More

    ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದ 82 ಬಾಂಗ್ಲಾದೇಶಿ ಮುಸ್ಲಿಮರಿಗೆ ಜಾಮೀನು…

    ನವದೆಹಲಿ: ಕೊವಿಡ್​-19 ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿ ದೆಹಲಿಯ ತಬ್ಲಿಘಿ ಜಮಾತ್​ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದಲ್ಲದೆ, ವೀಸಾ ಷರತ್ತುಗಳನ್ನು ಮೀರಿ, ಇಲ್ಲಿಯೇ ಇದ್ದುಕೊಂಡು ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದ 82 ಬಾಂಗ್ಲಾದೇಶಿ ಮುಸ್ಲಿಮರ ವಿರುದ್ಧ ಚಾರ್ಜ್​ಶೀಟ್​ ದಾಖಲಿಸಲಾಗಿತ್ತು.

    ಈಗ ಅವರೆಲ್ಲರಿಗೂ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಮೆಟ್ರೊಪೊಲಿಟಿನ್​ ಮ್ಯಾಜಿಸ್ಟ್ರೇಟ್​​ನ ಮುಖ್ಯ ನ್ಯಾಯಾಧೀಶರಾದ ಗುರ್​ಮೋಹನ್​ ಕೌರ್​ ಅವರು ಎಲ್ಲರಿಗೂ ತಲಾ 10 ಸಾವಿರ ರೂ.ವೈಯಕ್ತಿಕ ಬಾಂಡ್​ ಆಧಾರದ ಮೇಲೆ ಜಾಮೀನು ನೀಡಿದ್ದಾರೆ.
    ವಿದೇಶಿ ಪ್ರಜೆಗಳ ಪರವಾಗಿ ಅಶಿಮಾ ಮಂಡ್ಲಾ ಮತ್ತು ಮಂದಾಕಿನಿ ಸಿಂಗ್​ ಅವರು ವಾದ ಮಂಡನೆ ಮಾಡಿದ್ದರು. ಅವರು ಮಾಡಿದ್ದ ಅಪರಾಧಕ್ಕೆ ಏಳುವರ್ಷಗಳವರೆಗೂ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. 82 ಜನರೂ ಜಾಮೀನಿಗಾಗಿ ಅರ್ಜಿ ಸಲ್ಲಿಸಿ, ಶಿಕ್ಷೆಯಿಂದ ಪಾರು ಮಾಡುವಂತೆ ಮನವಿ ಮಾಡಿದ್ದರು.

    ಎಲ್ಲರನ್ನೂ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಒಳಪಡಿಸಲಾಗಿತ್ತು. (ಏಜೆನ್ಸೀಸ್​)

    ಗಂಗಾನದಿಗೆ ಎಸೆಯಲಾಗುತ್ತಿದೆಯಾ ಕೊವಿಡ್​-19ನಿಂದ ಮೃತಪಟ್ಟವರ ಶವಗಳನ್ನು? ಏನಿದು ಫೋಟೋಗಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts