡಿಎಚ್​ಒ ಡಾ.ಜಗದೀಶ್​ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸಂಘದ ಜಿಲ್ಲಾಧ್ಯಕ್ಷ ಜಹೀರ್​ ಪಾಷ ಮಾತನಾಡಿ, ಸರ್ಕಾರ ಹಾಗೂ ಜಿವಿಕೆ. ಸಂಸ್ಥೆಯ ಒಡಂಬಡಿಕೆಯ ಪ್ರಕಾರ ವಾರ್ಷಿಕ ವೇತನ ಹೆಚ್ಚಳ ಆಗಬೇಕಾಗಿದ್ದು, 2023ರ ಶೇ.15ರಷ್ಟು ವೇತನ ಪರಿಷ್ಕರಣೆಯೂ ಆಗಿರುವುದಿಲ್ಲ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ಕನಿಷ್ಟ ವೇತನವು ಸಹ ಜಾರಿ ಮಾಡಿ 108 ಸಿಬ್ಬಂದಿಗಳಿಗೆ ವೇತನವನ್ನು 36008 ರೂಗಳಿಗೆ ನಿಗಧಿ ಮಾಡಿತ್ತು, ಈ ವೇತನವನ್ನು ಸುಮಾರು 8 ತಿಂಗಳುಗಳ ಕಾಲ ನೀಡಿ ತದ ನಂತರ 6 ಸಾವಿರರೂಗಳನ್ನು ಕಡಿತ ಮಾಡಿ 30,000 ರೂಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
    108 ಆರೋಗ್ಯ ಕವಚ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ 3 ತಿಂಗಳ ವೇತನ ಪಾವತಿಯಾಗದೆ ಸಾಕಷ್ಟು ತೊಂದರೆಯಾಗುತ್ತಿದ್ದು, ಇದೇ ರೀತಿ ಕಳೆದ 4-5 ವರ್ಷಗಳಿಂದಲೂ ಸಹ ಇದೇ ಪರಿಸ್ಥಿತಿ ಅನುಭವಿಸಿಕೊಂಡು ಬರುತ್ತಿರುವುದಾಗಿ ಹೇಳಿದರು.
    ಉಪಾಧ್ಯಕ್ಷ ಎಂ.ಎಚ್​.ನಾಗೇಂದ್ರಬಾಬು ಮಾತನಾಡಿ, ಆದರೆ ಕಳೆದ 3 ತಿಂಗಳಿಂದ ಪುನ@ ವೇತನ ನೀಡದೇ ಇದ್ದು, ತೊಂದರೆಯಾಗುತ್ತಿದೆ. 10 ದಿನಗಳು ಪೂರ್ಣಗೊಂಡರೆ 4 ತಿಂಗಳ ವೇತನ ನೀಡಬೇಕಾಗಿದೆ. ಹೀಗಾಗಿ ಆರೋಗ್ಯ ಸಚಿವರು ಕೂಡಲೇ ನಮ್ಮ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಮುಂದೆ ಈ ರೀತಿ ಆಗದಂತೆ ಕ್ರಮವಹಿಸಿ, ಸಿಬ್ಬಂದಿಯು ಉತ್ತಮ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು.
    ಮುಂದಿನ 10 ದಿನಗಳಲ್ಲಿ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ವಿಧಿ ಇಲ್ಲದೆ ಅಸಹಾಯಕರಾಗಿ ಮುಷ್ಕರ ಕೈಗೊಳ್ಳಬೇಕಾಗುತ್ತದೆ. ಆಗ ಸಾರ್ವಜನಿಕರ ಸೇವೆಗೆ ಅನಾನುಕೂಲತೆ ಉಂಟಾದಲ್ಲಿ ಸಂಬಂಧಿಸಿದ ಸಂಸ್ಥೆಯೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ಮನವಿ ಸ್ವೀಕರಿಸಿದ ಡಿಎಚ್​ಒ ಡಾ.ಜಗದೀಶ್​ ಕೂಡಲೇ ತಮ್ಮ ಮನವಿಯನ್ನು ಸರಕಾರಕ್ಕೆ ಕಳುಹಿಸುವ ಭರವಸೆ ನೀಡಿದರು. ಬಳಿಕ ಜಿಲ್ಲಾಧಿಕಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ಜಿ.ವಿ.ಕೆ. ಜಿಲ್ಲಾ ವ್ಯವಸ್ಥಾಪಕರಿಗೂ ಮನವಿ ಸಲ್ಲಿಸಲಾಯಿತು.
    ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ವರದರಾಜು, ಖಜಾಂಚಿ ಮೋಹನ್​, ಪದಾಧಿಕಾರಿಗಳಾದ ಸುಮಿತ್ರ, ರೂಪ, ಹರೀಶ್​, ಮುರಳಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts