More

    ನೀವೇನಾದ್ರೂ ಈ ಲಿಂಕ್​ ಶೇರ್ ಮಾಡಿದ್ದರೆ ನಿಮಗೆ ವಾಟ್ಸ್​ಆ್ಯಪ್​ ಸೇವೆಯೇ ಸ್ಥಗಿತಗೊಂಡೀತು!; ಕ್ರಮಕೈಗೊಳ್ಳಲು ಸೂಚನೆ ಕೊಟ್ಟ ಹೈಕೋರ್ಟ್​

    ಮುಂಬೈ: ಇವತ್ತು ಸಹೋದರರ ದಿನ. ಹಾಗಂತ ಯುವರ್​ ಮೋಸ್ಟ್ ವಾಂಟೆಡ್​ ಭಾಯ್​ಗಳಿಗೆ ಅರ್ಥಾತ್ ನಿಮ್ಮ ನೆಚ್ಚಿನ ಅಣ್ಣಂದಿರಿಗೆ ವಾಟ್ಸ್​ಆ್ಯಪ್​ ಮುಂತಾದವುಗಳ ಮೂಲಕ ಈ ಲಿಂಕ್​ ಶೇರ್ ಮಾಡಿಕೊಳ್ಳಲು ಮುಂದಾಗಬೇಡಿ. ಹೌದು.. ‘ಯುವರ್ ಮೋಸ್ಟ್​ ವಾಂಟೆಡ್​ ಭಾಯ್​’ ಎಂಬ ಟ್ಯಾಗ್​ಲೈನ್​ ಇರುವ ಸಲ್ಮಾನ್​ ಖಾನ್​ ಅಭಿನಯದ ‘ರಾಧೆ’ ಸಿನಿಮಾದ ಪೈರಸಿ ಕಾಪಿ ಅಂದರೆ ನಕಲು ಪ್ರತಿಯನ್ನೇನಾದರೂ ಹಂಚಿಕೊಂಡರೆ ನಿಮ್ಮ ವಾಟ್ಸ್​ಆ್ಯಪ್​ ಸಂವಹನಕ್ಕೇ ಕುತ್ತು ಬಂದೀತು.

    ಮೇ 13ರಂದು ಜೀ-5 ಮೂಲಕ ಒಟಿಟಿಯಲ್ಲಿ ಬಿಡುಗಡೆ ಆಗಿರುವ ‘ರಾಧೆ’ ಸಿನಿಮಾ ಪೈರಸಿ ಆಗಿ ಎಲ್ಲ ಕಡೆ ಹಂಚಿಕೆ ಆಗುತ್ತಿರುವುದರ ವಿರುದ್ಧ ಜೀ ಕಂಪನಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಇದೀಗ ಕಕ್ಷಿದಾರರ ವಾದವನ್ನು ಆಲಿಸಿರುವ ಹೈಕೋರ್ಟ್, ರಾಧೆ ಚಿತ್ರದ ಪೈರಸಿ ಲಿಂಕ್ ಶೇರ್ ಮಾಡಿಕೊಂಡವರ ನಂಬರ್​ಗೆ ಸೇವೆ ಸ್ಥಗಿತಗೊಳಿಸುವಂತೆ ವಾಟ್ಸ್​ಆ್ಯಪ್​ಗೆ ಸೂಚನೆ ನೀಡಿದೆ.

    ಇದನ್ನೂ ಓದಿ: ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

    ಮಾತ್ರವಲ್ಲ, ದೇಶದ ಪ್ರಮುಖ ದೂರಸಂಪರ್ಕ ಕಂಪನಿಗಳಾದ ಜಿಯೋ, ಏರ್​​ಟೆಲ್​, ವೊಡಾಫೋನ್​ಗೂ ಸೂಚನೆ ಕೊಟ್ಟಿರುವ ಹೈಕೋರ್ಟ್​, ರಾಧೆ ಸಿನಿಮಾದ ವಿರುದ್ಧ ಕಾನೂನುಬಾಹಿರವಾಗಿ ನಡೆದುಕೊಂಡವರ ಮಾಹಿತಿ ಜೀ ಕಂಪನಿಗೆ ನೀಡುವಂತೆ ಹೇಳಿದೆ. ಈ ಮಾಹಿತಿ ಸಿಗುತ್ತದೆ ಜೀ ಕಂಪನಿ ಮುಂದಿನ ಕಾನೂನುಕ್ರಮಕ್ಕೆ ಮುಂದಾಗಲಿದೆ.

    ‘ಮುಗಿಲ್ ಪೇಟೆ’ಯ 100ಕ್ಕೂ ಅಧಿಕ ಜನರ ಖಾತೆಗೆ 5,000 ರೂ. ಟ್ರಾನ್ಸ್​ಫರ್; ಚಿತ್ರತಂಡದ ಮಂದಿಗೆ ನಿರ್ಮಾಪಕರ ‘ರಕ್ಷಾ’ ಕವಚ

    ಮದುವೆ ಆಗು ಎಂದು ಒತ್ತಾಯಿಸಿದ ಇಬ್ಬರಿಗೂ ಒಲ್ಲೆ ಎಂದಳು; ಎರಡು ಗುಂಡೇಟಿಗೆ ಹೆಣವಾಗಿ ಉರುಳಿದಳು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts