More

    ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಕೊವಿಡ್​-19 ಟೆಸ್ಟ್ ರಿಪೋರ್ಟ್​ನಲ್ಲಿ ಹೊರಬಿದ್ದ ಸತ್ಯವೇ ಬೇರೆ…

    ನವದೆಹಲಿ: ಕೊವಿಡ್​-19 ತಪಾಸಣೆಗೆ ಒಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ವೈದ್ಯಕೀಯ ವರದಿ ಹೊರಬಿದ್ದಿದೆ.

    ಭಾನುವಾರ ಮಧ್ಯಾಹ್ನದಿಂದಲೂ ಸಣ್ಣ ಜ್ವರ, ಗಂಟಲು ನೋವಿನಿಂದ ಬಳಲುತ್ತಿದ್ದ ಅವರು ಒಂದು ದಿನ ಕಾದು, ಇಂದು ಬೆಳಗ್ಗೆ ಕೊವಿಡ್​-19 ಟೆಸ್ಟ್​ಗೆ ಒಳಗಾಗಿದ್ದರು. ಅವರಲ್ಲಿ ಕರೊನಾ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ.

    ಈ ಬಗ್ಗೆ ಆಪ್​ ಶಾಸಕ ರಾಘವ್​ ಚಾಧಾ ಅವರು ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರ ಮೆಡಿಕಲ್​ ರಿಪೋರ್ಟ್​ನಲ್ಲಿ ಕೊವಿಡ್​-19 ನೆಗೆಟಿವ್​ ಬಂದಿದೆ. ಆ ದೇವರ ದಯೆ ಎಂದು ಹೇಳಿದ್ದಾರೆ.

    ಅರವಿಂದ್ ಕೇಜ್ರಿವಾಲ್​ಗೆ ಮೊದಲಿನಿಂದಲೂ ಅಸ್ತಮಾ, ಕೆಮ್ಮಿನ ಸಮಸ್ಯೆಯಿದೆ. ಭಾನುವಾರ ಜ್ವರ, ಗಂಟಲು ನೋವು ಕಾಣಿಸಿಕೊಂಡಾಗಿನಿಂದ ಅವರು ಸೆಲ್ಫ್ ಕ್ವಾರಂಟೈನ್​ನಲ್ಲಿದ್ದರು. ಹಾಗೇ ಎಲ್ಲ ಸಭೆ, ಮೀಟಿಂಗ್​​ಗಳನ್ನೂ ರದ್ದು ಮಾಡಿದ್ದರು. ಕರೊನಾ ಇರಬಹುದು ಎಂಬ ಬಲವಾದ ಶಂಕೆ ಇತ್ತು. ಅದರಂತೆ ವೈದ್ಯರ ಸಲಹೆಯ ಮೇರೆಗೆ ಸೋಮವಾರ ಒಂದು ದಿನ ತಡೆದು ಮಂಗಳವಾರ ಬೆಳಗ್ಗೆ ತಪಾಸಣೆಗೆ ಒಳಗಾಗಿದ್ದರು. ಇದೀಗ ಕರೊನಾ ಸೋಂಕು ಇಲ್ಲ, ಸಾಮಾನ್ಯ ಜ್ವರ ಎಂಬ ಸತ್ಯ ಹೊರಬಿದ್ದಿದೆ.

    ದೆಹಲಿಯಲ್ಲಿ ಒಟ್ಟು 29,943 ಮಂದಿಗೆ ಕರೊನಾ ದೃಢಪಟ್ಟಿದ್ದು, 874 ಮಂದಿ ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts