More

    ಭೂಕಂಪದ ನಡುವೆಯೂ ಹೆರಿಗೆ ಮಾಡಿಸಿದ ವೈದ್ಯರು! ವಿಡಿಯೋ ವೈರಲ್…

    ಜಮ್ಮು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಆಸ್ಪತ್ರೆಯ ವೈದ್ಯರು ಮಂಗಳವಾರ ತಡರಾತ್ರಿ ನಡೆದ ಭೂಕಂಪದ ನಡುವೆಯೂ ಮಗುವಿನ ಡೆಲಿವರಿ ಮಾಡಿಸಿದ್ದಾರೆ. ಮಗು ಸಿಸೇರಿಯನ್ ಮೂಲಕ ಜನಿಸಿದೆ.

    “ಅನಂತನಾಗ್ ಜಿಲ್ಲೆಯ ಬಿಜ್ಬೆಹರಾದ ಎಸ್ಡಿಎಚ್ (ಉಪ ಜಿಲ್ಲಾ ಆಸ್ಪತ್ರೆ) ನಲ್ಲಿ ತುರ್ತು ಎಲ್ಎಸ್ಸಿಎಸ್ (ಲೋವರ್-ಸೆಗ್ಮೆಂಟ್ ಸಿಸೇರಿಯನ್ ವಿಭಾಗ) ನಡೆಯುತ್ತಿತ್ತು. ಈ ಸಮಯದಲ್ಲಿ ಬಲವಾದ ಭೂಕಂಪ ನಡೆಯಿತು” ಎಂದು ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ಟ್ವೀಟ್ ಮಾಡಿದ್ದಾರೆ.

    “ಎಲ್ಎಸ್ಸಿಎಸ್ ಅನ್ನು ಸುಗಮವಾಗಿ ನಡೆಸಿದ ಎಸ್ಡಿಎಚ್ ಬಿಜ್ಬೆಹರಾ ಸಿಬ್ಬಂದಿಗೆ ಅಭಿನಂದನೆಗಳು. ಎಲ್ಲವೂ ಕ್ಷೇಮ ಆಗಿರುವುದಕ್ಕೆ ದೇವರಿಗೆ ಧನ್ಯವಾದಗಳು” ಎಂದು ಪೋಸ್ಟ್ ನಲ್ಲಿ ಸೇರಿಸಲಾಗಿದೆ.

    ಟ್ವೀಟ್ ಜತೆ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಕೋಣೆ ಮತ್ತು ಅವರ ಸುತ್ತಲಿನ ಎಲ್ಲ ವಸ್ತುಗಳೂ ನಡುಗುತ್ತಿದ್ದಂತೆಯೇ ದೀಪಗಳು ಆರಿಹೋಗಿದೆ. ಈ ನಡುವೆಯೂ ವೈದ್ಯಕೀಯ ಸಿಬ್ಬಂದಿ ಧೈರ್ಯವನ್ನು ತಾಳಿ ತಮ್ಮ ಕೆಲಸವನ್ನು ಹೇಗೆ ನಿರ್ವಹಿಸಿದರು ಎಂಬುದನ್ನು ತೋರಿಸುತ್ತದೆ. ಅವರು ಪ್ರಾರ್ಥನೆಗಳನ್ನು ಪಠಿಸುವುದನ್ನು ಕೇಳಬಹುದು.

    ಉತ್ತರ ಅಫ್ಘಾನಿಸ್ತಾನದ ಫೈಜಾಬಾದ್ ಭೂಕಂಪದ ಕೇಂದ್ರಬಿಂದು

    ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 6.6 ರಷ್ಟು ಭಾರಿ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಕಾಶ್ಮೀರ ಮಾತ್ರವಲ್ಲ, ಇಡೀ ಉತ್ತರ ಭಾರತವು ಬಲವಾದ ನಡುಕವನ್ನು ಅನುಭವಿಸಿತು, ನಿವಾಸಿಗಳು ಸುರಕ್ಷತೆಗಾಗಿ ತಮ್ಮ ಮನೆಗಳಿಂದ ಹೊರಬಂದರು. ಅಂತರರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಪಾಕಿಸ್ತಾನ, ತುರ್ಕಮೆನಿಸ್ತಾನ್, ಕಜಕಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ, ಅಫ್ಘಾನಿಸ್ತಾನ ಮತ್ತು ಕಿರ್ಗಿಸ್ತಾನ್ ಬಾಧಿತವಾಗಿವೆ.

    ಸ್ಥಳೀಯ ಕಾಲಮಾನ ರಾತ್ರಿ 10.17.27 ಕ್ಕೆ ಭೂಕಂಪ ಸಂಭವಿಸಿದೆ ಮತ್ತು ಭೂಕಂಪದ ಕೇಂದ್ರಬಿಂದುವು “ಉತ್ತರ ಅಫ್ಘಾನಿಸ್ತಾನದ ಫೈಜಾಬಾದ್ನ ಆಗ್ನೇಯಕ್ಕೆ 133 ಕಿ.ಮೀ ದೂರದಲ್ಲಿದೆ” ಎಂದು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts