More

    ಕರೊನಾ ಸಾವಿನ ಸಂಖ್ಯೆಯ ಮೇಲೆ ಅನುಮಾನ ಮೂಡಿಸುವಂತಿದೆ ಚೀನಾ ಸರ್ಕಾರ ನಡೆ

    ವುಹಾನ್​: ಚಿತಾಭಸ್ಮ ತುಂಬಿದ್ದು ಎನ್ನಲಾದ ಸುಮಾರು 5000 ಸಾವಿರ ಮಡಿಕೆಗಳನ್ನು ಕರೊನಾ ಸ್ಪೋಟಗೊಂಡ ಚೀನಾದ ವುಹಾನ್​ ನಗರದಲ್ಲಿ ಸಂತ್ರಸ್ತ ಕುಟಂಬಗಳಿಗೆ ಅಲ್ಲಿನ ಸರ್ಕಾರ ವಿತರಿಸಿದ್ದು, ಚೀನಾದ ಅಧಿಕೃತ ಸಾವಿನ ಸಂಖ್ಯೆಯ ಮೇಲೆ ಸಂಶಯ ವ್ಯಕ್ತವಾಗುತ್ತಿದೆ.

    ವೈರಸ್​ನಿಂದ ಮೃತಪಟ್ಟವರ ಚಿತಾಭಸ್ಮವನ್ನು ಸಂತ್ರಸ್ತ ಕುಟುಂಬಗಳು ಸ್ವೀಕರಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೇ ವೇಳೆಯಲ್ಲಿ ಚೀನಾದ ಸ್ಥಳೀಯ ಮಾಧ್ಯಮಗಳು ಕೂಡ ಸಂತ್ರಸ್ತ ಕುಟುಂಬಗಳು ಸಾವಿರಾರು ಮಡಿಕೆಗಳನ್ನು ಸ್ವೀಕರಿಸಿವೆ ಎಂದು ವರದಿ ಮಾಡಿವೆ.

    ಆಘಾತಕಾರಿ ವಿಚಾರವೆಂದರೆ ಒಂದು ಕುಟುಂಬ 5000 ಮಡಿಕೆಗಳನ್ನು ಕೇವಲ ಎರಡು ದಿನದೊಳಗೆ ಸ್ವೀಕರಿಸಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದರೆ, ಎಷ್ಟು ಮಡಿಕೆಯಲ್ಲಿ ಚಿತಾಭಸ್ಮವನ್ನು ತುಂಬಿದ್ದಾರೆ ಎಂಬುದು ತಿಳಿದುಬಂದಿಲ್ಲ.

    ಚೀನಾದಲ್ಲಿ ಇಲ್ಲಿಯವರೆಗೆ 3,300 ಸಾವಿನ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಹೆಚ್ಚಿನ ಮಂದಿ ಕರೊನಾ ಸ್ಪೋಟ ಕೇಂದ್ರ ವುಹಾನ್​ನಲ್ಲಿ ಮೃತಪಟ್ಟಿದ್ದಾರೆ. ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಿದವರು ನಿಖರ ಸಂಖ್ಯೆಗಳನ್ನು ನೀಡಲು ನಿರಾಕರಿಸಿದ್ದಾರೆ. ಎಷ್ಟ ಮಡಿಕೆಗಳನ್ನು ಸಂಗ್ರಹಿಸಿದ್ದೇವೆ ಎಂದು ಗೊತ್ತಿಲ್ಲ ಎಂದಷ್ಟೇ ಹೇಳಿದ್ದಾರೆ.

    ವೈರಸ್​ ಸ್ಪೋಟಗೊಂಡ ಚೀನಾವನ್ನೇ ಸಾವಿನ ಸಂಖ್ಯೆಯಲ್ಲಿ ಇಟಲಿ ಮೀರಿಸಿದೆ. ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕ ನಂಬರ್​ ಒನ್​ ಸ್ಥಾನದಲ್ಲಿದೆ. ಹೀಗಾಗಿ ಸಹಜವಾಗೇ ಚೀನಾ ವಿರುದ್ಧ ಅನುಮಾನದ ಹೊಗೆಯಾಡಲು ಆರಂಭವಾಗಿದೆ. (ಏಜೆನ್ಸೀಸ್​)

    ಕೋವಿಡ್​-19 ಪೀಡಿತರಲ್ಲಿ 86 ಜನ ಗುಣಮುಖ

    ಕರೊನಾ ಸೋಂಕಿನ ಭಯಕ್ಕೆ ಗಲಭೆಯೆಬ್ಬಿಸಿ ಜೈಲಿನಿಂದ ಪರಾರಿಯಾದ ಕೈದಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts