More

    ದಲಿತ ಮುಖಂಡನ ಬಿಡುಗಡೆಗೆ ಆಗ್ರಹ

    ಚಿಕ್ಕಮಗಳೂರು: ಸುಳ್ಳು ಮೊಕದ್ದಮೆ ದಾಖಲಿಸಿ ದಲಿತ ಮುಖಂಡನನ್ನು ಬಂಧಿಸಿರುವ ತರೀಕೆರೆ ವೃತ್ತ ನಿರೀಕ್ಷರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಎಸ್ಪಿ ಡಾ. ವಿಕ್ರಮ ಅಮಟೆ ಅವರಿಗೆ ಮನವಿ ಸಲ್ಲಿಸಿದರು.

    ರಾಮೇಗೌಡ ಎಂಬುವವರು ದುರುದ್ದೇಶ ಇಟ್ಟುಕೊಂಡು ಕ್ಷುಲ್ಲಕ ವಿಚಾರವಾಗಿ ರಾಮಚಂದ್ರ ಕುಟುಂಬದವರನ್ನು ಎತ್ತಿಕಟ್ಟಿ ಜಗಳ ಮಾಡಿಸಿದಲ್ಲದೇ ಮನೆಯಿಂದ ರಾಮಚಂದ್ರ ಅವರನ್ನು ಕರೆತಂದು ಹನ್ನೆರಡು ಮಂದಿಯಿಂದ ತೀವ್ರ ಹಲ್ಲೆ ಮಾಡಿಸಿದ್ದಾರೆ ಎಂದು ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಆರೋಪಿಸಿದರು.
    ರಾಮಚಂದ್ರ ಅವರು ಜೀವ ರಕ್ಷಣೆಗಾಗಿ ಎದುರಿಸಲು ಬಂದವರ ವಿರುದ್ಧ ತಿರುಗಿಬಿದ್ದಿದ್ದಾರೆ. ಆ ಸಂದರ್ಭ ವ್ಯವಸ್ಥಿತವಾಗಿ ವಿಡಿಯೋ ಚಿತ್ರೀಕರಿಸಿ ರಾಮಚಂದ್ರ ಅವರೇ ಕೊಲ್ಲಲು ಬಂದರೆಂದು ದೂರು ದಾಖಲಿಸಿಕೊಂಡಿದ್ದಾರೆ. ತರೀಕೆರೆ ಸಿಪಿಐ ಅವರು ರಾಮಚಂದ್ರರನ್ನು ಕರೆಯೊಯ್ದು ದೂರನ್ನು ದಾಖಲಿಸಿದ್ದಾರೆ. ಇದಾದ ಬಳಿಕ ರಾಮಚಂದ್ರ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದರು.
    ಒರ್ವ ಡಿಎಸ್‌ಎಸ್ ಹೋರಾಟಗಾರರನ್ನು ಹತ್ತಿಕ್ಕುವ ದೃಷ್ಟಿಯಿಂದ ಬಂಧಿಸಿ ಸುಳ್ಳು ಕೇಸು ದಾಖಲಿಸಿರುವುದು ಸೂಕ್ತವಲ್ಲ. ಕೂಡಲೇ ರಾಮಚಂದ್ರ ಅವರನ್ನು ಬಿಡುಗಡೆಗೊಳಿಸಬೇಕು. ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು.
    ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ಎಸ್.ಎನ್.ಮಹೇಂದ್ರಸ್ವಾಮಿ, ಕಂಡಪ್ಪ, ಸಣ್ಣಪ್ಪ, ಖಜಾಂಚಿ ಸಂತೋಷ್ ಲಕ್ಯಾ, ತಾಲೂಕು ಸಂಘಟನಾ ಸಂಚಾಲಕ ಮಂಜುನಾಥ್ ನಂಬಿಯಾರ್, ಮುಖಂಡರಾದ ಅಣ್ಣಪ್ಪ, ರಮೇಶ್, ಗಂಗಾಧರ್, ಬಸವರಾಜ್, ಭಾಗ್ಯಾ ರಾಮಚಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts