More

    ಶರಣಾಗುತ್ತೇನೆ ಎಂದು ಬಂದ ಆಪ್​ ಉಚ್ಚಾಟಿತ ಕೌನ್ಸಿಲರ್​ ತಾಹೀರ್​ ಹುಸೇನ್​ ಮನವಿಯನ್ನು ತಿರಸ್ಕರಿಸಿದ ಕೋರ್ಟ್​; ಮುಂದೇನಾಯ್ತು ಗೊತ್ತಾ?

    ನವದೆಹಲಿ: ದೆಹಲಿ ಹಿಂಸಾಚಾರ ಹಾಗೂ ಗುಪ್ತಚರ ದಳದ ಅಧಿಕಾರಿ ಅಂಕಿತ್​ ಶರ್ಮಾ ಹತ್ಯೆಯಲ್ಲಿ ತನ್ನ ಹೆಸರು ಕೇಳಿಬರುತ್ತಲೇ ಪರಾರಿಯಾಗಿದ್ದ ಆಪ್​ ಉಚ್ಚಾಟಿತ ಕೌನ್ಸಿಲರ್​ ತಾಹೀರ್​ ಹುಸೇನ್​ ಇಂದು ಕೋರ್ಟ್​ಗೆ ಆಗಮಿಸಿದ್ದ.
    ತಾನು ದೆಹಲಿ ನ್ಯಾಯಾಲಯದ ಎದುರು ಶರಣಾಗುವುದಾಗಿ ತಿಳಿಸಿ, ಅರ್ಜಿ ಸಲ್ಲಿಸಿದ್ದ. ಆದರೆ ಆ ಅರ್ಜಿಯನ್ನು ನ್ಯಾಯಾಲಯ ತಿರಸ್ಕಾರ ಮಾಡಿದ್ದರಿಂದ ದೆಹಲಿ ಪೊಲೀಸರು ತಾಹೀರ್​ನನ್ನು ಬಂಧಿಸಿದ್ದಾರೆ.

    ಈಶಾನ್ಯ ದೆಹಲಿ ಹಿಂಸಾಚಾರ ಸಂದರ್ಭದಲ್ಲಿ ತಾಹೀರ್​ ಹುಸೇನ್​ ಮನೆಯ ಟೆರೇಸ್ ಮೇಲೆ ಪೆಟ್ರೋಲ್​ ಬಾಂಗ್​ಗಳು, ಕಲ್ಲು, ಮಾರಕ ಅಸ್ತ್ರಗಳು ಪತ್ತೆಯಾಗಿದ್ದವು. ದೆಹಲಿ ಹಿಂಸಾಚಾರದಲ್ಲಿ ಆತನ ಕೈವಾಡವಿದೆ ಎಂದು ಬಲವಾದ ಆರೋಪ ಕೇಳಿಬಂದಿತ್ತು. ಗುಪ್ತಚರ ದಳದ ಅಧಿಕಾರಿ ಅಂಕಿತ್​ ಶರ್ಮಾ ಹತ್ಯೆಗೆ ತಾಹೀರ್​ ಕಾರಣ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರು. ಆದರೆ ತಾಹೀರ್ ನಾಪತ್ತೆಯಾಗಿದ್ದ.

    ತಾನು ಶರಣಾಗುತ್ತೇನೆ ಎಂದು ಹೇಳಿ ದೆಹಲಿ ಕೋರ್ಟ್​ ಬಳಿ ಬಂದಿದ್ದ. ಆದರೆ ಆತನ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಇದು ತಮ್ಮ ನ್ಯಾಯ ನಿರ್ಣಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದರಿಂದ ತಾಹೀರ್​ನನ್ನು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts