More

    ಮುಖ್ಯ ಕಾರ್ಯದರ್ಶಿ ಹಲ್ಲೆ ಆರೋಪ: ಸಿಎಂ ಕೇಜ್ರಿವಾಲ್, ಡಿಸಿಎಂ ಸಿಸೋಡಿಯ, 9 ಶಾಸಕರು ಡಿಸ್ಚಾರ್ಜ್

    ನವದೆಹಲಿ : 2018 ರಲ್ಲಿ ಆಗಿನ ದೆಹಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್​ ಮೇಲೆ ಹಲ್ಲೆ ಮಾಡಿದ ಆರೋಪವನ್ನೆದುರಿಸುತ್ತಿದ್ದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಮತ್ತು ಡೆಪ್ಯುಟಿ ಸಿಎಂ ಮನೀಶ್ ಸಿಸೊಡಿಯ ಅವರನ್ನು ಸ್ಪೆಷಲ್​​ ಕೋರ್ಟ್​ ಡಿಸ್ಚಾರ್ಜ್​​ ಮಾಡಿದೆ. ಇವರೊಂದಿಗೆ ಇನ್ನೂ 9 ಆಮ್​ ಆದ್ಮಿ ಪಾರ್ಟಿ(ಎಎಪಿ) ಶಾಸಕರಿಗೆ ಆರೋಪದಿಂದ ಮುಕ್ತಿ ನೀಡಿರುವ ದೆಹಲಿಯ ವಿಶೇಷ ಎಂಪಿ/ಎಂಎಲ್​​​ಎ ಕೋರ್ಟ್​, ಶಾಸಕರಾದ ಅಮಾನತುಲ್ಲಾ ಖಾನ್​ ಮತ್ತು ಪ್ರಕಾಶ್​ ಜರ್ವಾಲ್ ವಿರುದ್ಧ ಮಾತ್ರ ಆರೋಪಪಟ್ಟಿ ಸಲ್ಲಿಸಬೇಕೆಂದು ದೆಹಲಿ ಪೊಲೀಸರಿಗೆ ಆದೇಶಿಸಿದೆ.

    ಸಿಎಂ ಕೇಜ್ರಿವಾಲ್​ ಮತ್ತು ಇತರ 12 ಜನರ ವಿರುದ್ಧ ಮಾಜಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರು ದೂರು ಸಲ್ಲಿಸಿದ್ದರು. ಫೆಬ್ರವರಿ 19, 2018 ರ ಮಧ್ಯರಾತ್ರಿ ಕೇಜ್ರಿವಾಲ್ ಅವರ ನಿವಾಸದಲ್ಲಿ ಸಭೆಗೆ ಆಹ್ವಾನಿಸಿದ್ದು, ಆ ಸಮಯದಲ್ಲಿ ಎಎಪಿ ಶಾಸಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಅವರು ಹೇಳಿದ್ದರು. ಈ ದೂರಿನ ಮೇರೆಗೆ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಅಡಿಷನಲ್ ಚೀಫ್​ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಸಚಿನ್​​ ಗುಪ್ತ ಈ ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ: ಶಿಮ್ಲಾ ಹೆದ್ದಾರಿಯಲ್ಲಿ ಭೂಕುಸಿತ : ಸಿಲುಕಿಕೊಂಡಿರುವ ವಾಹನಗಳು

    ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರೊಂದಿಗೆ ಶಾಸಕರಾದ ಅಮಾನತುಲ್ಲಾ ಖಾನ್, ಪ್ರಕಾಶ್ ಜರ್ವಾಲ್, ನಿತಿನ್ ತ್ಯಾಗಿ, ರಿತುರಾಜ್ ಗೋವಿಂದ್, ಸಂಜೀವ್ ಝಾ, ಅಜಯ್ ದತ್, ರಾಜೇಶ್ ರಿಷಿ, ರಾಜೇಶ್ ಗುಪ್ತ, ಮದನ್ ಲಾಲ್, ಪರ್ವೀನ್ ಕುಮಾರ್ ಮತ್ತು ದಿನೇಶ್ ಮೋಹನಿಯಾ ಅವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. (ಏಜೆನ್ಸೀಸ್)

    ಟಿ20 ವರ್ಲ್ಡ್​ ಕಪ್​ ನಂತರ ಟೀಂ ಇಂಡಿಯಾಗೆ ರವಿ ಶಾಸ್ತ್ರಿ ಗುಡ್​ಬೈ?!

    ಹೃದಯದ ಆರೋಗ್ಯಕ್ಕೆ, ರಕ್ತದ ಪ್ರಕೃತಿ ಸುಧಾರಿಸಲು ಮಾರ್ಜಾಲಾಸನ ಮಾಡಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts