More

    ಹಜೂರ್ ಮಲ್ಟಿ ಪ್ರಾಜೆಕ್ಟ್ಸ್ ಷೇರಿಗೆ ಡಿಮ್ಯಾಂಡು: ಸತತ 7 ದಿನ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಗಿದ್ದೇಕೆ?

    ಮುಂಬೈ: ಹಜೂರ್ ಮಲ್ಟಿ ಪ್ರಾಜೆಕ್ಟ್ಸ್ ಲಿಮಿಟೆಡ್ ನಿಧಿ ಸಂಗ್ರಹಿಸುವ ಸುದ್ದಿಯಲ್ಲಿದೆ. ಏತನ್ಮಧ್ಯೆ, ಕಂಪನಿಯ ಷೇರುಗಳು ಸತತ ಏಳು ವಹಿವಾಟು ದಿನಗಳವರೆಗೆ ಅಪ್ಪರ್ ಸರ್ಕ್ಯೂಟ್ ಹಿಟ್​ ಆಗಿವೆ. ಮಂಗಳವಾರ ಕೂಡ, ಹಜೂರ್ ಮಲ್ಟಿ ಪ್ರಾಜೆಕ್ಟ್ಸ್ ಲಿಮಿಟೆಡ್‌ನ ಷೇರುಗಳು ವಹಿವಾಟಿನ ಸಮಯದಲ್ಲಿ 5% ರಷ್ಟು ಏರಿಕೆ ಕಂಡವು. ಈ ಮೂಲಕ ಅಪ್ಪರ್ ಸರ್ಕ್ಯೂಟ್ ಹಿಟ್​ ಆದವು.

    ಹಜೂರ್ ಮಲ್ಟಿ ಪ್ರಾಜೆಕ್ಟ್ಸ್ ಲಿಮಿಟೆಡ್ ಸ್ಟಾಕ್ ಏಪ್ರಿಲ್ 1, 2024 ರಿಂದ ಅಪ್ಪರ್ ಸರ್ಕ್ಯೂಟ್ ಆಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ಶೇಕಡಾ 325 ರಷ್ಟು ಹೆಚ್ಚಾಗಿದೆ.

    ಅಧಿಕೃತ ಷೇರು ಬಂಡವಾಳವನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಪರಿಗಣಿಸಲು ಮತ್ತು ಮತ್ತಷ್ಟು ಹಣವನ್ನು ಸಂಗ್ರಹಿಸುವ ಪ್ರಸ್ತಾಪವನ್ನು ಚರ್ಚಿಸಲು ಈ ಕಂಪನಿಯು ಮಂಡಳಿಯು ಏಪ್ರಿಲ್ 12 ರಂದು ಸಭೆ ಸೇರಲಿದೆ ಎಂದು ಕಂಪನಿ ಷೇರು ಮಾರುಕಟ್ಟೆಗೆ ತಿಳಿಸಿದೆ ನಂತರ ಈ ಕಂಪನಿಯ ಷೇರುಗಳ ಬೆಲೆಯಲ್ಲಿ ವ್ಯಾಪಕ ಏರಿಕೆ ಕಂಡುಬಂದಿದೆ.

    ಈಗ ಹಣವನ್ನು ಸಂಗ್ರಹಿಸುವ ಪ್ರಸ್ತಾಪದ ಬಗ್ಗೆ ಕಂಪನಿಯು ಭಾರತೀಯ ಷೇರು ಮಾರುಕಟ್ಟೆ ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಿದೆ. ಈ ಬಗ್ಗೆ ಮಂಡಳಿಯಲ್ಲಿ ಚರ್ಚಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಕಂಪನಿಯ ಮಂಡಳಿಯ ಸಭೆಯನ್ನು 12 ಏಪ್ರಿಲ್ 2024 ಕ್ಕೆ ನಿಗದಿಪಡಿಸಲಾಗಿದೆ.

    BSE ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಹೊಸ ಹಣಕಾಸು ವರ್ಷ 2024-25 ರ ಪ್ರಾರಂಭದ ನಂತರ ಈ ಷೇರು ಶೇಕಡಾ 5 ರ ಅಪ್ಪರ್​ ಸರ್ಕ್ಯೂಟ್ ಹಿಟ್​ ಆಗಿದೆ.

    ಮಾರ್ಚ್ 28, 2024 ರಂದು ಈ ಷೇರಿನ ಮುಕ್ತಾಯದ ಬೆಲೆ ಪ್ರತಿ ಷೇರಿಗೆ ರೂ. 288 ಆಗಿತ್ತು. ಹಣಕಾಸು ವರ್ಷ 2024-2025 ರಲ್ಲಿ 7 ವಹಿವಾಟು ದಿನಗಳಲ್ಲಿ ಈ ಷೇರು ಬೆಲೆ ಶೇಕಡಾ 40 ಕ್ಕಿಂತ ಹೆಚ್ಚು ಏರಿಕೆಯಾಗಿದೆ.

    ಈ ಮಲ್ಟಿಬ್ಯಾಗರ್ ಸ್ಟಾಕ್ ಕಳೆದ ಆರು ತಿಂಗಳಲ್ಲಿ ಅಂದಾಜು 121.50 ರಿಂದ ರೂ. 405 ಕ್ಕೆ ಏರಿದೆ. ಅಂದರೆ ಶೇ. 225ರಷ್ಟು ರಿಟರ್ನ್ ನೀಡಲಾಗಿದೆ. ಒಂದು ವರ್ಷದಲ್ಲಿ, ಈ ಸ್ಟಾಕ್ ಪ್ರತಿ ಷೇರಿಗೆ ಅಂದಾಜು ರೂ. 96 ರಿಂದ ಈಗ ರು. 405 ಕ್ಕೆ ಏರಿದೆ. ಈ ಅವಧಿಯಲ್ಲಿ ಶೇ. 325ರಷ್ಟು ರಿಟರ್ನ್ ನೀಡಿದೆ.

    ಭಾರತೀಯ ಷೇರು ಮಾರುಕಟ್ಟೆಯಲ್ಲಿ ಐತಿಹಾಸಿಕ ದಾಖಲೆ: ಮೊದಲ ಬಾರಿಗೆ 75 ಸಾವಿರ ಗಡಿ ದಾಟಿದ ಸೂಚ್ಯಂಕ

    ಎಲಾನ್​ ಮಸ್ಕ್​ ಕಂಪನಿ ಟೆಸ್ಲಾ ಜತೆ ನಡೆದಿದೆ ಮಾತುಕತೆ: ಎಲೆಕ್ಟ್ರಿಕ್​ ವಾಹನ ತಯಾರಿಸಲು ಸಜ್ಜಾಗುತ್ತಿದೆ ರಿಲಯನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts