More

    ಒಂದೇ ದಿನದಲ್ಲಿ 1,515 ಕರೊನಾ ಪ್ರಕರಣ ದಾಖಲಿಸಿದ ದೆಹಲಿ

    ನವದೆಹಲಿ : ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಈ ವರ್ಷದ ಅತಿಹೆಚ್ಚು ಏಕದಿನ ಪ್ರಕರಣ ಸಂಖ್ಯೆಯಾಗಿ ಒಟ್ಟು 1,515 ಪ್ರಕರಣಗಳು ಗುರುವಾರ (ಮಾರ್ಚ್ 25) ದಾಖಲಾಗಿದ್ದು, 5 ಕರೊನಾ ಸಂಬಂಧಿತ ಸಾವುಗಳು ಸಂಭವಿಸಿವೆ.

    ಒಂದು ದಿನ ಹಿಂದೆ ಅಂದರೆ ಮಾರ್ಚ್ 24 ರ ಬುಧವಾರ 1,254 ಪ್ರಕರಣಗಳು ವರದಿಯಾಗಿದ್ದವು. ಇದೀಗ ಈ ಸಂಖ್ಯೆ ಮತ್ತೂ ಹೆಚ್ಚಾಗಿದ್ದು, ಈ ಹೊಸ ಪ್ರಕರಣಗಳೊಂದಿಗೆ ದೆಹಲಿಯಲ್ಲಿ ಆ್ಯಕ್ಟೀವ್ ಆಗಿರುವ ಕರೊನಾ ಪ್ರಕರಣಗಳ ಸಂಖ್ಯೆ 5,497 ತಲುಪಿದೆ.

    ಇದನ್ನೂ ಓದಿ: ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    ಈ ಪೈಕಿ, 69 ಪ್ರಕರಣಗಳು ರೂಪಾಂತರಿ ಕರೊನಾ ವೈರಸ್​ ಪ್ರಕರಣಗಳಾಗಿವೆ. ಅವುಗಳಲ್ಲಿ 65 ಪ್ರಕರಣಗಳಲ್ಲಿ ಇಂಗ್ಲೆಂಡ್​ ರೂಪಾಂತರಿ ವೈರಸ್ ಕಂಡುಬಂದಿದ್ದು, ಉಳಿದ 4 ಪ್ರಕರಣಗಳು ದಕ್ಷಿಣ ಆಫ್ರಿಕಾದ ವೈರಸ್ ರೂಪಾಂತರಿಯದ್ದಾಗಿದೆ. ಆದಾಗ್ಯೂ ಪ್ರಕರಣಗಳ ಹೆಚ್ಚಳಕ್ಕೆ ಮತ್ತು ಈ ರೂಪಾಂತರಿ ವೈರಸ್​ಗಳಿಗೆ ನೇರ ಸಂಬಂಧವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)

    ತೆರೆಯ ಮೇಲೆ ಬ್ಯಾಡ್ಮಿಂಟನ್ ಲೋಕ ತೋರಿಸುವ ‘ಸೈನಾ’

    ಪ್ರೇಮ ನಿವೇದನೆಗೆ ಹೀಗೊಂದು ‘ಮಾರ್ಗ’! ರಸ್ತೆ ಮೇಲೆ ‘ಐ ಲವ್ ಯು’!

    ಉಚಿತ ಅಯೋಧ್ಯಾ ಪ್ರವಾಸದ ಆಶ್ವಾಸನೆ ಕೊಟ್ಟ ಅಭ್ಯರ್ಥಿಗೆ ನೋಟೀಸ್ !

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts