More

    ಬೇಡಿಕೆ ವಿಪರೀತ, ಗುರಿ ಸೀಮಿತ

    ಮಂಜುನಾಥ ಅಂಗಡಿ ಧಾರವಾಡ
    ತೋಟಗಾರಿಕೆ ಇಲಾಖೆಯಿಂದ ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಉಳ್ಳಾಗಡ್ಡಿ ಬೆಳೆಯುವ ರೈತರಿಗಾಗಿ ಉಳ್ಳಾಗಡ್ಡಿ ಶೇಖರಣಾ ಘಟಕ ನಿರ್ವಣಕ್ಕೆ ಸಹಾಯಧನ ಸೌಲಭ್ಯವಿದೆ. ಆದರೆ, ಜಿಲ್ಲೆಯಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ.
    ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ತಾಲೂಕುಗಳಲ್ಲಿ ಉಳ್ಳಾಗಡ್ಡಿ ಬೆಳೆಯಲಾಗುತ್ತದೆ. ಸಾವಿರಾರು ರೈತರು ಉಳ್ಳಾಗಡ್ಡಿ ಬೆಳೆಯುತ್ತಿದ್ದರೂ 2021- 22ನೇ ಸಾಲಿನಲ್ಲಿ ಜಿಲ್ಲೆಗೆ ನಿಗದಿಪಡಿಸಲಾದ ಶೇಖರಣಾ ಘಟಕಗಳ ಗುರಿ 100 ಮಾತ್ರ. ಧಾರವಾಡ ತಾಲೂಕಿಗೆ 10, ಹುಬ್ಬಳ್ಳಿ 30, ಕುಂದಗೋಳ 30 ಹಾಗೂ ನವಲಗುಂದ ತಾಲೂಕಿಗೆ 30 ಶೇಖರಣಾ ಘಟಕಗಳ ಗುರಿ ನೀಡಲಾಗಿದೆ. ನಾಲ್ಕೂ ತಾಲೂಕುಗಳಿಂದ 300ಕ್ಕೂ ಹೆಚ್ಚು ರೈತರಿಂದ ಬೇಡಿಕೆ ಅರ್ಜಿಗಳು ಬಂದಿವೆ.
    2020- 21ನೇ ಸಾಲಿನಲ್ಲಿ ಜಿಲ್ಲೆಗೆ 105 ಘಟಕಗಳ ಗುರಿ ನೀಡಲಾಗಿತ್ತು. ಈ ಪೈಕಿ ಕೆಲ ರೈತರು ನಿರ್ವಿುಸಿಕೊಂಡಿದ್ದು, ಮತ್ತೆ ಕೆಲವು ಚಾಲ್ತಿಯಲ್ಲಿವೆ. ಕಳೆದ ವರ್ಷ ಅರ್ಜಿ ಸಲ್ಲಿಸಿ ಪಟ್ಟಿಯಲ್ಲಿ ಇಲ್ಲದವರು ಈ ಬಾರಿಯೂ ಬೇಡಿಕೆ ಅರ್ಜಿ ಸಲ್ಲಿಸಿದ್ದಾರೆ. ಗುರಿ ಸೀಮಿತವಾಗಿದ್ದು, ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಆದರೆ, ಬೇಡಿಕೆಗೆ ಅನುಗುಣವಾಗಿ ಅನುದಾನ ಬಿಡುಗಡೆಯಾಗದಿರುವುದರಿಂದ ಯೋಜ ನೆಯ ಲಾಭ ಎಲ್ಲರಿಗೂ ಸಿಗುತ್ತಿಲ್ಲ.
    87,000 ರೂ. ಅನುದಾನ: ರೈತರು ಆಯಾ ತಾಲೂಕು ಕಚೇರಿಗಳಲ್ಲಿ ಮೊದಲೇ ಬೇಡಿಕೆ ಅರ್ಜಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ರೈತರು ಜಮೀನುಗಳಲ್ಲಿ ನಿರ್ವಿುಸಿಕೊಳ್ಳುವ ಘಟಕಗಳಿಗೆ ಇಲಾಖೆಯಿಂದ 87,000 ರೂ. ಸಹಾಯಧನ ನೀಡಲಾಗುತ್ತದೆ. ಮೊದಲು ಬಂದ ಅರ್ಜಿಗಳನ್ನು ಗಣನೆಗೆ ತೆಗೆದುಕೊಂಡು ಗುರಿಗೆ ಅನುಗುಣವಾಗಿ ರೈತರ ಪಟ್ಟಿ ತಯಾರಿಸಲಾಗುತ್ತದೆ. ತಮ್ಮ ಹಣದಿಂದ ನಿರ್ವಿುಸಿಕೊಂಡ ರೈತರ ಖಾತೆಗೇ ನೇರವಾಗಿ ಅನುದಾನ ಜಮೆಯಾಗುತ್ತದೆ.
    ಏನಿದರ ಲಾಭ?: ಉಳ್ಳಾಗಡ್ಡಿ ಹೆಚ್ಚು ತೇವಾಂಶ ಭರಿತ ಬೆಳೆಯಾಗಿದ್ದು, ಇದು ಶೀಘ್ರ ಹಾಳಾಗುವ ಗುಣ ಹೊಂದಿದೆ. ಎಲ್ಲ ರೈತರು ಒಮ್ಮೆಲೇ ಕಟಾವು ಮಾಡುವುದರಿಂದ ಉತ್ಪಾದನೆ ಹೆಚ್ಚಾದಾಗ ಸಮರ್ಪಕ ದರ ಸಿಗುವುದಿಲ್ಲ. ಹೀಗಾಗಿ, ಹಸಿ ಉಳ್ಳಾಗಡ್ಡಿ ಬೆಳೆ ಕಟಾವಿನ ನಂತರ ಹಲವಾರು ದಿನಗಳವರೆಗೆ ಹಾಳಾಗದಂತೆ ಸುಸ್ಥಿತಿಯಲ್ಲಿ ಶೇಖರಿಸಿ ಇಡಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ತೋಟಗಾರಿಕೆ ಇಲಾಖೆ ಈರುಳ್ಳಿ ಶೇಖರಣಾ ಘಟಕ ನಿರ್ಮಾಣ ಯೋಜನೆಯನ್ನು ಅನುಷ್ಠಾನಗೊಳಿಸಿದೆ.

    ಜಿಲ್ಲೆಯಲ್ಲಿ ಈರುಳ್ಳಿ ಶೇಖರಣಾ ಘಟಕ ನಿರ್ವಣಕ್ಕೆ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಗೆ ಪ್ರಸಕ್ತ 100 ಘಟಕಗಳ ಗುರಿ ಲಭಿಸಿದ್ದು, ಹೆಚ್ಚುವರಿ ನಿರ್ವಣಕ್ಕೆ ಬೇಡಿಕೆ ಸಲ್ಲಿಸಲಾಗುವುದು.
    | ಕಾಶಿನಾಥ ಭದ್ರಣ್ಣವರ ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts