More

    ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಮಾರ್ಗಮಧ್ಯೆ ಆ್ಯಂಬುಲೆನ್ಸ್​ನಲ್ಲೇ ಹೆರಿಗೆ!

    ರಾಯಚೂರು: ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಬೇರೆಡೆಗೆ ಹೊರಟ ಗರ್ಭಿಣಿಗೆ ಮಾರ್ಗಮಧ್ಯೆ ಆ್ಯಂಬುಲೆನ್ಸ್​ನಲ್ಲೇ ಹೆರಿಗೆ ಆಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿಯ ಗರ್ಭಿಣಿಯೊಬ್ಬರಿಗೆ ಈ ರೀತಿಯ ಹೆರಿಗೆ ಆಗಿದೆ.

    ಹೀಗೆ ‘108’ ಆಂಬ್ಯುಲೆನ್ಸ್‌ನಲ್ಲೇ ಹೆರಿಗೆಯಾಗಿ ಮಗುವಿಗೆ ಜನ್ಮವಿತ್ತ ತಾಯಿಯ ಹೆಸರು ರೇಣುಕಾ. ಈಕೆ ಆ್ಯಂಬುಲೆನ್ಸ್​ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಾನ್ವಿಯಿಂದ ರಾಯಚೂರಿಗೆ ಹೊರಟಿದ್ದಾಗ ಮಾರ್ಗಮಧ್ಯೆ ಈ ಹೆರಿಗೆ ಆಗಿದೆ.

    ಮಾನ್ವಿ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಸಿಗದೆ ಪರದಾಡಿದ ಈ ಕುಟುಂಬದವರು ರಾಯಚೂರಿನ ರಿಮ್ಸ್‌ಗೆ ತೆರಳಬೇಕಾಯಿತು. ಅದಕ್ಕೆಂದು ‘108’ ಆ್ಯಂಬುಲೆನ್ಸ್​ನಲ್ಲಿ ಹೊರಟಿದ್ದರು. ಆದರೆ ಕಲ್ಲೂರು ಬಳಿ ಹೆರಿಗೆ ನೋವು ಅತಿಯಾದ್ದರಿಂದ ‘108’ ಸಿಬ್ಬಂದಿ ಅಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ದಾರಿಯಲ್ಲೇ ಹೆರಿಗೆಯಾಗಿದ್ದರಿಂದ ಮಾನ್ವಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ತಾಯಿ-ಮಗು ಕ್ಷೇಮವಾಗಿದ್ದಾರೆ.

    ಖ್ಯಾತ ನಟನಿಗೆ ಕ್ಯಾನ್ಸರ್​, ಧನಸಹಾಯಕ್ಕಾಗಿ ಸಾರ್ವಜನಿಕರಲ್ಲಿ ಕೋರಿಕೆ..

    ಆದೇಶ ಹೊರಡಿಸಿ ಮುಜುಗರಕ್ಕೀಡಾಗಿ ವಾಪಸ್ ಪಡೆದ ಸರ್ಕಾರ; ಪದೇಪದೆ ಎಡವುತ್ತಿರುವುದಕ್ಕೆ ಜನರಿಂದ ಟೀಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts