More

    ಪ್ರಚೋದನಾಕಾರಿ ಹೇಳಿಕೆ; ದೆಹಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷನ ವಿರುದ್ಧ ದೇಶದ್ರೋಹದ ಪ್ರಕರಣ

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಹೇಳಿಕೆ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ದೆಹಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಜಫರುಲ್​ ಇಸ್ಲಾಮ್​ ಖಾನ್​ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ವಸಂತಕುಂಜ್​ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸ್​ನ ವಿಶೇಷ ಘಟಕದ ಅಧಿಕಾರಿಗಳು ಎಫ್​ಐಆರ್​ ದಾಖಲಿಸಿದ್ದಾರೆ.

    ಭಾರತದಲ್ಲಿ ಈ ರೀತಿಯಾಗಿ ಮುಸ್ಲಿಮರನ್ನು ಹತ್ತಿಕ್ಕುವ ಪ್ರಯತ್ನಗಳು ಮುಂದುವರಿದರೆ ಅರಬ್​ ರಾಷ್ಟ್ರಗಳಿಗೆ ದೂರು ಕೊಡಬೇಕಾಗುತ್ತದೆ. ಆಗ ಭಾರತದ ಮೇಲೆ ಅವರೆಲ್ಲರೂ ಮುರಿದುಕೊಂಡು ಬೀಳುವುದರಿಂದ ದೇಶದಲ್ಲಿ ಅಲ್ಲೋಲಕಲ್ಲೋಲ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಜಫರುಲ್​ ಇಸ್ಲಾಂ ಖಾನ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು.

    ಇದನ್ನೂ ಓದಿ: ಮೇ 4 ರಿಂದ ಕೇದಾರನಾಥ ದರ್ಶನಕ್ಕೆ ಅವಕಾಶ, ಹಸಿರು ವಲಯದ ಜಿಲ್ಲೆಗಳ ಭಕ್ತರು ಭೇಟಿ ನೀಡಬಹುದು

    ಏಪ್ರಿಲ್​ 28ರಂದು ಅವರು ಮಾಡಿದ್ದ ಪೋಸ್ಟ್​ ಅನ್ನು ಗಮನಿಸಿದ್ದ ದೆಹಲಿ ನಿವಾಸಿಯೊಬ್ಬರು ದೆಹಲಿ ಪೊಲೀಸ್​ನ ವಿಶೇಷ ಘಟಕಕ್ಕೆ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ ದೆಹಲಿ ಪೊಲೀಸ್​ನ ವಿಶೇಷ ಘಟಕದ ಅಧಿಕಾರಿಗಳು ಜಫರುಲ್​ ಇಸ್ಲಾಂ ಖಾನ್​ ವಿರುದ್ಧ ಭಾರತೀಯ ದಂಡಸಂಹಿತೆಯ 124 ಎ (ದೇಶದ್ರೋಹ) ಮತ್ತು 153ಎ (ಜಾತಿ, ಮತ, ಧರ್ಮ, ಹುಟ್ಟಿದ ಸ್ಥಳ ಮತ್ತಿತರೆ ಆಧಾರದಲ್ಲಿ ಎರಡು ಗುಂಪುಗಳ ನಡುವೆ ದ್ವೇಷ ಮೂಡಿಸುವುದು ಹಾಗೂ ಸೌಹಾರ್ದ ವಾತಾವರಣ ಕದಡುವ ಪ್ರಯತ್ನ) ವಿಧಿಗಳ ಪ್ರಕಾರ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಕೋಲ್ಕತಾದಲ್ಲಿ ಪಾನಮತ್ತರಾಗಿ ಜಾಲಿರೈಡ್​ ಹೊರಟವರು ತಲುಪಿದ್ದು ಎಲ್ಲಿಗೆ…?

    ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್​ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವಂತೆ ಎಚ್ಚೆತ್ತುಕೊಂಡಿದ್ದ ಜಫರುಲ್​ ಇಸ್ಲಾಂ ಖಾನ್​ ಮೇ 1ರಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್​ ಮೂಲಕ ಕ್ಷಮೆಯಾಚಿಸಿದ್ದರು. ದೇಶವು ಕರೊನಾ ಪಿಡುಗಿನ ವಿರುದ್ಧ ಹೋರಾಡುತ್ತಿರುವಂಥ ತುರ್ತು ಸಂದರ್ಭದಲ್ಲಿ ಈ ರೀತಿಯ ಪೋಸ್ಟ್​ ಮಾಡಿದ್ದು ತಪ್ಪಾಗಿದೆ ಎಂದು ಹೇಳಿದ್ದರು.

    ಕೆಲದಿನಗಳಿಂದ ನಾಪತ್ತೆಯಾಗಿದ್ದ ಕಿಮ್​ ಜಾಂಗ್​ ಉನ್​ ದಿಢೀರ್​ ಪ್ರತ್ಯಕ್ಷ, ಇಲ್ಲಿವೆ ಲೇಟೆಸ್ಟ್​ ಫೋಟೋಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts