More

    ರೈತರ ‘ದೆಹಲಿ ಚಲೋ’: ಶಂಭು ಗಡಿ ಉದ್ವಿಗ್ನ..ಅಶ್ರುವಾಯು ಸಿಡಿಸಿ ಪರಿಸ್ಥಿತಿ ಹತೋಟಿಗೆ ತಂದ ಪೊಲೀಸರು

    ನವದೆಹಲಿ: ಕನಿಷ್ಠ ಬೆಂಬಲ ಬೆಲ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು ಹಮ್ಮಿಕೊಂಡಿರುವ ದೆಹಲಿ ಚಲೋ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಹರಿಯಾಣದ ಗಡಿಯಲ್ಲಿ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆಯಾಗಿದ್ದು, ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಕಡೆಗೆ ಪೊಲೀಸರು ಡ್ರೀನ್​ಗಳ ಮೂಲಕ ಅಶ್ರುವಾಯು ಶೆಲ್​ಗಳನ್ನು ಸಿಡಿಸಿ ಪರಿಸ್ಥಿತಿ ಹತೋಟಿಗೆ ತಂದರು.

    ಇದನ್ನೂ ಓದಿ: ಮೀನು ಹಿಡಿಯುವಾಗ ಫಿಶರ್​ಮ್ಯಾನ್​ಮೇಲೆ ಶಾರ್ಕ್​ಡೆಡ್ಲಿ ಅಟ್ಯಾಕ್.. ಆಮೇಲೇನಾಯ್ತು?​​

    ಪಂಜಾಬ್‌ನ ರೈತರು ಹರಿಯಾಣದ ಅಂಬಾಲಾ ಸಮೀಪವಿರುವ ಶಂಭು ಗಡಿಯಿಂದ ಬುಧವಾರ ರಾಷ್ಟ್ರ ರಾಜಧಾನಿಗೆ ಪ್ರತಿಭಟನಾ ಮೆರವಣಿಗೆ ಪುನರಾರಂಭಿಸಲು ಸಿದ್ಧರಾಗಿದ್ದರು. ಆದರೆ ಕೇಂದ್ರ ಸರ್ಕಾರ ಮಾತುಕತೆಗೆ ಸಿದ್ಧವೆಂದರೂ ಪ್ರತಿಭಟನೆ ಮುಂದುವರಿಸಿದ್ದದ್ದರಿಂದ ಪೊಲೀಸರು ಸಾರ್ವಜನಿಕರಿಗೆ ಆಗುವ ತೊಂದರೆ ನಿವಾರಿಸಲು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿ ಅವರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು. ಕಡೆಗೆ ಅಶ್ರುವಾಯು ಶೆಲ್ ಹೊತ್ತ ಡ್ರೋನ್​​ ಗಳು ಪ್ರವೇಶವಾಗುತ್ತಿದ್ದಂತೆ ಪ್ರತಿಭಟನಾಕಾರರು ಅವುಗಳನ್ನು ಉರುಳಿಸಲು ಗಾಳಿಪಟ ಹಾರಿಸಿದರು.

    ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಬುಧವಾರ ರೈತರಿಗೆ ಮನವಿ ಮಾಡಿದ್ದು ರಚನಾತ್ಮಕ ಸಂವಾದದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಸಾಮಾನ್ಯ ಜನರ ಸಾಮಾನ್ಯ ಜೀವನಕ್ಕೆ ಅಡ್ಡಿಪಡಿಸುವ ಕ್ರಮಗಳನ್ನು ತಪ್ಪಿಸುವಂತೆ ಅವರು ಒತ್ತಾಯಿಸಿದ್ದನ್ನು ಸ್ಮರಿಸಬಹುದು.

    ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್, ಸರ್ಕಾರದ ವಿಧಾನವನ್ನು ಟೀಕಿಸಿದ್ದು, ಇದು ರೈತರ ಬೇಡಿಕೆಗಳಿಗಿಂತ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದರು. “ಇದೆಲ್ಲವನ್ನೂ ನಿಲ್ಲಿಸಲು ಮತ್ತು ಸಕಾರಾತ್ಮಕ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ. ನಾವು ನಿನ್ನೆ ಮಾತುಕತೆಗೆ ಸಿದ್ಧರಿದ್ದೆವು. ಇಂದಿಗೂ ಅದಕ್ಕೆ ಸಿದ್ಧರಿದ್ದೇವೆ” ಎಂದು ಪಂಧರ್ ಹೇಳಿದರು.

    ‘ಉಕ್ರೇನ್​ ಯುದ್ಧದಿಂದ ಹಿಂದೆ ಸರಿದರೆ ಪುತಿನ್ ಹತ್ಯೆ’: ಮಸ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts