More

    ಕರವೇ ಅಧ್ಯಕ್ಷ, ಕಾರ್ಯಕರ್ತರ ಬಿಡುಗಡೆಗೆ ಆಗ್ರಹ

    ಚನ್ನಗಿರಿ: ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮತ್ತು ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಕಾರ್ಯಕರ್ತರು ಚನ್ನಗಿರಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಗ್ರೇಡ್ 2 ತಹಸೀಲ್ದಾರ್ ರುಕ್ಮಿಣಿಬಾಯಿ ಅವರಿಗೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಕರವೇ ಅಧ್ಯಕ್ಷ ಮಲ್ಲಾನಾಯ್ಕ ಸುಣಿಗೆರೆ, ಬೆಂಗಳೂರಿನಲ್ಲಿ ಕನ್ನಡದ ನಾಮಫಲಕ ಕಡ್ಡಾಯ ಕುರಿತು ಪ್ರತಿಭಟನೆ ಮಾಡಿದ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇದು ಸರಿಯಲ್ಲ. ಅನುಮತಿ ಪಡೆದು ಪ್ರತಿಭಟನೆ ಮಾಡಿದರೂ ಬಂಧಿಸಿರುವುದು ಖಂಡನೀಯ ಎಂದರು.

    ಸರ್ಕಾರ ಕೂಡಲೇ ಅವರನ್ನು ಗೌರವದೊಂದಿಗೆ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

    ಕನ್ನಡ ಕಡ್ಡಾಯವಾಗಿ ಇರಬೇಕು ಎನ್ನುವುದು ಸರ್ಕಾರದ ಅದೇಶವಾಗಿದೆ. ಆದರೆ, ಎಲ್ಲ ಕಡೆಗಳಲ್ಲಿ ಆಂಗ್ಲ ನಾಮಫಲಕ ಅಳವಡಿಸಿ ಕನ್ನಡಭಾಷೆಗೆ ಅವಮಾನ ಮಾಡಲಾಗಿದೆ. ಅದನ್ನು ಪ್ರಶ್ನಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡುವುದು ಸರಿಯೇ? ಎಂದು ಪ್ರಶ್ನಿಸಿದರು.

    ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರಾದ ಎಂ. ಅನಿಲ್‌ಕುಮಾರ್, ಸುಣಗೆರೆ ಗ್ರಾಪಂ ಸದಸ್ಯ ಎಚ್. ಬಸವರಾಜ್, ಮಲ್ಲಿಗೆರೆ ಅಣ್ಣಯ್ಯ, ಅಣ್ಣಪ್ಪ ಬಿಡುಗೊಂಡನಹಳ್ಳಿ ತಾಂಡ, ಮಂಜಪ್ಪ ಕೆ. ಗಾಣದಕಟ್ಟೆ, ನವೀನ್ ಕರೆಕಟ್ಟೆ, ಮಂಜಣ್ಣ ಲಕ್ಷ್ಮೀಸಾಗರ, ಸಂದೀಪ್ ಪಾಯ್ಸ, ಅನಿಲ್ ಮರವಂಜಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts