More

    ಸುಲಿಗೆಕೋರನನ್ನೇ ಅಪಹರಿಸಿ 3 ಲಕ್ಷ ರೂ.ಗೆ ಬೇಡಿಕೆಯಿಟ್ಟ ಹೆಡ್​ ಕಾನ್ಸ್​ಟೇಬಲ್​! ಮುಂದೆ ನಡೆದಿದ್ದೆಲ್ಲ ರೋಚಕ

    ನವದೆಹಲಿ: ಸುಲಿಗೆ ಪ್ರಕರಣದ ಆರೋಪಿಯನ್ನು ಅಪಹರಿಸಿ ಆತನ ಬಿಡುಗಡೆಗೆ ಕುಟುಂಬದಿಂದ 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ದೆಹಲಿ ಪೊಲೀಸ್​ ಹೆಡ್​ ಕಾನ್ಸ್​ಟೇಬಲ್​ನನ್ನು ಬಂಧಿಸಲಾಗಿದ್ದು, ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಪೊಲೀಸ್​ ಠಾಣೆಯೊಳಗೆ ರಕ್ಷಿಸಲಾಗಿದೆ.

    ಜಾಮಿಯಾ ನಗರ ಪೊಲೀಸ್​ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಹೆಡ್​ ಕಾನ್ಸ್​ಟೇಬಲ್​ನಿಂದ ಈ ಕೃತ್ಯ ನಡೆದಿದೆ. ಮೇ 25ರಂದು ದೆಹಲಿಯ ಸನ್​ಲೈಟ್​ ಕಾಲನಿಯ ಮಹಿಳೆಯೊಬ್ಬಳು ಪೊಲೀಸ್​ ಠಾಣೆಗೆ ತೆರಳಿ ತನ್ನ ಸಹೋದರ ಕಿಡ್ನ್ಯಾಪ್​ ಆಗಿರುವ ಬಗ್ಗೆ ಮತ್ತು ಬಿಡುಗಡೆಗೆ ಮೂರು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ದೂರು ನೀಡುತ್ತಾಳೆ.

    ಇದಾದ ಬಳಿಕ ಫೋನ್​ ಕರೆ ಮಾಡುವ ಆಕೆ ನಾನೀಗ ಒಂದು ಲಕ್ಷ ರೂ. ಹಣವನ್ನು ಹಿಡಿದುಕೊಂಡು ಸಾರಾಯಿ ಕಲೆ ಬಸ್​ ನಿಲ್ದಾಣದ ಬಳಿ ನಿಂತಿದ್ದೇನೆ. ಆದರೆ, ಅವರು 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆಂದು ಹೇಳುತ್ತಾಳೆ.

    ಕರೆಯನ್ನು ಗಂಭೀರವಾಗಿ ಪರಿಗಣಿಸುವ ಪೊಲೀಸರು ತಕ್ಷಣ ಸನ್​ಲೈಟ್​ ಕಾಲನಿಗೆ ತಲುಪುತ್ತಾರೆ. ಕರೆ ಮಾಡಿದ ಭಾರತಿ ಎಂಬಾಕೆ ಅಧಿಕಾರಿಗಳಿಗೆ ಎದುರಾಗುತ್ತಾಳೆ. ಈ ವೇಳೆ ತನ್ನ ಸಹೋದರ ಜವಹರ ಪಾರ್ಕ್​ ನಿವಾಸಿ ಆಗಿರುವ ವರುಣ್​ನನ್ನು ಕೆಲವು ಅಪರಿಚಿತ ವ್ಯಕ್ತಿಗಳು ಕಿಡ್ನ್ಯಾಪ್​ ಮಾಡಿದ್ದಾರೆಂದು ಹೇಳುತ್ತಾಳೆ. ಅಪಹರಣಕಾರರು ಸಹೋದರನ ಮೊಬೈಲ್​ನಿಂದ ವಾಟ್ಸ್​ಆ್ಯಪ್​ ಕಾಲ್​ ಮೂಲಕ ಕರೆ ಮಾಡಿದ್ದಾಗಿ ಹೇಳುತ್ತಾಳೆ.

    ಸರಾಯಿ ಕಲೆ ಖಾನ್​​ ಸ್ಥಳಕ್ಕೆ 3 ಲಕ್ಷ ರೂ. ಹಣವನ್ನು ತರುವಂತೆ ಅಪಹರಣಕಾರರು ಒತ್ತಾಯಿಸಿರುತ್ತಾರೆ. ಅಲ್ಲದೆ, ಬೇರೊಂದು ಮೊಬೈಲ್​ ನಂಬರ್​ನಿಂದಲೂ ಅಪಹರಣಕಾರರು ಕರೆ ಮಾಡಿರುತ್ತಾರೆ. ತನಿಖೆ ನಡೆಸಿದ ಅಧಿಕಾರಿಗಳು ಪ್ರಕರಣ ಸಂಬಂಧ ಹೆಡ್​ ಕಾನ್ಸ್​ಟೇಬಲ್​ ಮತ್ತು ಆತನ ಜತೆಗಾರರನ್ನು ಬಂಧಿಸುತ್ತಾರೆ.

    ವಿಚಾರಣೆ ವೇಳೆ ಆರೋಪಿ ಹೆಡ್​ ಕಾನ್ಸ್​ಟೇಬಲ್​ ರಾಕೇಶ್​ ಕುಮಾರ್ ಎಲ್ಲವನ್ನು ಬಾಯ್ಬಿಟ್ಟಿದ್ದಾನೆ. ಮಾಹಿತಿದಾರ ಅಮೀರ್​ ಖಾನ್​, ರಾಕೇಶ್​ಗೆ ಒಮ್ಮೆ ಕರೆ ಮಾಡಿ ಆತನ ಸ್ನೇಹಿತನ ಗ್ಯಾಂಗ್​ ಒಂದು ಗಾಂಧಿನಗರದ ನಿವಾಸಿಯೊಬ್ಬರ ಮನೆಯಲ್ಲಿ ಸುಲಿಗೆ ಮಾಡಿರುವುದಾಗಿ ತಿಳಿಸುತ್ತಾನೆ. ಗ್ಯಾಂಗ್​ ಸದಸ್ಯರಲ್ಲಿ ಒಬ್ಬನಾದ ವರುಣ್​ ತನ್ನ ಪಾಲಿನ ಸುಮಾರು 1.5 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೋಗಿರುವುದಾಗಿ ಹೇಳುತ್ತಾನೆ.

    ವರಣ್​ನನ್ನು ಬಂಧಿಸಿದರೆ ದರೋಡೆ ಹಣವನ್ನು ವಶಕ್ಕೆ ಪಡೆಯಬಹುದೆಂಬ ದುರಾಸೆಗೆ ರಾಕೇಶ್​ ಬೀಳುತ್ತಾನೆ. ಈಗಾಗಲೇ ದರೋಡೆ ಸಂಬಂಧ ಗಾಂಧಿನಗರ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಇದೇ ನೆಪ ಇಟ್ಟುಕೊಂಡು ಆತನನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ.

    ಸದ್ಯ ರಾಕೇಶ್​ನನ್ನು ಬಂಧಿಸಲಾಗಿದ್ದು, ವರುಣ್​ನನ್ನು ರಕ್ಷಿಸಿ ಜಾಮಿಯಾ ನಗರ ಪೊಲೀಸ್​ ಠಾಣೆಗೆ ಕರೆದು ತರಲಾಗಿದೆ. ವರುಣ್​ನನ್ನು ಸಹ ಸುಲಿಗೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಆತನ ಮನೆಯಲ್ಲಿ ಸುಲಿಗೆ ಮಾಡಿದ್ದ 1 ಲಕ್ಷ ರೂ. ಹಣವನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ. (ಏಜೆನ್ಸೀಸ್​)

    ಹೀಗೂ ಇರ್ತಾರೆ! ತಲೆಬುರುಡೆ ಓಪನ್‌ ಮಾಡಿ ಕತ್ತರಿ ಹಾಕಿದರೂ ಜೋಕ್‌ ಮಾಡುತ್ತಿದ್ದ ರೋಗಿ…

    ಉಸಿರಾಟದ ಸಮಸ್ಯೆ ಇದ್ದರೂ ರಜೆ ಕೊಟ್ಟಿಲ್ಲವೆಂದು ಆಕ್ಸಿಜನ್‌ ಸಿಲಿಂಡರ್‌ ಸಹಿತ ಬ್ಯಾಂಕ್‌ಗೆ ಬಂದ ಉದ್ಯೋಗಿ!

    ಬಿಎಸ್​ವೈ ವಿರುದ್ಧ ಬಿಜೆಪಿಯೊಳಗೇ ಪ್ರತಿಪಕ್ಷ; ಸಿಎಂ ಬದಲಾವಣೆ ನೆಪದಲ್ಲಿ ಕಮಲವೇ ಖೆಡ್ಡಕ್ಕೆ, ಯಡಿಯೂರಪ್ಪ ಬೆನ್ನಿಗೆ ನಿಂತ ಡೆಲ್ಲಿ ವರಿಷ್ಠರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts